Jawan Box Office: KGF ದಾಖಲೆ ಮುರಿದ ಜವಾನ್, ಎರಡು ದಿನದಲ್ಲಿ ದಾಖಲೆಯ ಕಲೆಕ್ಷನ್ ಮಾಡಿದ SRK ಜವಾನ್.
KGF ಚಿತ್ರದ ದಾಖಲೆ ಮುರಿದು ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಸೃಷ್ಟಿಮಾಡಿದ ಜವಾನ್.
Jawan Collection Update: ನಟ ಶಾರುಖ್ ಖಾನ್ (Shah Rukh Khan) ಮತ್ತು ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ (Atlee Kumar) ಜೋಡಿಯ ಜವಾನ್ ಚಿತ್ರ ಬಿಡುಗಡೆಯಾಗಿ ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಿದ್ದು, ದಾಖಲೆಯ ಗಳಿಕೆ ಕಂಡಿದೆ. ತಮಿಳು ಸಿನಿಮಾ ಡೈರೆಕ್ಟರ್ ಅಟ್ಲಿ (Atlee) ನಿರ್ದೇಶನದ ಮೊದಲ ಬಾಲಿವುಡ್ ಸಿನಿಮಾ ಜವಾನ್ (Jawan) ಬಾಕ್ಸ್ ಆಫೀಸ್ Collection ಕೊಳ್ಳೆ ಹೊಡೆಯುತ್ತಿದ್ದು, ಜವಾನ್ ಸಿನಿಮಾ ಬಾಲಿವುಡ್ನಲ್ಲಿ ಆಲ್ ಟೈಮ್ ಬಿಗ್ಗೆಸ್ಟ್ ಓಪನರ್ ಎಂಬ ಕೀರ್ತಿಗೆ ಭಾಜನವಾಗಿದೆ.
ಹಿಂದಿಯಲ್ಲಿ ಮೊದಲ ದಿನ ಸಿನಿಮಾ ಈ ರೀತಿ ದಾಖಲೆ ಮಾಡಿದ್ದು ಇದೇ ಮೊದಲು ಎನ್ನಲಾಗಿದೆ.ಈ ಸಿನಿಮಾದಲ್ಲಿ ಶಾರುಖ್ ಖಾನ್ ಅವರ ಜೊತೆ ವಿಜಯ್ ಸೇತುಪತಿ, ನಯನತಾರಾ, ದೀಪಿಕಾ ಪಡುಕೋಣೆ, ಪ್ರಿಯಾ ಮಣಿ, ಸಾನ್ಯಾ ಮಲ್ಹೋತ್ರಾ, ಗಿರಿಜಾ, ಸಂಜೀತಾ ಭಟ್ಟಾಚಾರ್ಯ, ಆಲಿಯಾ ಖುರೇಷಿ ನಟಿಸಿದ್ದಾರೆ.

ಮೊದಲ ದಿನವೇ ಅತ್ಯಧಿಕ ಕಲೆಕ್ಷನ್ ಕಂಡ ಮೊದಲ ಸಿನಿಮಾ ಜವಾನ್
ಜವಾನ್ ಚಿತ್ರ ಮೊದಲ ದಿನ ಭರ್ಜರಿ 65 ಕೋಟಿ ಕಲೆಕ್ಷನ್ ಮಾಡಿದ್ದು, ಆ ಮೂಲಕ ಇಲ್ಲಿಯವರೆಗೆ ಹಿಂದಿ ಚಿತ್ರರಂಗದಲ್ಲಿ ಮೊದಲ ದಿನ ಅತ್ಯಧಿಕ ಗಳಿಕೆ ಕಂಡ ಮೊದಲ ಸಿನಿಮಾ ಜವಾನ್ ಆಗಿರುತ್ತದೆ ಎಂದು ಖ್ಯಾತ ಬಾಕ್ಸ್ ಆಫೀಸ್ ತಜ್ಞ ತರಣ್ ಆದರ್ಶ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಜವಾನ್ ಮೊದಲ ದಿನದ ಗಳಿಕೆ ಕುರಿತು ತರಣ್ ಆದರ್ಶ್ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು ಜವಾನ್ ಮೊದಲ ದಿನವೇ ಭರ್ಜರಿ ಸಿಕ್ಸರ್ ಹೊಡೆದಿದ್ದು, ಬಾಲ್ ಕ್ರೀಡಾಂಗಣದ ಹೊರಗೆ ಹಾರಿದೆ. ಭಾರತದಲ್ಲಿ ಎಲ್ಲಾ ಹಿಂದಿನ ದಾಖಲೆಗಳ ಮುರಿದು ಬಿಗ್ಜೆಸ್ಟ್ ಓಪನರ್ ಎನಿಸಿಕೊಂಡಿದೆ ಎಂದು ಹೇಳಿದ್ದಾರೆ.

ಜವಾನ್ ಸಿನಿಮಾದ ಗಳಿಕೆ
ಜವಾನ್ ಹಿಂದಿಯಲ್ಲಿ ಮೊದಲ ದಿನ 65.50 ಕೋಟಿ ರೂ ಗಳಿಸಿದ್ದು, ಇದು ಶಾರುಖ್ ರ ಈ ಹಿಂದಿನ ಚಿತ್ರ ಪಠಾಣ್ ಗಿಂತ ಶೇ.19.09 ರಷ್ಟು ಎಂದು ಹೇಳಿದ್ದಾರೆ. ಪಠಾಣ್ ಮೊದಲ ದಿನ 55 ಕೋಟಿ ರೂ ಗಳಿಸಿದ್ದರೆ, ಕನ್ನಡದ ಕೆಜಿಎಫ್2 ಹಿಂದಿ ಭಾಷೆಯಲ್ಲಿ 53.95 ಕೋಟಿ ರೂ ಗಳಿಸಿತ್ತು.
ಅಂತೆಯೇ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಅವರ ವಾರ್ ಚಿತ್ರ 51.60 ಕೋಟಿ ರೂ ಗಳಿಸಿತ್ತು. ಇದು ಈ ವರೆಗಿನ ಹಿಂದಿಯ ಅತ್ಯಧಿಕ ಗಳಿಕೆ ಅಂಕಿ ಅಂಶವಾಗಿದೆ ಎನ್ನಲಾಗಿದೆ. ಅಂತೆಯೇ ಭಾರತದಾದ್ಯಂತ ಎಲ್ಲಾ ಭಾಷೆಗಳಲ್ಲಿ ಸಿನಿಮಾ ಗಳಿಸಿದ ಮೊತ್ತ 75 ಕೋಟಿ ರೂಗಳಾಗಿದ್ದು, ಹಿಂದಿಯಲ್ಲಿ ಮೊದಲ ದಿನ 65 ಕೋಟಿ, ತಮಿಳಿನಲ್ಲಿ 5 ಕೋಟಿ ಹಾಗೂ ತೆಲುಗಿನಲ್ಲಿ 5 ಕೋಟಿ ಗಳಿಸಿದೆ .