iPhone And Jio: ಐಫೋನ್ ಖರೀದಿಸುವ ಜನರಿಗೆ ಬಂಪರ್ ಗಿಫ್ಟ್ ನೀಡಿದ ಜಿಯೋ ಅಂಬಾನಿ, ಐಫೋನ್ ಪ್ರಿಯರಿಗೆ ಮಾತ್ರ.

ಐಫೋನ್ 15 ಖರೀದಿದಾರರಿಗೆ ಇಲ್ಲಿದೆ ಬಿಗ್ ಆಫರ್, ಜಿಯೋ ಆಫರ್ ಘೋಷಣೆ.

Jio Offer For iPhone 15: ಆಪಲ್ ಐಫೋನ್ (Apple iPhone) 15 ಖರೀದಿಸುವ ಗ್ರಾಹಕರಿಗೆ ಉತ್ತಮ ಆಫರ್ ರಿಲಯನ್ಸ್ ಜಿಯೋ ನೀಡಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಳಕೆದಾರರ ನಾಡಿ ಮಿಡಿತವನ್ನು ಅರಿತುಕೊಂಡಿರುವ ಜನಪ್ರಿಯ ರಿಲಯನ್ಸ್ ಜಿಯೋ (Reliance Jio), ನೂತನ ಆಪಲ್ ಐಫೋನ್ 15 ಖರೀದಿಸುವ ಗ್ರಾಹಕರಿಗೆ ಹೊಸ ಪ್ಲಾನ್ ಅನ್ನು ಆರು ತಿಂಗಳುಗಳ ವರೆಗೆ ಉಚಿತವಾಗಿ ಒದಗಿಸಲಿದೆ.

ಆರು ತಿಂಗಳ ಪ್ಲ್ಯಾನ್ ಘೋಷಣೆ ಮಾಡಿರುವ ಜಿಯೋ ಬಳಕೆದಾರರಿಗೆ ಅಧಿಕ ಲಾಭವನ್ನು ಮಾಡಿಕೊಡಲಿದೆ. ಆದರೆ ರಿಲಯನ್ಸ್ ರಿಟೇಲ್ ಸ್ಟೋರ್‌ಗಳು, ರಿಲಯನ್ಸ್ ಡಿಜಿಟಲ್ ಆನ್‌ಲೈನ್ ಅಥವಾ ಜಿಯೋ ಮಾರ್ಟ್ ನಲ್ಲಿ ಜಿಯೋ ಐಫೋನ್ 15 ಖರೀದಿ ಮಾಡಿದರೆ ಮಾತ್ರವೇ ಈ ಕೊಡುಗೆಯ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳಬಹುದು.

Jio Offer For iPhone 15
Image Source: The Economic Times

ಜಿಯೋ ಸಿಮ್ ಇಲ್ಲದಿದ್ದರೂ ಈ ಆಫರ್ ಸೌಲಭ್ಯ ಪಡೆಯಬಹುದು

ರಿಲಯನ್ಸ್ ಜಿಯೋ, ಆಪಲ್ ಐಫೋನ್ 15 ಖರೀದಿಸುವವರಿಗೆ ನೀಡುತ್ತಿರುವ 399 ರೂ. ಪ್ಲಾನ್ ನಲ್ಲಿ ಬಳಕೆದಾರರಿಗೆ ಪ್ರತಿದಿನ 3Gb High Speed Data ಬಳಕೆಯ ಸೌಲಭ್ಯ ದೊರೆಯಲಿದ್ದು, ಇದರ ಜೊತೆಗೆ ಸಂಪೂರ್ಣ ಅನ್ ಲಿಮಿಟೆಡ್ ವಾಯಿಸ್‌ ಕರೆಯ ಸೌಲಭ್ಯ ಸಹ ಸಿಗಲಿದೆ. ಅಲ್ಲದೇ ಪ್ರತಿದಿನ 100 ಎಸ್‌ಎಂಎಸ್ ಗಳನ್ನು ಸಹ ಉಚಿತ ವಾಗಿ ಕಳುಹಿಸಬಹುದಾಗಿದೆ.

ಜಿಯೋ ಬಳಕೆದಾರರಲಲ್ಲದವರಿಗೂ ಈ ಯೋಜನೆಯ ಪ್ರಯೋಜನ ದೊರೆಯಲಿದ್ದು, ಇದಕ್ಕಾಗಿ ಅವರು ಹೊಸ ಜಿಯೋ ಸಿಮ್ ಖರೀದಿ ಮಾಡಬೇಕು. ಇಲ್ಲವೇ ಮೊಬೈಲ್ ನಂಬರ್ ಪೊರ್ಟಬಲಿಟಿ ಆಯ್ಕೆಯನ್ನು ಕೂಡಾ ಮಾಡಿಕೊಳ್ಳಬಹುದಾಗಿದೆ.

Jio Offer For iPhone 15
Image Source: The Begusarai

ಐಫೋನ್ 15 ನಲ್ಲಿ ಮಾತ್ರವೇ ಈ ಆಫರ್

ಈ ಕೊಡುಗೆಯು ಸೆಪ್ಟೆಂಬರ್ 22 ರಿಂದ ಪ್ರಾರಂಭವಾಗಲಿದ್ದು, ಐಫೋನ್ 15 ಖರೀದಿ ಮಾಡಿ ಜಿಯೋ ಸಿಮ್ ಅನ್ನು ಆಕ್ಟಿವ್ ಮಾಡಿದರೆ ಈ ಹೊಸ ಯೋಜನೆಯು 72 ಗಂಟೆಗಳ ಒಳಗೆ ನಿಮ್ಮ ಬಳಕೆಗೆ ದೊರೆಯಲಿದೆ. ಈ ಯೋಜನೆಯು ಕೇವಲ ಐಫೋನ್ 15 ನಲ್ಲಿ ಮಾತ್ರವೇ ಕಾರ್ಯ ನಿರ್ವಹಿಸಲಿದೆ.

ಐಫೋನ್‌ 15 ಪ್ರೈಸ್‌ ವಿವರ
ಐಫೋನ್‌ 15 128GB ವೇರಿಯಂಟ್‌ ಬೆಲೆ – 79,900 ರೂ
ಐಫೋನ್‌ 15 256GB ವೇರಿಯಂಟ್‌ ಬೆಲೆ – 89,900 ರೂ
ಐಫೋನ್‌ 15 512GB ವೇರಿಯಂಟ್‌ ಬೆಲೆ – 1,09,900 ರೂ

 

ಐಫೋನ್‌ 15 ಫೋನ್ ಫೀಚರ್ಸ್‌ iPhone 15 Features

ಈ ಐಫೋನ್‌ 15 ಪಿಲ್‌ ಶೇಪ್‌ ಮಾದರಿ ಪಂಚ್‌ ಹೋಲ್‌ ರಚನೆ ಪಡೆದಿದೆ. ಹಾಗೆಯೇ ಐಫೋನ್‌ 15 ಫೋನ್ A16 ಬಯೋನಿಕ್ ಚಿಪ್ ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯ ಮಾಡಲಿದೆ. ಐಫೋನ್‌ 15 ಫೋನ್ 6.1 ಇಂಚಿನ ಡಿಸ್‌ಪ್ಲೇ ಅನ್ನು ಪಡೆದಿದ್ದು, 1600 nits ಬ್ರೈಟ್ನಸ್‌ ಬೆಂಬಲ ಸಹ ಹೊಂದಿದೆ. ಇದಕ್ಕೆ ಬೆಂಬಲವಾಗಿ ios 17 ಓಎಸ್‌ ಸಪೋರ್ಟ್ ಕೂಡಾ ಹೊಂದಿದೆ.

ಅಲ್ಲದೇ ಇದು 128 GB, 256 GB, 512 GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ. ಜೊತೆಗೆ ಐಫೋನ್‌ 15 ಫೋನ್‌ ಎರಡು ಕ್ಯಾಮೆರಾ ರಚನೆ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸಲ್‌ ಸೆನ್ಸಾರ್‌ ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ನ ಅಲ್ಟ್ರಾ ವೈಲ್ಡ್‌ ಆಂಗಲ್‌ ಲೆನ್ಸ್‌ ಹೊಂದಿದ್ದು, 12 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

Leave A Reply

Your email address will not be published.