Jio Glass: ದೇಶದಲ್ಲಿ ಜಾರಿಗೆ ಬಂತು Jio ಗ್ಲಾಸ್, ಈ ಜಿಯೋ ಗ್ಲಾಸ್ ಹಾಕಿಕೊಂಡರೆ ಮೊಬೈಲ್ ಟಿವಿಯಂತೆ ಕಾಣುತ್ತೆ.
ಭಾರತದಲ್ಲಿ ಜಿಯೋ ಗ್ಲಾಸ್ ತಯಾರಾಗುತ್ತಿದ್ದು, ಈ ಗ್ಲಾಸ್ ಅನೇಕ ವಿಶೇಷತೆಯನ್ನು ಹೊಂದಿದೆ.
Jio Glass: ಜಿಯೋ (Jio) ಕಂಪನಿಯು ಕೇವಲ ಟೆಲಿಕಾಂ ಸೇವೆಗಷ್ಟೇ ಸೀಮಿತ ಆಗದೇ ಇನ್ನಿತರ ವಿಭಾಗದಲ್ಲೂ ಜನಪ್ರಿಯತೆಯನ್ನು ಹೊಂದಿದೆ. ಜಿಯೋ ಕಂಪನಿಯಾ ಫೋನ್ ಗಳು ಅನೇಕ ವೈಶಿಷ್ಟತೆಯನ್ನು ಹೊಂದಿದ್ದು,ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆಯನ್ನು ಸಹ ಹೊಂದಿದೆ.
ಅಷ್ಟೇ ಅಲ್ಲದೆ ಈಗ ಜಿಯೋ ಮಾಂತ್ರಿಕ ಕನ್ನಡಕವನ್ನು ತನ್ನ ಗ್ರಾಹಕರಿಗಾಗಿ ಬಿಡುಗಡೆ ಮಾಡಿದೆ. ಹಲವು ಲುಕ್ ನೊಂದಿಗೆ, ವಿಶೇಶತೆಯನ್ನು ಜಿಯೋ ಕನ್ನಡಕ ಹೊಂದಿದೆ. ಕಳೆದ ವರ್ಷ MWC (MWC 2022) ಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜಿಯೋ ಗ್ಲಾಸ್ ಧರಿಸಿ ಹೊಸ ಅನ್ವೇಷಣೆಗೆ ಸಹಕಾರ ನೀಡಿದ್ದರು.

ಭಾರತದಲ್ಲಿ ಜಿಯೋ ಗ್ಲಾಸ್ ತಯಾರಿ
ಜಿಯೋ ಗ್ಲಾಸ್ ಅನ್ನು ಭಾರತದಲ್ಲಿ ತಯಾರಿಸಲಾಗುತ್ತದೆ ಎಂಬುದು ಸಹ ವಿಶೇಷವಾದ ವಿಷಯ. ಎಮ್‌ಆರ್ ಕನ್ನಡಕವನ್ನು ಟೆಸ್ಸೆರಾಕ್ಟ್ ಅಭಿವೃದ್ಧಿಪಡಿಸಿದೆ. ಇದು ಎಕ್ಸ್‌ಆರ್ ಅನುಭವಗಳು ಮತ್ತು ಹಾರ್ಡ್‌ವೇರ್ ಅನ್ನು ರಚಿಸುವಲ್ಲಿ ಮಾಸ್ಟರ್ ಎಂದು ಪರಿಗಣಿಸಲಾಗಿದೆ. ಟೆಸೆರಾಕ್ಟ್ ಮೂಲತಃ ಎಮ್‌ಐಟಿಯ ಮೀಡಿಯಾ ಲ್ಯಾಬ್‌ನಿಂದ ಹೊರಬಂದಿದೆ. ಪ್ರಮುಖವಾಗಿ ಈ ಜಿಯೋ ಗ್ಲಾಸ್ ಬಳಕೆದಾರರ ಫೋನ್ ಸ್ಕ್ರೀನ್‌ಗಳನ್ನು 100 ಇಂಚುಗಳಷ್ಟು ದೊಡ್ಡದಾಗಿ ಕಾಣಿಸುವಂತೆ ಮಾಡಲಿದೆ ಈ ಮೂಲಕ ಸಿನಿಮಾ ಅನುಭವವನ್ನೇ ಈ ಚಿಕ್ಕ ಗ್ಲಾಸ್ ಮೂಲಕ ಪಡೆದುಕೊಳ್ಳಬಹುದು ಎಂಬುದು ವಿಶೇಷವಾದ ಸಂಗತಿಯಾಗಿದೆ.
ಜಿಯೋ ಗ್ಲಾಸ್‌ನ ವಿಶೇಶತೆ
ಜಿಯೋ ಗ್ಲಾಸ್ ಬಳಕೆದಾರರ ಫೋನ್ ಸ್ಕ್ರೀನ್‌ಗಳನ್ನು 100 ಇಂಚುಗಳಷ್ಟು ದೊಡ್ಡದಾಗಿ ಕಾಣಿಸುವಂತೆ ಮಾಡುವ ಇದು 69 ಗ್ರಾಂ ತೂಗುತ್ತದೆ. ಜಿಯೋ ಗ್ಲಾಸ್ ಉತ್ತಮ ವಿನ್ಯಾಸದೊಂದಿಗೆ ಬರಲಿದ್ದು, ಇದು ಎರಡು ಮಸೂರಗಳೊಂದಿಗೆ ಲೋಹದ ಚೌಕಟ್ಟನ್ನು ಹೊಂದಿದೆ. ಯುಎಸ್‌ಬಿ-ಸಿ ಕೇಬಲ್ ಮೂಲಕ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗೆ ಜಿಯೋ ಗ್ಲಾಸ್ ಅನ್ನು ಸಂಪರ್ಕಿಸಬಹುದು. ಹಾಗೆಯೇ ಇದು ವೈರ್‌ಲೆಸ್ ಬೆಂಬಲವನ್ನು ಪಡೆಯುವ ನಿರೀಕ್ಷೆಯಿದೆ. ಅದರಲ್ಲೂ ಇದು ಪ್ರತಿ ಕಣ್ಣಿಗೆ 1080p ಡಿಸ್‌ಪ್ಲೇ ಅನುಭವವನ್ನು ನೀಡುತ್ತದೆ. ಜಿಯೋ ಗ್ಲಾಸ್‌ನ ಎರಡೂ ಬದಿಗಳಲ್ಲಿ ಎರಡು ಸ್ಪೀಕರ್ ಆಯ್ಕೆ ನೀಡಲಾಗಿದೆ.

ಈ ಕನ್ನಡಕದಲ್ಲಿ ಕರೆ ಮಾಡುವ ಅವಕಾಶ ಮಾಡಿಕೊಡಲಾಗುವುದು
ಈ ಕನ್ನಡಕದಲ್ಲಿ ವಾಯ್ಸ್ ಕರೆಗಳಿಗೆ ಅನುಮತಿ ನೀಡಲು ಒಂದು ಮೈಕ್ರೊಫೋನ್ ಆಯ್ಕೆಯನ್ನೂ ಸಹ ನೀಡಲಾಗಿದೆ. ಉಳಿದಂತೆ ಜಿಯೋ ಗ್ಲಾಸ್ ನೊಂದಿಗೆ ಬಳಕೆದಾರರು ಮೂರು ಗಂಟೆಗಳ ರನ್‌ಟೈಮ್ ಅನ್ನು ಪಡೆದುಕೊಳ್ಳಬಹುದು ಎಂದು ಕಂಪನಿ ಹೇಳಿಕೊಂಡಿದೆ. ಇದಕ್ಕಾಗಿ 4,000mAh ಸಾಮರ್ಥ್ಯದ ಬ್ಯಾಟರಿ ಹೊಂದಿರಲಿದೆ ಎಂದು ಹೇಳಲಾಗಿದೆ.
ಜಿಯೋ ಗ್ಲಾಸ್ ಬೆಲೆ ಹಾಗೂ ಲಭ್ಯತೆ
ಭಾರತದಲ್ಲಿ ಜಿಯೋ ಗ್ಲಾಸ್ ಇನ್ನೂ ಪರೀಕ್ಷಾ ಹಂತದಲ್ಲಿದ್ದು, ಅದರ ಬಿಡುಗಡೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಟೈಮ್‌ಲೈನ್ ಅನ್ನು ಸಹ ಬಹಿರಂಗಪಡಿಸಲಾಗಿಲ್ಲ. ಜಿಯೋ ಗ್ಲಾಸ್‌ನ ಬೆಲೆಗೆ ಸಂಬಂಧಿಸಿದಂತೆ ಸಾಕಷ್ಟು ಊಹಾಪೋಹಗಳಿವೆ. ಆದಾಗ್ಯೂ, ಕಂಪನಿಯು ಡಿವೈಸ್‌ನ ಬೆಲೆಯ ಬಗ್ಗೆ ಇನ್ನೂ ಏನನ್ನೂ ಹೇಳಿಲ್ಲ ಎನ್ನಲಾಗಿದೆ.