AirFiber: ಗಣೇಶನ ಹಬ್ಬಕ್ಕೆ ಉಡುಗೊರೆ ಗ್ರಾಹಕರಿಗೆ ಬಂಪರ್ ಉಡುಗೊರೆ ನೀಡಿದ ಅಂಬಾನಿ, ಹೊಸ ಸೇವೆ ಆರಂಭ.

ಗ್ರಾಹಕರಿಗೆ ಹೊಸ ಸೇವೆ ಬಿಡುಗಡೆ ಮಾಡಲು ಮುಂದಾದ ಜಿಯೋ.

jio AirFiber Service: ಗ್ರಾಹಕರ ನೆಚ್ಚಿನ ಸಿಮ್ ಗಳಲ್ಲಿ Jio ಕಂಪನಿಯ ಸಿಮ್ ಕೊಡ ಒಂದಾಗಿದೆ. ಜಿಯೋ ಸಿಮ್ ತನ್ನದೇ ಆದ ಅನೇಕ ಆಫರ್ ಗಳನ್ನು ಈಗಾಗಲೇ ಹೊಂದಿದ್ದು, ಜಿಯೋ ಹೆಚ್ಚಿನ ಗ್ರಾಹಕರನ್ನು ಇನ್ನು ಉಳಿಸಿಕೊಂಡಿದೆ. Jio ಕಂಪನಿ ತನ್ನ ಗ್ರಾಹಕರ ಅನುಕೂಲಕ್ಕಾಗಿ ಹಲವು ಯೋಜನೆಗನ್ನು ಜಾರಿಗೆ ತರುತ್ತಿದೆ. ಹಾಗೆ ಈ ತಿಂಗಳು ಬರುವ ಗಣೇಶ ಹಬ್ಬಕ್ಕೆ ಜಿಯೋದಿಂದ ಬಂಪರ್ ಆಫರ್ ಚಾಲ್ತಿಗೆ ಬರಲಿದೆ .

jio AirFiber Service
Image Credit: Gizbot

ಜಿಯೋ ಕಂಪನಿಯ ಹೊಸ ಆಫರ್ 
ಸೆಪ್ಟೆಂಬರ್ 19, 2023 ರಂದು ಗಣೇಶ ಚತುರ್ಥಿಯ ಸಂದರ್ಭದಲ್ಲಿ ದೇಶದಲ್ಲಿ Jio AirFiber ಸೇವೆ ಪ್ರಾರಂಭಿಸಲಾಗುವುದು ಎಂದು Reliance Industries 46 ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕಂಪನಿ ಅಧ್ಯಕ್ಷ ಮುಕೇಶ್‌ ಅಂಬಾನಿ (Mukesh Ambani) ಘೋಷಿಸಿದ್ದಾರೆ. ಜಿಯೋ ಏರ್‌ಫೈಬರ್ 5ಜಿ ನೆಟ್ವರ್ಕ್ ಮತ್ತು ಅತ್ಯಾಧುನಿಕ ವೈರ್ಲೆಸ್ ತಂತ್ರಜ್ಞಾನವನ್ನು ಬಳಸಿಕೊಂಡು ಮನೆಗಳು ಮತ್ತು ಕಚೇರಿಗಳಿಗೆ Wireless Brondband ಸೇವೆಯನ್ನು ಒದಗಿಸಲಿದೆ.

ಜಿಯೋ ಕಂಪನಿಯ ಬ್ರಹತ್ ಸಾಧನೆ
ಹೊಸ ತಂತ್ರಜ್ಞಾನ ಬಳಕೆಯಿಂದ ದೂರಸಂಪರ್ಕ ಕ್ಷೇತ್ರದಲ್ಲಿ ಜಿಯೋ ಏರ್ ಫೈಬರ್ ಆರಂಭ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ಕಂಪನಿ ಮುಖ್ಯಸ್ಥ ಮುಕೇಶ್ ಅಂಬಾನಿ, ನಮ್ಮ ಆಪ್ಟಿಕಲ್ ಫೈಬರ್ ಸೇವೆಯಾದ ಜಿಯೋ ಫೈಬರ್‌ 1 ಕೋಟಿಗೂ ಹೆಚ್ಚು ಸಂಪರ್ಕಗಳನ್ನು ಹೊಂದಿದೆ.

jio AirFiber Service
Image Cerdit: Techshotsapp

ಇನ್ನೂ ಲಕ್ಷಾಂತರ ಮನೆಗಳಿಗೆ ಬೇಡಿಕೆ ಇದ್ದು, ತಂತಿ ಮೂಲಕ ಸಂಪರ್ಕ ಕಲ್ಪಿಸುವುದು ಕಷ್ಟಕರವಾಗಿದೆ. ಈ ತೊಂದರೆಯನ್ನು ಜಿಯೋ ಏರ್ ಫೈಬರ್ ನಿವಾರಿಸುತ್ತದೆ. ಈ ಮೂಲಕ ನಾವು 20 ಕೋಟಿ ಮನೆ ಮತ್ತು ಕಚೇರಿಗಳನ್ನು ತಲುಪುವ ನಿರೀಕ್ಷೆಯಲ್ಲಿದ್ದೇವೆ. ಜಿಯೋ ಏರ್ ಫೈಬರ್ ಆರಂಭದೊಂದಿಗೆ ಜಿಯೋ ವಲಯಕ್ಕೆ ಪ್ರತಿದಿನ 1.5 ಲಕ್ಷ ಹೊಸ ಗ್ರಾಹಕರನ್ನು ಸೇರಿಸಲು ಸಾಧ್ಯವಾಗುತ್ತದೆ, ಎಂದು ತಿಳಿಸಿದ್ದಾರೆ.

ಜಿಯೋ ಕಂಪನಿಯ ನಿಲುವು 
ಜಿಯೋ ಕಂಪನಿ ಅನೇಕ ವರ್ಷಗಳ ಹಿಂದೆ ಚಾಲ್ತಿಗೆ ಬಂದಿದ್ದು, ಆರಂಭದಲ್ಲಿ ಫ್ರಿ ಸಿಮ್ ಎಂದು ಗ್ರಾಹಕರಿಗೆ ಪರಿಚಯವಾಗಿದ್ದು. ಈಗ ಇನ್ನುಳಿದ ಸಿಮ್ ಕಂಪನಿಗಳನ್ನು ಹಿಂದೆ ಹಾಕಿ ತನ್ನದೇ ಆದ ಸಾಧನೆಯನ್ನು ಮಾಡುತ್ತ ಜನರ ನೆಚ್ಚಿನ ಸಿಮ್ ಆಗಿ ಏಳಿಗೆ ಕಂಡಿದ್ದು ಈಗ ಹೊಸ ತಂತ್ರಜ್ಞಾನವಾದ ಆಪ್ಟಿಕಲ್ ಫೈಬರ್ ಸೇವೆಯಾದ ಜಿಯೋ ಫೈಬರ್‌ ಮೂಲಕ ಇನ್ನು ಎತ್ತರಕ್ಕೆ ಹೆಸರು ಮಾಡಲಿದೆ ಎಂದು ಹೇಳಿದರೆ ತಪ್ಪಾಗಲ್ಲ.

Leave A Reply

Your email address will not be published.