Jio Laptop: ದೇಶದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ ಅಂಬಾನಿ, 15,000 ರೂ ಗಿಂತ ಕಡಿಮೆ ಬೆಲೆಗೆ ಲ್ಯಾಪ್ ಟಾಪ್ ಲಾಂಚ್.

ಅನೇಕ ಫೀಚರ್ ಇರುವ ಲ್ಯಾಪ್ ಟಾಪ್ ಅನ್ನು ಕಡಿಮೆ ಬೆಲೆಗೆ ಲಾಂಚ್ ಮಾಡಿದ Jio

JioBook Laptop: ದೇಶದಲ್ಲಿ ಇತೀಚಿನ ದಿನಗಳಲ್ಲಿ ಲ್ಯಾಪ್​ಟಾಪ್ ಬಳಕೆ ಹೆಚ್ಚಾಗುತ್ತಿದೆ. ಯಾಕೆಂದರೆ ವರ್ಕ್ ಫ್ರಾಮ್​ ಹೋಮ್​ ವ್ಯವಸ್ಥೆ ಜಾರಿಗೆ ಬಂದ ಮೇಲೆ ಪ್ರತಿಯೊಬ್ಬರ ಮನೆಯಲ್ಲೂ ಲ್ಯಾಪ್​ಟಾಪ್ ಕಾಣಸಿಗುತ್ತದೆ . ಅಷ್ಟೇ ಅಲ್ಲದೆ ಈಗ ವಿದ್ಯಾರ್ಥಿಗಳಿಗೂ ಲ್ಯಾಪ್​ಟಾಪ್ ಅಗತ್ಯ ಇದ್ದು ಕಡಿಮೆ ಬೆಲೆಯಲ್ಲಿ ಲ್ಯಾಪ್ ಟಾಪ್ ಸಿಗೋದು ಕಷ್ಟ ಆಗಿದೆ.

ಕಡಿಮೆ ಬೆಲೆಯಲ್ಲಿ ಲ್ಯಾಪ್​ಟಾಪ್ ಸಿಕ್ಕರೂ ಅದರಲ್ಲಿ ಎಲ್ಲಾ ಫೀಚರ್ ಇರುವುದಿಲ್ಲ. ಇಂತಹ ಸಮಯದಲ್ಲಿ ನಮಗೆ ಬೇಕಾದ ಎಲ್ಲಾ ಫೀಚರ್​ಗಳು ಇರುವ ಲ್ಯಾಪ್​ಟಾಪ್​ ಬೇಕು ಅಂದರೆ ಹೆಚ್ಚು ಹಣ ಖರ್ಚು ಮಾಡಲೇಬೇಕು . ಆದರೆ ಈ ಎಲ್ಲಾ ನಿಮ್ಮ ಸಮಸ್ಯೆಗಳಿಗೆ ರಿಲಯನ್ಸ್​ ಜಿಯೋ (Reliance Jio) ಹೊಸ ಪರಿಹಾರವೊಂದನ್ನು ನೀಡಿದೆ. ಜಿಯೋ ಕಂಪನಿಯು ಮಾರುಕಟ್ಟೆಗೆ ಅತ್ಯಂತ ಕಡಿಮೆ ಬೆಲೆಯ Jio Laptop ಬಿಡುಗಡೆ ಮಾಡಲಿದೆ .

JioBook Laptop
Image Credit: India Today

ಕಡಿಮೆ ಬೆಲೆಯಲ್ಲಿ ಎಲ್ಲಾ ಫೀಚರ್ ಇರುವ ಲ್ಯಾಪ್​ಟಾಪ್

ಈಗಾಗಲೇ ಅತೀ ಕಡಿಮೆ ದರಕ್ಕೆ ಇಂಟರ್ನೆಟ್​ ಸೌಕರ್ಯ, ಕೀಪ್ಯಾಡ್​ ಫೋನ್​ಗಳು ಹಾಗೂ ಸ್ಮಾರ್ಟ್ ಫೋನ್​ಗಳು ಇದು ಸಾಲದು ಎಂಬಂತೆ ಕಡಿಮೆ ದರಕ್ಕೆ ಪ್ರಿಪೇಯ್ಡ್​ ಸೌಕರ್ಯ ಹೀಗೆ ಕಡಿಮೆ ದರದಲ್ಲಿ ಹೆಚ್ಚಿನ ಲಾಭದ ಯೋಜನೆಗಳು ಮುಕೇಶ್​ ಅಂಬಾನಿ ಮಾಲೀಕತ್ವದ ರಿಲಾಯನ್ಸ್​ ಜಿಯೋ ಕಂಪನಿಯು ಮಾರುಕಟ್ಟೆಗೆ ಪರಿಚಯಿಸಿದೆ.

ಇದೀಗ ಈ ಸಾಲಿಗೆ ಜಿಯೋ ಕಂಪನಿಯ ಲ್ಯಾಪ್​ಟಾಪ್​ ಕೂಡ ಸೇರಿದೆ. ಕೇವಲ 14,999 ರೂಪಾಯಿಗಳಿಗೆ ಲ್ಯಾಪ್​ಟಾಪ್​ನ್ನು ಮಾರುಕಟ್ಟೆಗೆ ತರಲು ರಿಲಯನ್ಸ್​ ಜಿಯೋ ಕಂಪನಿ ಎಲ್ಲಾ ರೀತಿಯ ತಯಾರಿಯನ್ನು ಮಾಡಿದೆ ಎನ್ನಲಾಗಿದೆ. 15 ಸಾವಿರ ರೂಪಾಯಿಗಳಿಗಿಂತಲೂ ಕಡಿಮೆ ದರದ ಲ್ಯಾಪ್​ಟಾಪ್​ ಮಾರುಕಟ್ಟೆಗೆ ಬರುತ್ತಿರೋದು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯೇ ಆಗಿದ್ದು, ಭಾರತದಲ್ಲಿ ಇದೊಂದು ಹೊಸ ಪ್ರಯತ್ನವೇ ಆಗಿದೆ.

JioBook Laptop Price
Image Credit: Smartprix

ಈ ಲ್ಯಾಪ್​ಟಾಪ್ ಮಲ್ಟಿ ಯುಸೇಜ್​ ಲ್ಯಾಪ್​ಟಾಪ್​ ಆಗಿರಲಿದೆ

ಈಗಾಗಲೇ ಲ್ಯಾಪ್​ಟಾಪ್​ ತಯಾರಿಕೆಗೆ ವಿವಿಧ ಪ್ರಯೋಗಳು ಕೂಡ ಆರಂಭಗೊಂಡಿವೆ ಎನ್ನಲಾಗಿದೆ. ಕ್ಲೌಡ್​ ಚಂದಾದಾರಿಕೆಯಲ್ಲಿ ನೀವು ಒಂದೇ ಲ್ಯಾಪ್​ಟಾಪ್​ ಅನೇಕ ಚಂದಾದಾರಿಕೆ ಹೊಂದಬಹುದಾಗಿದ್ದು,ಇದು ಸಾರ್ವಜನಿಕವಾಗಿ ಲ್ಯಾಪ್​ಟಾಪ್​ ಬಳಕೆಗೆ ಇಡುವವರಿಗೆ ಖಂಡಿತವಾಗಿಯೂ ಒಂದು ಉತ್ತಮ ಆಯ್ಕೆಯಾಗಿದೆ.

ಆದರೆ ಜಿಯೋ ಕಂಪನಿಯು ಈವರೆಗೆ ತನ್ನ ಕಂಪನಿಯ ಲ್ಯಾಪ್​ಟಾಪ್​ನಲ್ಲಿ ಇರಲಿರುವ ಫೀಚರ್​ಗಳ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ರಿಲಯನ್ಸ್​ ಜಿಯೋ ಕಂಪನಿಯು ಜಿಯೋ ಬುಕ್​ ಬಿಡುಗಡೆ ಮಾಡಿದ್ದು ಇದರ ಬೆಲೆ 16,499 ರೂಪಾಯಿ ಆಗಿದೆ . ರಿಲಯನ್ಸ್​ ಜಿಯೋ ಕಂಪನಿಯು ತಮ್ಮ ಕಂಪನಿಯ ಹೊಸ ಲ್ಯಾಪ್​ಟಾಪ್​ ಖರೀದಿದಾರರಿಗೆ 100 ಜಿಬಿ ಕ್ಲೌಡ್​ ಸ್ಟೋರೇಜ್​ ಉಚಿತವಾಗಿ ನೀಡುವುದಾಗಿ ಹೇಳಿದೆ.

Leave A Reply

Your email address will not be published.