Jailer: ಜೈಲರ್ ಚಿತ್ರಕ್ಕೆ ವಿನಾಯಕನ್ ಪಡೆದ ಸಂಭಾವನೆ ಎಷ್ಟು…? ಸಣ್ಣ ಸಂಭಾವನೆ ಪಡೆದ ವರ್ಮನ್.
ವಿನಾಯಕನ್ ರವರ ಜೈಲರ್ ಸಿನಿಮಾದ ಸಂಭಾವನೆ ಬಗ್ಗೆ ಉಹಾಪೋಹೆ, ಸ್ಪಷ್ಟನೆ ನೀಡಿದ ಖಳನಟ.
jailer Vinayakan: ವಿನಾಯಕನ್ (Vinayakan) ಅವರು ಮಲಯಾಳಂ ಚಿತ್ರರಂಗದ ಖ್ಯಾತ ನಟ. ತಿಮಿರು ಮತ್ತು ಮಾರಿಯನ್ ತಮಿಳು ಸಿನಿಮಾದಲ್ಲಿ ನಟಿಸುವ ಮೂಲಕ ತಮಿಳು ಚಿತ್ರರಂಗಕ್ಕೂ ಪರಿಚಿತರಾದರು. ಕೇರಳದಲ್ಲಿ ಗಾಯಕ ಮತ್ತು ಸಂಗೀತ ಸಂಯೋಜಕರಾಗಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವುದರ ಜೊತೆಗೆ ನಟನೆಗಾಗಿ ಹಲವಾರು ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ.
ಇತ್ತೀಚಿಗೆ ಸೂಪರ್ ಸ್ಟಾರ್ ರಜಿನಿಕಾಂತ್ (Rajinikanth) ಅಭಿನಯದ ಜೈಲರ್ ಸಿನಿಮಾ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಬ್ಲಾಕ್ಬಸ್ಟರ್ ಆಯಿತು. ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ ಈ ಸಿನಿಮಾದ ಪ್ರತಿಯೊಂದು ಪಾತ್ರವು ಕೂಡ ವೀಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. ಅದರಲ್ಲೂ ಖಳನಾಯಕ ವಿನಾಯಕನ್ ವಿಭಿನ್ನ ಮ್ಯಾನರಿಸಂ ಮೂಲಕ ಅಬ್ಬರಿಸಿದ್ದಾರೆ.

ಅಭಿಮಾನಿಗಳನ್ನು ಹೆಚ್ಚಿಸಿಕೊಂಡ ವಿನಾಯಕನ್
ವಿನಾಯಕನ್ ಅವರು ಈಗಾಗಲೇ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದು, ಜೈಲರ್ ಸಿನಿಮಾ ಅವರನ್ನು ಇನ್ನಷ್ಟು ಎತ್ತರದ ಸ್ಥಾನಕ್ಕೆ ಕರೆದೊಯ್ದಿದೆ. ವರ್ಮನ್ ಪಾತ್ರಕ್ಕಾಗಿ ಒಂದು ವರ್ಷ ಮೀಸಲಿಟ್ಟಿದ್ದೆ ಎಂದು ಅವರು ತಿಳಿಸಿದ್ದಾರೆ. ನಾನೀಗ ಜೈಲರ್ ನಂತಹ ಬ್ಲಾಕ್ಬಸ್ಟರ್ ಸಿನಿಮಾ ಮಾಡಿದ್ದೇನೆ. ಹೀಗಾಗಿ ಮುಂದಿನ ಸಿನಿಮಾ ಆಯ್ಕೆ ಮಾಡುವಾಗ ತುಂಬಾ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.
ವಿನಾಯಕನ್ ಅವರ ಜೈಲರ್ ಸಿನಿಮಾದ ಸಂಭಾವನೆ
ಜೈಲರ್ ಸಿನಿಮಾಗಾಗಿ ವಿನಾಯಕನ್ ಅವರು 35 ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. ಅವರ ಅಭಿನಯಕ್ಕೆ ಈ ಹಣ ತುಂಬಾ ಕಡಿಮೆಯಾಗಿದೆ. ಸಾಕಷ್ಟು ವರದಿಗಳು ವೈರಲ್ ಆದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ವಿನಾಯಕನ್, ವರದಿಗಳನ್ನು ಅಲ್ಲಗೆಳೆದಿದ್ದಾರೆ.

35 ಲಕ್ಷ ರೂ. ಪಡೆದಿದ್ದೇನೆ ಎಂಬ ವದಂತಿ ತಪ್ಪು. ಅದಕ್ಕಿಂತ ಮೂರು ಪಟ್ಟು ಹೆಚ್ಚು ಹಣವನ್ನು ಪಡೆದಿದ್ದೇನೆ ಎಂದು ತಿಳಿಸಿದ್ದಾರೆ. ನನಗೆ ಮೂರು ಪಟ್ಟು ಹೆಚ್ಚು ಸಂಬಳ ನೀಡಲಾಗಿದೆ. ನಾನು ಕೇಳಿದ್ದಷ್ಟು ಹಣವನ್ನು ನಿರ್ಮಾಪಕರು ನಿಖರವಾಗಿ ಕೊಟ್ಟರು. ಸೆಟ್‌ಗಳಲ್ಲಿ ಸಿಬ್ಬಂದಿ ನನ್ನನ್ನು ಚೆನ್ನಾಗಿ ನೋಡಿಕೊಂಡರು ಎಂದು ಅವರು ಬಹಿರಂಗಪಡಿಸಿದರು.ಒಟ್ಟಾರೆಯಾಗಿ ಇವರು ಜೈಲರ್ ನಲ್ಲಿ ಅಭಿನಯಿಸಿದ ರೀತಿ ಅಭಿಮಾನಿಗಳ ಗಮನ ಸಳೆದಿದೆ.