Donkey Milk: ಜಗತ್ತಿನಲ್ಲೇ ಅತ್ಯಂತ ದುಬಾರಿ ಈ ಕತ್ತೆ ಹಾಲು, ಬೆಲೆ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತದೆ.

ಕತ್ತೆ ಹಾಲನ್ನು ಕುಡಿಯುವುದರಿಂದ ಹಲವು ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದಾಗಿದೆ.

Jenny Donkey Milk: ಪ್ರತಿದಿನ ಹಾಲು ಕುಡಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ ಅದರಲ್ಲೂ ಕತ್ತೆ ಹಾಲು(Donkey Millk) ಇನ್ನಷ್ಟು ಒಳ್ಳೆಯದು ಎಂಬ ಮಾಹಿತಿ ಇಲ್ಲಿದೆ. ಕತ್ತೆ ಹಾಲನ್ನು ಮನೆ ಮನೆಗೂ ಬಂದು ಮಾರಾಟ ಮಾಡುವುದನ್ನು ನಾವು ಕಾಣುತ್ತೇವೆ ಆದ್ರೆ ಹಲವರಿಗೆ ಕತ್ತೆ ಹಾಲಿನ ವೈಶಿಷ್ಟತೆ ಗೊತ್ತಿಲ್ಲ ಆದ್ದರಿಂದ ಮನೆ ಬಾಗಿಲಿಗೆ ಈ ಹಾಲು ಬಂದರು ಖರೀದಿಸುವುದಿಲ್ಲ. ಹಸು, ಎಮ್ಮೆ ಹಾಲಿಗಿಂತ ಬಹಳ ಉತ್ತಮ ಹಾಲು ಕತ್ತೆ ಹಾಲಾಗಿದೆ.

ಕತ್ತೆ ಹಾಲು ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಕಿಲಾರಿ ಪ್ರದೇಶದಲ್ಲಿರುವ ಈ ಕತ್ತೆಯ ಹಾಲು ಅತ್ಯಂತ ದುಬಾರಿ ಆಗಿದ್ದು, ಈ ಹಾಲಿನ ಪ್ರಯೋಜನ ತಿಳಿದ ಜನರು ಒಂದೆರಡು ಚಮಚ ಹಾಲಿಗೆ ಸಾವಿರಾರು ರೂಪಾಯಿ ಖರ್ಚು ಮಾಡುತ್ತಿದ್ದಾರೆ ಎನ್ನಲಾಗಿದೆ.

Jenny Donkey
Image Credit: Littlelongears

ಹಲವು ರೀತಿಯ ಕಾಯಿಲೆಗೆ ಔಷಧಿ ಆಗಿ ಕತ್ತೆ ಹಾಲನ್ನು ಬಳಸಲಾಗುತ್ತದೆ

ಮಹಾರಾಷ್ಟದಲ್ಲಿ ಜೆನ್ನಿ ಎಂಬ ಕತ್ತೆ ಇದ್ದು, ಈ ಕತ್ತೆಯ ಹಾಲಿಗೆ ಅಧಿಕ ಬೇಡಿಕೆ ಇದೆ. ಜನರು ಸಾವಿರಾರು ರೂಪಾಯಿ ಕೊಟ್ಟು ಈ ಕತ್ತೆಯ ಹಾಲನ್ನು ಖರೀದಿ ಮಾಡುತ್ತಿದ್ದಾರೆ. ಈ ಕತ್ತೆಯ ಹಾಲಿನಿಂದ ಕೆಮ್ಮು, ಕಫ ಮತ್ತು ನ್ಯುಮೋನಿಯಾದಂತಹ ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಜನರು ಅದನ್ನು ಖರೀದಿಸಲು ಮುಗಿಬಿದ್ದಿದ್ದಾರೆ.

ಕತ್ತೆ ಹಾಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದಂತೆ. ನೆಗಡಿ, ಕೆಮ್ಮು, ನಾಯಿಕೆಮ್ಮು ಮತ್ತು ನ್ಯುಮೋನಿಯಾವನ್ನು ಉಂಟುಮಾಡುವುದಿಲ್ಲ ಅನ್ನೋದು ಮಾಲೀಕರ ಅಭಿಪ್ರಾಯ. ನೇರವಾಗಿ ದೇಶೀಯ ಮಾರುಕಟ್ಟೆಯಲ್ಲಿಯೂ ಕತ್ತೆ ಹಾಲು ಮಾರಾಟವಾಗುತ್ತಿದೆ. ಲಾತೂರ್ ಹೊರತುಪಡಿಸಿ, ದೇಶದ ಹಲವು ನಗರಗಳಲ್ಲಿ ಕತ್ತೆ ಹಾಲಿಗೆ ಬೇಡಿಕೆ ಹೆಚ್ಚಿದೆ.

ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸಲು ಕತ್ತೆ ಹಾಲನ್ನು ಬಳಸಲಾಗುತ್ತದೆ

ಕೊಚ್ಚಿ ಮತ್ತು ಪುಣೆಯಲ್ಲಿ ಕೂಡ ಕತ್ತೆ ಹಾಲಿಗೆ ಬೇಡಿಕೆ ಕಂಡುಬರುತ್ತಿದೆ. ಈ ಹಾಲಿನಿಂದ ಕಂಪನಿಗಳು ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿವೆ. ಕಂಪನಿಗಳು ಕತ್ತೆ ಹಾಲಿನಿಂದ ಮಹಿಳೆಯರಿಗಾಗಿ ಕ್ರೀಮ್, ಸಾಬೂನು ಮತ್ತು ಶಾಂಪೂಗಳನ್ನು ತಯಾರಿಸುತ್ತಿವೆ. ಕತ್ತೆ ಹಾಲಿನಿಂದ ತಯಾರಿಸಿದ ಉತ್ಪನ್ನಗಳು ಕೂಡ ಸಾಕಷ್ಟು ದುಬಾರಿಯಾಗಿದೆ.

ಉದಾಹರಣೆಗೆ 200 ಮಿಲಿ ಶಾಂಪೂಗೆ 2400 ರೂಪಾಯಿ, 90 ಗ್ರಾಂ ಸಂಧಿವಾತದ ಕ್ರೀಮ್‌ಗೆ 4840 ರೂಪಾಯಿ ಈ ರೀತಿ ಇವುಗಳನ್ನು ಮಾರಾಟ ಮಾಡಲಾಗುತ್ತಿದೆ.ಹೆಂಗಸರು ಕತ್ತೆ ಹಾಲು ಬಳಸುವುದನ್ನು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಎರಡು ಸಾವಿರ ವರ್ಷಗಳ ಹಿಂದೆಯೂ ಬಳಸಲಾಗುತ್ತಿತ್ತು. ತನ್ನ ಸೌಂದರ್ಯಕ್ಕೆ ಹೆಸರಾಗಿದ್ದ ಈಜಿಪ್ಟ್ ರಾಣಿ ಕ್ಲಿಯೋಪಾತ್ರ ಕೂಡ ಕತ್ತೆ ಹಾಲಿನಿಂದ ಸ್ನಾನ ಮಾಡುತ್ತಿದ್ದಳಂತೆ ಎನ್ನಲಾಗಿದೆ .

Jenny Donkey Milk
Image Credit: Kannada Dunia

ಕತ್ತೆ ಹಾಲು ಬಹಳ ದುಬಾರಿ

ಕೃಷಿ ವಿಜ್ಞಾನಿಗಳು ಕೂಡ ಕತ್ತೆ ಹಾಲಿನ ವ್ಯಾಪಾರವನ್ನು ಹೆಚ್ಚಿಸಲು ಮತ್ತು ರೈತರಿಗೆ ಸಹಾಯ ಮಾಡಲು ಸಾಕಷ್ಟು ಸಂಶೋಧನೆಗಳನ್ನು ಮಾಡುತ್ತಿದ್ದಾರೆ. ಹಿಸಾರ್, ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಕತ್ತೆ ಹಾಲಿನ ಕುರಿತು ಸಂಶೋಧನೆ ನಡೆಸಲಾಗಿದೆ. ಈ ವಿಶಿಷ್ಟ ಕತ್ತೆ ಹಾಲಿನ ಬೆಲೆ ಒಂದು ಲೀಟರ್‌ಗೆ 20 ಸಾವಿರ ರೂಪಾಯಿ. ಹಾಗಾಗಿ ಒಂದು ಲೀಟರ್ ಖರೀದಿಸುವುದು ಹಾಗಿರಲಿ ಜನರು 100 ಎಂಎಲ್‌ನ ಸಣ್ಣ ಪ್ಯಾಕೆಟ್‌ಗಳನ್ನು ಕೊಂಡುಕೊಳ್ಳಲು ಜನರು ಕಷ್ಟಪಡುತ್ತಿದ್ದಾರೆ.

Leave A Reply

Your email address will not be published.