Gold Loan: ಇನ್ನುಮುಂದೆ ಲೋನ್ ಮಾಡಲು ಬ್ಯಾಂಕಿಗೆ ಹೋಗುವ ಅಗತ್ಯ ಇಲ್ಲ, ಜಾರಿಗೆ ಬಂತು ಹೊಸ ಯೋಜನೆ.
ಕಡಿಮೆ ಬಡ್ಡಿ ದರದಲ್ಲಿ ಮನೆ ಬಾಗಿಲಿಗೆ ಬಂತು ಕರ್ನಾಟಕ ಬ್ಯಾಂಕ್ ನ ಹೊಸ ಸಾಲ ಯೋಜನೆ
KBL Swarna Bandhu Yojana: ಎಲ್ಲಾ ಬ್ಯಾಂಕ್ ಗಳು ತನ್ನ ಗ್ರಾಹಕರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತದೆ. ಅದರಲ್ಲಿ ಮುಖ್ಯವಾದದ್ದು ಸಾಲ ಸೌಲಭ್ಯ, ಎಲ್ಲಾ ಸಾಲ ಸೌಲಭ್ಯಗಳಿಗೂ ಬ್ಯಾಂಕ್ ಗಳು ಕೆಲವು ನಿಯಮಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಹಾಗೆಯೇ ಕರ್ನಾಟಕ ಬ್ಯಾಂಕ್ ಗ್ರಾಹಕರ ಅನುಕೂಲಕ್ಕಾಗಿ ಮನೆ ಬಾಗಿಲಿಗೆ ಗೋಲ್ಡ್ ಲೋನ್ ಸೌಲಭ್ಯವನ್ನು ವಿಸ್ತರಿಸಿದೆ.
ಆಕರ್ಷಕ ಬಡ್ಡಿ ದರದೊಂದಿಗೆ ಸ್ವರ್ಣ ಬಂಧು ಯೋಜನೆ
ಸ್ವರ್ಣ ಬಂಧು ಯೋಜನೆಯು ಆಕರ್ಷಕ ಬಡ್ಡಿ ದರ, ಸಂಪೂರ್ಣ ಡಿಜಿಟಲ್ ವ್ಯವಸ್ಥೆಯೊಂದಿಗೆ Karnataka Bank ಸ್ವರ್ಣ ಬಂಧು ಹೆಸರಲ್ಲಿ ಯೋಜನೆ ಜಾರಿಗೆ ಬರಲಿದೆ. ಮೊದಲ ಹಂತದಲ್ಲಿ ಆಯ್ದ ಶಾಖೆಗಳಲ್ಲಿ ಈ ಸೌಲಭ್ಯ ಲಭ್ಯವಾಗಲಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕ ಬ್ಯಾಂಕ್ ನ ಎಲ್ಲಾ ಶಾಖೆಗಳಿಂದಲೂ ಗ್ರಾಹಕರಿಗೆ ಈ ಸೌಲಭ್ಯ ನೀಡಲಾಗುವುದು.
ಗೋಲ್ಡ್ ವ್ಯವಹಾರ ಸಂಸ್ಥೆ ಸಹಭಾಗಿತ್ವದೊಂದಿಗೆ ಸ್ವರ್ಣ ಬಂಧು ಯೋಜನೆ
ಸ್ವರ್ಣ ಬಂಧು ಯೋಜನೆ ಗ್ರಾಹಕರ ಅನುಕೂಲಕ್ಕಾಗಿಯೇ ತಂದಿರುವ ಯೋಜನೆಯಾಗಿದೆ. ಮಣಿಪಾಲ್ ಗ್ರೂಪ್ ಕಂಪನಿ ಬೆಂಬಲಿತ ಸಹಿ ಬಂಧು ಎನ್ನುವ ಗೋಲ್ಡ್ ವ್ಯವಹಾರ ಸಂಸ್ಥೆ ಸಹಭಾಗಿತ್ವದೊಂದಿಗೆ ಕೆಬಿಎಲ್ ಸ್ವರ್ಣ ಬಂಧು ಯೋಜನೆ ಗ್ರಾಹಕರ ಅವಶ್ಯಕತೆಗಳಿಗೆ ಸ್ಪಂದಿಸಲಿದೆ. ಹೆಚ್ಚಿನ ಗ್ರಾಹಕರಿಗೆ ಗೋಲ್ಡ್ ಲೋನ್ ಸೌಲಭ್ಯ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ಗ್ರಾಹಕರು ಯೋಜನೆಯ ಉಪಯೋಗ ಪಡೆದುಕೊಳ್ಳುವಂತೆ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಹೆಚ್. ಶ್ರೀಕೃಷ್ಣನ್ ಹೇಳಿದ್ದಾರೆ.