Rakshit Shetty: ಶೀಘ್ರದಲ್ಲಿ ನಟ ರಕ್ಷಿತ್ ಶೆಟ್ಟಿ ಮದುವೆ, ಅಷ್ಟಕ್ಕೂ ಕಿರಿಕ್ ಹುಡುಗನ ಕೈ ಹಿಡಿಯುವ ಹುಡುಗಿ ಯಾರು…?
ನಟ ರಕ್ಷಿತ್ ಶೆಟ್ಟಿ ಮದುವೆ ಫಿಕ್ಸ್, ಯಾರು ಆ ಚಲುವೆ...?
Kannada Actor Rakshit Shetty Marriage: ಕನ್ನಡ ಚಿತ್ರರಂಗದ ಸೂಪರ್ ಹೀರೋ, ಬಿಗ್ ಸಿನಿಮಾಗಳ ಡೈರೆಕ್ಟರ್ ರಕ್ಷಿತ್ ಶೆಟ್ಟಿ (Rakshit Shetty) ಬಗ್ಗೆ ಹೆಚ್ಚಾಗಿ ಎಲ್ಲರಿಗೂ ಗೊತ್ತಿರುತ್ತದೆ. ನಟನೆಯ ಜೊತೆಗೆ ಡೈರೆಕ್ಷನ್ ಮಾಡೋ ಈ ನಟನ ಎಲ್ಲ ಸಿನಿಮಾಗಳು ಜನ ಮೆಚ್ಚಿದ ಸಿನಿಮಾವಾಗಿದೆ.
ಉತ್ತಮ ಕಥೆ, ಹಾಡು ಗಳನ್ನೂ ಒಳಗೊಂಡಿರುವ ಸಿನಿಮಾ ಇವರದ್ದಾಗಿರುತ್ತದೆ. ಅವರ ಇತ್ತೀಚಿನ ಕನ್ನಡ ಚಿತ್ರ ಸಪ್ತ ಸಾಗರ ದಾಚೆ ಎಲ್ಲೋ (Sapta Sagaradaache Ello) ಜನರ ಮನಗೆದ್ದಿದೆ. ಈ ಚಿತ್ರವು ಸಪ್ತ ಸಾಗರ ದಾಟಲು ಎಂಬ ಹೆಸರಿನೊಂದಿಗೆ ತೆಲುಗಿನಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ.
ತೆಲುಗಿನಲ್ಲಿ ಕನ್ನಡ ಸಿನಿಮಾಗಳ ಅಬ್ಬರ
ಇತ್ತೀಚೆಗೆ ತೆಲುಗಿನಲ್ಲಿ ಕನ್ನಡ ಸಿನಿಮಾಗಳು ಉತ್ತಮ ಪ್ರದರ್ಶನ ಕಾಣುತ್ತಿವೆ. ಕೆಜಿಎಫ್ ಸಿರೀಸ್ ನಿಂದ ಶುರುವಾದ ಕನ್ನಡ ಸಿನಿಮಾಗಳು. ಇತ್ತೀಚೆಗೆ ತೆರೆಕಂಡ ಹಾಸ್ಟೆಲ್ ಹುಡುಗರು ಸಿನಿಮಾ ಕೂಡ ಆಕರ್ಷಕವಾಗಿದೆ. ಈಗ ಮತ್ತೊಂದು ಕನ್ನಡ ಚಿತ್ರ ತೆಲುಗಿಗೆ ಬರುತ್ತಿದೆ ಈ ಸಿನಿಮಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ರಕ್ಷಿತ್ ಶೆಟ್ಟಿ ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಮದುವೆ ಬಗ್ಗೆ ಪ್ರತಿಕ್ರಿಯಿಸಿದ ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ ಈ ಹಿಂದೆ ರಶ್ಮಿಕಾ ಮಂದಣ್ಣ (Rashmika Mandanna) ಅವರನ್ನು ಪ್ರೀತಿಸಿದ್ದು ಗೊತ್ತೇ ಇದೆ. ಇವರಿಬ್ಬರ ಪ್ರೇಮವು ವಿವಾಹದವರೆಗೂ ಹೋಯಿತು. ಅವರ ನಿಶ್ಚಿತಾರ್ಥವು ಅನೇಕ ಸೆಲೆಬ್ರಿಟಿಗಳ ನಡುವೆ ಅದ್ಧೂರಿಯಾಗಿ ನಡೆಯಿತು. ಆದರೆ ಕೆಲದಿನಗಳ ಬಳಿಕ ಅವರ ನಿಶ್ಚಿತಾರ್ಥ ಮುರಿದುಬಿದ್ದಿತು.
ರಶ್ಮಿಕಾ ಮಂದಣ್ಣ ಜೊತೆ ನಿಶ್ಹಿತಾರ್ಥ ಮುರಿದುಬಿದ್ದ ನಂತರ ಸಿನಿಮಾದಲ್ಲಿ ಬ್ಯುಸಿ ಆಗಿರುವ ರಕ್ಷಿತ್ ಶೆಟ್ಟಿ ಅನೇಕ ಸಿನಿಮಾಗಳನ್ನು ನೀಡಿದ್ದಾರೆ. ರಕ್ಷಿತ್ಯ ಶೆಟ್ಟಿ ಯವರ ಅಭಿನಯದ ಸಪ್ತ ಸಾಗರ ದಾಟಲು ತೆಲುಗಿನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ ಆಕರ್ಷಕವಾಗಿದೆ. ಈ ಚಿತ್ರವು ಭಾವನಾತ್ಮಕ ಪ್ರೇಮಕಥೆಯಾಗಿದೆ.
ಸಂದರ್ಶನವೊಂದರಲ್ಲಿ ರಕ್ಷಿತ್ ಶೆಟ್ಟಿ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಮದುವೆ ಯಾವಾಗ ಎಂದು ಕೇಳಿದ ಪ್ರಶ್ನೆಗೆ, ಶೀಘ್ರದಲ್ಲೇ ಎಂದು ಉತ್ತರಿಸಿದರು. ಸದ್ಯದಲ್ಲೇ ಹುಡುಗಿಯ ವಿವರವೂ ಹೊರಬೀಳಲಿದೆ ಎಂದು ಕುತೂಹಲಕಾರಿಯಾಗಿ ಉತ್ತರಿಸಿದರು.