Jio Recharge: Jio ಗ್ರಾಹಕರಿಗೆ ಇನ್ನೊಂದು ರಿಚಾರ್ಜ್ ಆಫರ್, ಈ ರಿಚಾರ್ಜ್ ನಲ್ಲಿ Amazon Prime ಉಚಿತ.

ಜಿಯೋ ಈ ವಾರ್ಷಿಕ ರಿಚಾರ್ಜ್ ನಲ್ಲಿ ಅಮೆಜಾನ್ ಪ್ರೈಮ್ ಉಚಿತವಾಗಿ ಸಿಗಲಿದೆ.

Jio Introduces New Annual Plan: ರಿಲಯನ್ಸ್ Jio ಗ್ರಾಹಕರಿಗಾಗಿ ಉತ್ತಮ ಯೋಜನೆಗಳನ್ನು ಜಾರಿಗೆ ತಂದಿದೆ. ಈಗ ಹೆಚ್ಚಿನವರು Amazon Prime ವೀಡಿಯೊ ಗಳನ್ನೂ ನೋಡಲು ಇಷ್ಟ ಪಡುತ್ತಾರೆ ಹಾಗು ಪ್ರೈಮ್ ಬಳಕೆದಾರರ ಸಂಖ್ಯೆ ಹೆಚ್ಚಾಗೇ ಇದೆ. ಗ್ರಾಹಕರು ಉಚಿತ Amazon Prime ವೀಡಿಯೊ ಮೊಬೈಲ್ ಎಡಿಷನ್ ಸದಸ್ಯತ್ವವನ್ನು ಮಾಸಿಕ ಯೋಜನೆಗಳಲ್ಲೂ ಪಡೆಯಬಹುದು.

ಆದರೆ ಇದನ್ನು ವಾರ್ಷಿಕವಾಗಿ ಯೋಚಿಸಿದರೆ ಕೊಂಚ ಭಾರಿ ಮೊತ್ತ ನೀಡಬೇಕಾಗುತ್ತದೆ. ಜಿಯೋ ಪ್ರಿಪೇಯ್ಡ್ ರೀಚಾರ್ಜ್ (JIo Annual Recharge Plan) ಯೋಜನೆಯ ಮಾನ್ಯತೆಗೆ ಮಾನ್ಯವಾಗಿರುವ ಉತ್ತಮ ವಾರ್ಷಿಕ ಯೋಜನೆಗಳಲ್ಲೂ ನಿಮಗೆ ಈ ಸೇವೆಗಳನ್ನು ನೀಡುತ್ತಿದೆ. ಈ ಯೋಜನೆಗಳಲ್ಲಿ ಪ್ರೈಮ್ ಅನ್ನು ಉಚಿತವಾಗಿ ಬಳಸಬಹುದಾಗಿದೆ.

Jio Recharge
Image Credit: TV9kannada

ರಿಲಯನ್ಸ್ Jio ಗ್ರಾಹಕರಿಗಾಗಿ ವಾರ್ಷಿಕ ಯೋಜನೆ

ರಿಲಯನ್ಸ್ Jio ಕಳೆದ ವರ್ಷ 5G ಬಿಡುಗಡೆಯಾದ ನಂತರ ಈ ವರ್ಷದ ಅಂತ್ಯದ ವೇಳೆಗೆ ಇಡೀ ದೇಶದಲ್ಲಿ 5G ಸೇವೆಯನ್ನು ಹರಡುವುದಾಗಿ ಜಿಯೋ ಭರವಸೆ ನೀಡಿತ್ತು. ಇದರ ಟೈಮ್‌ಲೈನ್ ಕೆಲವೇ ದಿನಗಳಲ್ಲಿ ಪೂರ್ಣವಾಗಲಿದೆ. ಇದರ ನಂತರ Reliance Jio ತನ್ನ ಯೋಜನೆಗಳ ಬೆಲೆಯನ್ನು ಹೆಚ್ಚಿಸಲಿದೆಯೇ ಎಂಬ ಅನುಮಾನ ಹುಟ್ಟಿತು. ಆದರೆ ರಿಲಯನ್ಸ್ Jio ತನ್ನ ಗ್ರಾಹಕರಿಗಾಗಿ ಕಡಿಮೆ ದರದ ಉತ್ತಮ ಯೋಜನೆಗಳನ್ನು ಜಾರಿಗೆ ತಂದಿದೆ.

ಅಮೆಜಾನ್ ಪ್ರೈಮ್ ವೀಡಿಯೊ ಬಳಕೆಗೆ ರಿಲಯನ್ಸ್ Jio ಯಿಂದ ಆಫರ್

ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗಾಗಿ ಉತ್ತಮ ಯೋಜನೆಯನ್ನು ಪ್ರಾರಂಭಿಸಿದೆ. ಯೋಜನೆಯ ಬೆಲೆ 3227 ರೂ. ಇದರಲ್ಲಿ 2GB ವರೆಗೆ ಡೇಟಾವನ್ನು ಒದಗಿಸಲಾಗುತ್ತದೆ. ಈ ಪ್ರಿಪೇಯ್ಡ್ ಪ್ಲಾನ್‌ ನಲ್ಲಿ ಅನಿಯಮಿತ 5G ಡೇಟಾ, ದೈನಂದಿನ 2GB ಡೇಟಾ ಮತ್ತು 100SMS ನೀಡಲಾಗುತ್ತಿದೆ. ವಿಶೇಷವೆಂದರೆ ಈ ಡೇಟಾ ಯೋಜನೆಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಜಿಯೋದ ಈ ಯೋಜನೆಯಲ್ಲಿ ಬಳಕೆದಾರರು ಒಂದು ವರ್ಷದವರೆಗೆ ಅಮೆಜಾನ್ ಪ್ರೈಮ್ ವೀಡಿಯೊದ ಪ್ರಯೋಜನಗಳನ್ನು ಪಡೆಯುವ ಅವಕಾಶವನ್ನು ಪಡೆಯುತ್ತಾರೆ.

Jio Introduces New Annual Plan
Image Credit: News 18

ಒಂದು ಬಾರಿ ರಿಚಾರ್ಜ್ ಮಾಡಿದರೆ ಒಂದು ವರ್ಷ ರಿಚಾರ್ಜ್ ಮಾಡಬೇಕಂತಿಲ್ಲ

ರಿಲಯನ್ಸ್ ಜಿಯೋದ ಈ ಯೋಜನೆಯ ವಿಶೇಷತೆಯೆಂದರೆ ನಿಮಗೆ 1 ವರ್ಷಕ್ಕೆ Amazon Prime Video Mobile Edition, Jio Cinema, Jio TV ಮತ್ತು Jio Cloud ಗೆ ಉಚಿತ ಪ್ರವೇಶವನ್ನು ನೀಡಲಾಗುವುದು. ಅಂದರೆ ರೀಚಾರ್ಜ್ ಜೊತೆಗೆ ನೀವು ಇದನ್ನು ಸಹ ಪಡೆದುಕೊಳ್ಳಲು ಸಾಧ್ಯವಾಗುತ್ತದೆ .

ಈ ಜಿಯೋ ಪ್ರಿಪೇಯ್ಡ್ ಯೋಜನೆಯು 365 ದಿನಗಳ ದೀರ್ಘಾವಧಿಯ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ ನೀವು ಪ್ರತಿದಿನ 2 GB ಹೈ-ಸ್ಪೀಡ್ ಡೇಟಾದ ಪ್ರಯೋಜನವನ್ನು ಪಡೆಯುತ್ತೀರಿ ಆದರೆ ಮಿತಿ ಮುಗಿದ ನಂತರ ವೇಗವು 64Kbps ಗೆ ಕಡಿಮೆಯಾಗುತ್ತದೆ. ಇಂತಹ ಒಳ್ಳೆ ಆಫರ್ ಜಿಯೋ ಕಂಪನಿ ಬಿಟ್ಟು ಬೇರೆ ಯಾವ ಕಂಪನಿ ನೀಡಲು ಸಾಧ್ಯವಿಲ್ಲ ಎನ್ನಲಾಗಿದೆ.

Leave A Reply

Your email address will not be published.