Jio: ಒಮ್ಮೆ ರಿಚಾರ್ಜ್ ಮಾಡಿದರೆ 365 ರಿಂದ ವ್ಯಾಲಿಡಿಟಿ, Jio ಗ್ರಾಹಕರಿಗೆ ದಸರಾ ರಿಚಾರ್ಜ್ ಪ್ಲ್ಯಾನ್.

ಜಿಯೋ ಗ್ರಾಹಕರಿಗೆ 365 ದಿನಗಳ ರಿಚಾರ್ಜ್ ಪ್ಲ್ಯಾನ್ ಘೋಷಣೆ, ಅನಿಯಮಿತ ಕರೆ ಮತ್ತು ಡೇಟಾ.

Jio Annual Recharge Plan: ಜಿಯೋ (Jio) ಸಿಮ್ ಬಳಕೆದಾರರಿಗೆ ಹಬ್ಬದ ಆಫರ್ ಆಗಿ ಅಧಿಕ ಅವಧಿಯ ಪ್ರಿಪೇಯ್ಡ್ ಪ್ಲಾನ್ ಸೌಲಭ್ಯವನ್ನು ಜಿಯೋ ಕಂಪನಿ ನೀಡುತ್ತಿದೆ. ವಾರಕೊಮ್ಮೆ ತಿಂಗಳಿಗೊಮ್ಮೆ ರಿಚಾರ್ಜ್ ಮಾಡಲು ಬೇಜಾರ್ ಆಗುವವರಿಗೆ ಈ ಯೋಜನೆ ಬಹಳ ಉಪಯುಕ್ತವಾಗಿದೆ. ಜಿಯೋ ಟೆಲಿಕಾಂ ತನ್ನ ಗ್ರಾಹಕರ ಅನುಕೂಲಕ್ಕಾಗಿ ಆಗಾಗ ಹೊಸ ಹೊಸ ಯೋಜನೆಯನ್ನು ಜಾರಿಗೆ ತರುತ್ತಲೇ ಇರುತ್ತದೆ.

ಅದರಂತೆ ಈಗ ವರ್ಷಕ್ಕೆ ಒಮ್ಮೆ ಮಾತ್ರ ರಿಚಾರ್ಜ್ ಮಾಡಿದರೆ ಸಾಕು ಇಡೀ ವರ್ಷ ಈ ಆಫರ್ ಅನ್ನು ಎಂಜಾಯ್ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಈ ಒಂದು ವರ್ಷದ ಆಫರ್ ಅಮೆಜಾನ್‌ ಪ್ರೈಮ್‌ ವಿಡಿಯೋ ಚಂದಾದಾರಿಕೆ ಜೊತೆಗೆ ಬರುತ್ತದೆ.

Jio New Recharge Plan
Image Credit: Business-standard

ಒಂದು ವರ್ಷದ ಪ್ರಿಪೇಯ್ಡ್ ರೀಚಾರ್ಜ್ ಪ್ಲ್ಯಾನ್‌

ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿ ಅಂದರೆ ಅದು ಜಿಯೋ ಮಾತ್ರ. ಹಾಗೆಯೆ ಈ ಸಲದ ಹಬ್ಬದ ಆಫರ್ ಆಗಿ ಹೊಸ ಪ್ರಿಪೇಯ್ಡ್ ರೀಚಾರ್ಜ್ ಪ್ಲ್ಯಾನ್‌ (Prepaid Recharge Plan) ಅನ್ನು ಸೇರಿಸಿಕೊಂಡಿದ್ದು, ಈ ಪ್ಲ್ಯಾನ್‌ ಬಳಕೆದಾರರಿಗೆ 365 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಅಂದರೆ ಬರೋಬ್ಬರಿ ಒಂದು ವರ್ಷದ ಸೌಲಭ್ಯ ಇದಾಗಿರುತ್ತದೆ .

ಈ ವಿಶೇಷ ಪ್ಲ್ಯಾನ್‌ 1 ವರ್ಷಕ್ಕೆ ಮಾನ್ಯವಾಗಿರುವ ಹೊಸ ವಾರ್ಷಿಕ ಪ್ಯಾಕ್ ಆಗಿದೆ. ಸಾಮಾನ್ಯವಾಗಿ ಈಗಾಗಲೇ ನೀಡಲಾಗುತ್ತಿರುವ ಎಲ್ಲಾ ರೀತಿಯ ಪ್ರಯೋಜನಗಳೊಂದಿಗೆ ಅಮೆಜಾನ್‌ ಪ್ರೈಮ್‌ ವಿಡಿಯೋ ಚಂದಾದಾರಿಕೆ ಲಭ್ಯವಾಗುತ್ತಿರುವು ಈ ಪ್ಲ್ಯಾನ್‌ನ ವಿಶೇಷ.

ಒಂದು ವರ್ಷಗಳ ಅವಧಿಗೆ 3,227 ರೂ.ಗಳ ಪ್ರಿಪೇಯ್ಡ್ ರೀಚಾರ್ಜ್ ಪ್ಲ್ಯಾನ್‌

ಜಿಯೋದ ಈ ಹೊಸ ಪ್ಲಾನ್ ದರ 3,227 ರೂ.ಗಳು. ಇದರಲ್ಲಿ ಗ್ರಾಹಕರು ನಿತ್ಯವೂ 2GB ದೈನಂದಿನ ಡೇಟಾ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಈ ದೈನಂದಿನ ಡೇಟಾ ಮಿತಿಯನ್ನು ಒಮ್ಮೆ ಮೀರಿದರೆ, ಇಂಟರ್ನೆಟ್ ವೇಗವು ಕೇವಲ 64 Kbps ಗೆ ಕಡಿಮೆಯಾಗುತ್ತದೆ.

Jio Best Recharge Plan
Image Credit: 91mobiles

ವಿಶೇಷ ಏನೆಂದರೆ, ಇದು ಅನಿಯಮಿತ ಬಳಕೆಯೊಂದಿಗೆ ಬರುತ್ತದೆ. ಈ ಪ್ಲ್ಯಾನ್‌ನಲ್ಲಿ ಒಂದು ವರ್ಷದ ಅವಧಿಗೆ ಅನಿಯಮಿತ ವಾಯ್ಸ್‌ ಕಾಲ್‌ ಸೌಲಭ್ಯ, ದಿನಕ್ಕೆ 100 SMS ಪ್ರಯೋಜನಗಳನ್ನು ಪಡೆದುಕೊಳ್ಳಲಿದ್ದು, ಒಟ್ಟಾರೆ 365 ದಿನಗಳವರೆಗೆ ಮಾನ್ಯವಾಗಿರುವ ದೀರ್ಘಾವಧಿಯ ಪ್ಲ್ಯಾನ್‌ ಆಗಿದೆ.

ಮೊದಲೇ ತಿಳಿಸಿದಂತೆ ಈ ಪ್ಲ್ಯಾನ್‌ ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯ ಚಂದಾದಾರಿಕೆಯೊಂದಿಗೆ ಬರಲಿದ್ದು, ಇದರೊಂದಿಗೆ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್‌ (Jio TV, Jio Cinema and Jio Cloud) ಸೇವೆಗಳನ್ನೂ ಸಹ ಪಡೆದುಕೊಳ್ಳಬಹುದು.

5G ನೆಟ್‌ವರ್ಕ್ ಬಳಕೆದಾರರಿಗೆ ಮಾತ್ರ ಸೀಮಿತ

ಜಿಯೋದವರ ಈ ಒಂದು ವರ್ಷದ ವಿಶೇಷ ಪ್ಲ್ಯಾನ್‌ನಲ್ಲಿ ಅನಿಯಮಿತ 5G ಡೇಟಾ ಪ್ರಯೋಜನವನ್ನೂ ಸಹ ಪಡೆದುಕೊಳ್ಳಬಹುದಾಗಿ. ಅಂದರೆ ಯಾವುದೇ ನಿರ್ಬಂಧಗಳಿಲ್ಲದೆ ತನ್ನ ಬಳಕೆದಾರರಿಗೆ ಅನಿಯಮಿತ 5G ನೆಟ್‌ವರ್ಕ್ ಅನ್ನು ಉಚಿತವಾಗಿ ನೀಡುವ ಪ್ಲ್ಯಾನ್‌ ಆಗಿದೆ. ಆದರೆ ಯಾರೆಲ್ಲಾ 5G ವಲಯದಲ್ಲಿ ಇದ್ದಾರೋ ಅವರಿಗೆ ಮಾತ್ರ ಇದು ಲಭ್ಯ ಇರಲಿದೆ.

ವರ್ಷಕ್ಕೊಮ್ಮೆ ಮಾತ್ರ ರೀಚಾರ್ಜ್ ಮಾಡಬೇಕು ಎಂದುಕೊಳ್ಳುವವರಿಗೆ ಈ ಪ್ಲ್ಯಾನ್‌ ಉತ್ತಮ ಆಯ್ಕೆ ಆಗಿದೆ. ವಿಶೇಷವೇನೆಂದರೆ ಈ ಮೊದಲು ನೆಟ್‌ಫ್ಲಿಕ್ಸ್, ಡಿಸ್ನಿ+ ಹಾಟ್‌ಸ್ಟಾರ್, ಸೋನಿಲೈವ್ ಯೋಜನೆಗಳು, ಜೀ5 ಯೋಜನೆಗಳು ಮತ್ತು ಜೀ5-ಸೋನಿಲೈಬ್ ಕಾಂಬೊ ಪ್ಲ್ಯಾನ್‌ಗಳ ಆಧಾರದಲ್ಲಿ ಪ್ಲ್ಯಾನ್‌ಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಈಗ ಅಮೆಜಾನ್‌ ಪ್ರೈಮ್‌ ವಿಡಿಯೋ ಸೌಲಭ್ಯ ಸಿಗಲಿದೆ.

Leave A Reply

Your email address will not be published.