Jawan Review: ಶಾರುಖ್ ಖಾನ್ ಜವಾನ್ ಚಿತ್ರ ನೋಡಿದ ಅಭಿಮಾನಿಗಳು ಹೇಳಿದ್ದೇನು…? ಹಿಟ್ ಅಥವಾ ಪ್ಲಾಪ್.
ಜವಾನ್ ಚಿತ್ರವನ್ನ ನೋಡಿದ ಅಭಿಮಾನಿಗಳ ಅಭಿಪ್ರಾಯ.
Jawan Review: ಇಂದು ಸೆಪ್ಟೆಂಬರ್ 07 ರಂದು ಕಿಂಗ್ ಖಾನ್ ಎಂದು ಖ್ಯಾತಿ ಹೊಂದಿದ ಶಾರುಖ್ ಖಾನ್ (Shah Rukh Khan) ಅಭಿನಯದ ‘ಜವಾನ್ʼ (Jawan ) ಸಿನಿಮಾ ವಿಶ್ವದಾದ್ಯಂತ ತೆರೆಕಂಡಿದೆ. ಶಾರುಖ್ ಖಾನ್ ವಿಶೇಷ ಲುಕ್ ನಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದು, ಅಂದುಕೊಂಡಂತೆ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿದೆ.
ಮಧ್ಯರಾತ್ರಿಯಿಂದಲೇ ಶಾರುಖ್ ಅಭಿಮಾನಿಗಳು ಬಿಗ್ ಸ್ಕ್ರೀನ್ ನಲ್ಲಿ ʼಜವಾನ್ʼ ನೋಡಲು ಸಾಲಾಗಿ ನಿಂತಿದ್ದಾರೆ. ಶಾರುಖ್ ಖಾನ್ ʼಪಠಾಣ್ʼ ಸಿನಿಮಾದ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಅದೇ ಜೋಶ್ ನಲ್ಲಿ ‘Jawan ‘ ರಿಲೀಸ್ ಆಗಿದೆ. ಸಿನಿಮಾವನ್ನು ಕಾಲಿವುಡ್ ಸೂಪರ್ ಹಿಟ್ ನಿರ್ದೇಶಕ ಅಟ್ಲಿ (Atlee) ನಿರ್ದೇಶನ ಮಾಡಿರುವುದು ಸಿನಿ ಪ್ರೇಕ್ಷಕರ ಕುತೂಹಲಕ್ಕೆ ಮತ್ತೊಂದು ಕಾರಣವೆಂದೇ ಹೇಳಬಹುದು.

ಮಿಡ್ ನೈಟ್ ನಿಂದಲೇ ಶೋಗಳು ಆರಂಭವಾಗಿವೆ
ಶಾರುಖ್ ಖಾನ್ ಅಭಿನಯದ ʼJawanʼ ಸಿನಿಮಾ ನೋಡಲು ಕಾತುರದಲ್ಲಿದ್ದ ಅಭಿಮಾನಿಗಳು ಮಿಡ್ ನೈಟ್ ನಲ್ಲಿ ಥಿಯೇಟರ್ ಮುಂದೆ ಹಾಜರಾಗಿದ್ದಾರೆ. 07 ಸೆಪ್ಟೆಂಬರ್ ರಂದು ರಿಲೀಸ್ ಎಂದು ತಿಳಿದ್ದಿದ್ದು ಬೆಳಗಾಗುವ ಮುಂಚೆ ಮಿಡ್ ನೈಟ್ ಶೋ ಗೆ ಭಾಗಿಯಾದವರ ಸಂಖ್ಯೆ ಹೆಚ್ಚಾಗಿದೆ. ಮಿಡ್ ನೈಟ್ ನಲ್ಲೆ ಷೋಗಳು ಆರಂಭ ವಾಗಿದ್ದು ಅಭಿಮಾನಿಗಳ ರೆಸ್ಪಾನ್ಸ್ ಪಾಸಿಟಿವ್ ಆಗಿದೆ ಎನ್ನಲಾಗಿದೆ. ಜವಾನ್ ಸಿನಿಮಾದಲ್ಲಿ ಶಾರುಖ್ ಖಾನ್ ವಿಭಿನ್ನ ಹಾಗೂ ವಿವಿಧ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ದೇಶ ಉಳಿಸುವ ʼJawan ʼ ಆಗಿ ಶಾರುಖ್ ಪ್ರೇಕ್ಷಕರಿಗೆ ಇಷ್ಟವಾಗಿದ್ದರೆ .
Jawan ಸಿನಿಮಾದಲ್ಲಿ ಟಾಪ್ ನಾಯಕರದ್ದೇ ಹವಾ
Jawan ಸಿನಿಮಾದ ಮುಖ್ಯಪಾತ್ರದಲ್ಲಿ ಶಾರುಖ್ ಖಾನ್ ಅಭಿನಯಿಸಿದ್ದು, ಇನ್ನು ನಾಯಕಿಯಾಗಿ ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರ ಪಾತ್ರಕ್ಕೂ ಶ್ಲಾಘನೆ ವ್ಯಕ್ತವಾಗಿದೆ. ಸಿನಿಮಾದಲ್ಲಿ ಖಳನಾಯಕನಾಗಿ ʼಕಾಳಿʼ ಪಾತ್ರದಲ್ಲಿ ವಿಜಯ್ ಸೇತುಪತಿ (Vijay Sethupathi) ಕಾಣಿಸಿಕೊಂಡಿದ್ದಾರೆ. ಹೀಗೆ ಅನೇಕ ಅಗ್ರ ನಾಯಕರನ್ನು ಈ ಸಿನಿಮಾದಲ್ಲಿ ನೋಡಬಹುದಾಗಿದೆ.

Jawan ಸಿನಿಮಾದ ಬಗ್ಗೆ ಅನೇಕ ಟ್ವೀಟ್
‘Jawan ‘ ಒಬ್ಬ ವಿನ್ನರ್. ಅಟ್ಲೀ ಅವರು ಮಾಸ್ ಜಗತ್ತಿನಲ್ಲಿ ನಮ್ಮನ್ನು ಮನರಂಜಿಸುತ್ತಾರೆ. ಇದೊಂದು ಅಮೋಘ ಎಂಟರ್ಟೈನರ್. ನೋಡಲೇ ಬೇಕಾದ ಸಿನಿಮಾವೆಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಇದೊಂದು ಬ್ಲಾಕ್ ಬಸ್ಟರ್ ಸಿನಿಮಾವೆಂದಿದ್ದಾರೆ ಮತ್ತೊಬ್ಬರು.ಭಾರತೀಯ ಸಿನಿಮಾರಂಗದಲ್ಲಿ ಇದುವರೆಗೆ ಮಾಡಿದ ಪರಿಪೂರ್ಣ ಆಯಕ್ಷನ್ ಎಂಟರ್ಟೈನರ್. ವಿಎಫ್ ಎಕ್ಸ್ ಅತ್ಯುತ್ತಮ ಗುಣಮಟ್ಟವನ್ನು ಹೊಂದಿದೆ. ಚಿತ್ರದ ಕಥೆ ಅದ್ಭುತವಾಗಿದೆ. 2ನೇ ಹಾಫ್ ನಲ್ಲಿ ಅಸಲಿ ಮಜವಿದೆ ಎಂದು ಒಬ್ಬರು ಸಿನಿಮಾವನ್ನು ಮೆಚ್ಚಿಕೊಂಡು ಟ್ವೀಟ್ ಮಾಡಿದ್ದಾರೆ.
ಯಾವುದೇ ತಪ್ಪಿಲ್ಲದಿರುವ ಹೈ ಆಯಕ್ಷನ್ ಎಂಟರ್ಟೈನರ್ ಆಗಿದೆ. ಇದು ಮಾಸ್ ಮತ್ತು ಕ್ಲಾಸ್ ಮಿಶ್ರಣವಾಗಿದ್ದು, ಕಿಂಗ್ ಖಾನ್ ಮಾಸ್ಟರ್ ಪೀಸ್ ನಟನೆ, ಅಟ್ಲಿ ನಿರ್ದೇಶನದಿಂದ ಸಿನಿಮಾ ಗಮನ ಸೆಳೆಯುತ್ತದೆ. ಅಟ್ಲಿ ಭಾರತೀಯ ಸಿನಿಮಾರಂಗದಲ್ಲಿ ಮುಂದಿನ ದೊಡ್ಡ ವಿಷಯವೆಂದು ಒಬ್ಬರು ಬರೆದುಕೊಂಡಿದ್ದಾರೆ. ಸೂಪರ್ ಮ್ಯೂಸಿಕ್, ಕ್ಲಾಸ್ ನಟನೆ,ಅದ್ಭುತ ಡೈಲಾಗ್ಸ್, ಅಮೋಘ ದೃಶ್ಯದಿಂದ ʼJawan ʼ ಪ್ರೇಕ್ಷಕರನ್ನು ಸೆಳೆದಿಟ್ಟುಕೊಳ್ಳುತ್ತದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಜವಾನ್ ಸಿನಿಮಾದ ಬಗ್ಗೆ ರೀತಿಯಾದ ಅನೇಕ ಟ್ವೀಟ್ ಗಳನ್ನೂ ಕಾಣಬಹುದಾಗಿದೆ.