Jailer Movie: ಜೈಲರ್ ಮ್ಯೂಸಿಕ್ ಡೈರೆಕ್ಟರ್ ಗಿಫ್ಟ್ ಆಗಿ ಸಿಕ್ಕ ದುಬಾರಿ ಕಾರಿನ ಬೆಲೆ ಎಷ್ಟು…? ಕಾರ್ ಜೊತೆ ಚೆಕ್.

ಜೈಲರ್ ಗೆದ್ದ ಖುಷಿ, ಮ್ಯೂಸಿಕ್ ಡೈರೆಕ್ಟರ್ ಅನಿರುಧ್ ರವಿಚಂದರ್ ಗೆ ಸಿಕ್ತು ದುಬಾರಿ ಕಾರು.

Jailer Movie Success: ಚಿತ್ರರಂಗದಲ್ಲಿ ಸುದ್ದಿ ಮಾಡಿದ ಬ್ಲಾಕ್ ಬಸ್ಟರ್ ಸಿನಿಮಾಗಳ ಪಟ್ಟಿಯಲ್ಲಿ ಜೈಲರ್ (Jailer ) ಕೂಡ ಸೇರಿದೆ. ಹಲವು ದಾಖಲೆಗಳನ್ನು ಸೃಷ್ಟಿಸಿರುವ ಸೂಪರ್​ ಸ್ಟಾರ್ ರಜನಿಕಾಂತ್​ (Rajinikanth) ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಜೈಲರ್ ಸಿನಿಮಾದ ಕ್ರೇಜ್​ ಮುಂದುವರಿದಿದೆ. ಈ ಚಿತ್ರದಲ್ಲಿನ ಪ್ರತಿಯೊಂದು ಹಾಡುಗಳು ಸೂಪರ್ ಹಿಟ್ ಆಗಿದೆ. ಪ್ರೇಕ್ಷಕರ ಪ್ರತಿಕ್ರಿಯೆ ಮತ್ತು ಬಾಕ್ಸ್ ಆಫೀಸ್​ ಸಂಖ್ಯೆ ಮಾತ್ರವಲ್ಲದೇ ಚಿತ್ರ ತಂಡದವರಿಗೆ ನಿರ್ಮಾಪಕರು ನೀಡುತ್ತಿರುವ ಗೌರವ ಕೂಡ ಪ್ರೇಕ್ಷಕರ ಗಮನ ಸೆಳೆದಿದೆ.

Jailer Movie Success
Image Credit: Cartoq

Jailer ಚಿತ್ರದಲ್ಲಿ ಅಭಿನಯಿಸಿದವರಿಗೆ ಬಿಗ್ ಆಫರ್ 
ದಕ್ಷಿಣ ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ಕಲಾನಿಧಿ ಮಾರನ್​ ಅವರ ಸನ್​ ಪಿಕ್ಚರ್ಸ್​ ರಜನಿಕಾಂತ್​ ನಟನೆಯ Jailer​ ಸಿನಿಮಾ ನಿರ್ಮಿಸಿದ್ದು, ಸದ್ಯ ಯಶಸ್ಸಿನ ಅಲೆಯಲ್ಲಿ ತೇಲುತ್ತಿದೆ. ಚಿತ್ರ ಗೆದ್ದ ಖುಷಿಯಲ್ಲಿ ಚಿತ್ರ ತಂಡದವರನ್ನು ಗುರುತಿಸಿ ಕಲಾನಿಧಿ ಮಾರನ್ ಅವರು ಕೊಡುಗೆಗಳನ್ನು ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ .

ನಟ, ನಿರ್ದೇಶಕ ಹಾಗು ಮ್ಯೂಸಿಕ್​ ಡೈರೆಕ್ಟರ್​ ಗೆ ಗಿಫ್ಟ್ ಹಾಗು ಚೆಕ್​ ನೀಡಿ ಗೌರವ 

Jailer ಸಿನಿಮಾದ ನಿರ್ಮಾಪಕರಾದ ಕಲಾನಿಧಿ ಮಾರನ್ ರವರು ಚಿತ್ರದ Actor Rajinikanth​ ಅವರಿಗೆ ಹೊಸ BMW X7 ಜೊತೆಗೆ ಚೆಕ್​ ವಿತರಿಸಿದ್ದಾರೆ. ಚಿತ್ರದ ಲಾಭದ ಹಂಚಿಕೆಯ ಚೆಕ್​ ಅದಾಗಿತ್ತು. ಇನ್ನು ಸಿನಿಮಾಗೆ action​ ಕಟ್​ ಹೇಳಿರುವ ನೆಲ್ಸನ್​ ದಿಲೀಪ್​ ಕುಮಾರ್​ ಅವರಿಗೆ ಹಣದ ಜೊತೆಗೆ Porsche car ನೀಡಲಾಗಿದೆ.

ಗಾಯಕ, ಮ್ಯೂಸಿಕ್​ ಡೈರೆಕ್ಟರ್​ ಅನಿರುಧ್ ರವಿಚಂದರ್ ಅವರಿಗೆ ನಿರ್ಮಾಪಕ ಕಲಾನಿಧಿ ಮಾರನ್ ಅವರು ಹೊಸ Porsche car ಜೊತೆಗೆ ಚೆಕ್​ ವಿತರಿಸಿದ್ದಾರೆ. ಇನ್ನು ಈ ಕಾರಿನ ಬೆಲೆ ಸುಮಾರು 2 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ಚೆಕ್​ ಅಮೌಂಟ್​ ಅನ್ನು ಬಹಿರಂಗಪಡಿಸಿಲ್ಲ. ಚೆಕ್​​ ನೀಡಿದ ಮತ್ತು ಕಾರ್​ ಗಿಫ್ಟ್​ ಮಾಡಿದ ಕುತೂಹಲಕಾರಿ ವಿಷಯವನ್ನು ಸನ್​ ಪಿಕ್ಚರ್ಸ್ ಸೋಷಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

Jailer producer hands out cheque to Anirudh Ravichander
Image Credit: Hindustantimes

ಮಾಹಿತಿ ಹಂಚಿಕೊಂಡ ಸನ್​ ಪಿಕ್ಚರ್ಸ್

ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ X (ಹಿಂದಿನ ಟ್ವಿಟರ್​) ನಲ್ಲಿ ಮ್ಯೂಸಿಕ್​ ಡೈರೆಕ್ಟರ್​, ಖ್ಯಾತ ಗಾಯಕ ಅನಿರುಧ್ ರವಿಚಂದರ್​ ಅವರಿಗೆ ಸನ್​ ಪಿಕ್ಚರ್ಸ್​​ನ ಕಲಾನಿಧಿ ಮಾರನ್​ ಅವರು ಚೆಕ್​ ವಿತರಿಸುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಕ್ಯಾಪ್ಷನ್​ನಲ್ಲಿ, ”ಅನಿರುಧ್​ ರವಿಚಂದರ್​ ಅವರನ್ನು ಕಲಾನಿಧಿ ಮಾರನ್​ ಅಭಿನಂದಿಸಿದರು ಮತ್ತು ಚೆಕ್​ ಹಸ್ತಾಂತರಿಸಿದರು. Jailer​ ಯಶಸ್ಸನ್ನು ಸೆಲೆಬ್ರೇಟ್​ ಮಾಡಲಾಗುತ್ತಿದೆ” ಎಂದು ಬರೆದುಕೊಂಡಿದ್ದಾರೆ.

ಅಲ್ಲದೇ ಹೊಚ್ಚ ಹೊಸ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡುತ್ತಿರುವ ಕ್ಷಣವನ್ನು ಸಹ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಎರಡೂ ಕ್ಷಣಗಳ ಫೋಟೋ, ವಿಡಿಯೋಗಳು ಆನ್​ಲೈನ್​​ನಲ್ಲಿ ಸದ್ದು ಮಾಡುತ್ತಿವೆ. Jailer ಸಿನಿಮಾ ನಿರ್ಮಾಪಕರು ಮ್ಯೂಸಿಕ್​ ಡೈರೆಕ್ಟರ್​ ಅನಿರುಧ್ ರವಿಚಂದರ್​ ಅವರಿಗೆ ಮಾತ್ರವಲ್ಲದೇ ಚಿತ್ರಕ್ಕೆ ಸಂಬಂಧಿಸಿದ ಪ್ರಮುಖ ವ್ಯಕ್ತಿಗಳಿಗೂ ಈಗಾಗಲೇ ಉಡುಗೊರೆಗಳನ್ನು ನೀಡಿದ್ದಾರೆ.

Leave A Reply

Your email address will not be published.