Keerthy Suresh: ಕೀರ್ತಿ ಸುರೇಶ್ ಮದುವೆಯಾಗುವುದು ಇವರನ್ನೇ, ಮಗಳ ಮದುವೆ ಸ್ಪಷ್ಟನೆ ನೀಡಿದ ಕೀರ್ತಿ ಸುರೇಶ್ ತಂದೆ.
ಕೀರ್ತಿ ಸುರೇಶ್ ಮದುವೆ ಬಗ್ಗೆ ಅವರ ತಂದೆಯಿಂದ ಪ್ರತಿಕ್ರಿಯೆ,
Keerthy Suresh Marriage: ಸೌತ್ ಸುಂದರಿ ಕೀರ್ತಿ ಸುರೇಶ್ (Keerthy Suresh) ಒಂದಿಷ್ಟು ಫ್ಲಾಫ್ ಒಂದಿಷ್ಟು ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿದವರಾಗಿದ್ದು, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುತ್ತಾ ಮುಂದೆ ಸಾಗುತ್ತಿದ್ದಾರೆ. ಈ ನಟಿಯ ಬದುಕಲ್ಲಿ ದೊಡ್ಡ ತಿರುವು ನೀಡಿದ ಸಿನಿಮಾ “ಮಹಾನಟಿ”.
ಇನ್ನು ಕೀರ್ತಿ ಸುರೇಶ್ ಅವರ ವೃತ್ತಿ ಬದುಕು ಒಂದೆಡೆಯಾದರೆ, ಅವರ ವೈಯಕ್ತಿಕ ವಿಚಾರವಾಗಿಯೂ ಅವರು ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ನಟಿ ಮದುವೆ ವಿಚಾರವಾಗಿ ತಮಿಳಿನ ನಟರೊಂದಿಗೆ, ಸಂಗೀತ ನಿರ್ದೇಶಕರೊಂದಿಗೆ ಇವರ ಹೆಸರು ತಳುಕು ಹಾಕಿಕೊಳ್ಳುತ್ತಲೇ ಇರುತ್ತದೆ.

ಕೀರ್ತಿ ಸುರೇಶ್ ರವರ ಮದುವೆ ಸುದ್ದಿ ಆಗಾಗ ಹರಿದಾಡುತ್ತಿರುತ್ತದೆ
ಹಲವು ಬಾರಿ ಈ ನಟಿಯ ವಿವಾಹದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದ್ದು, ಕಳೆದ ಕೆಲವು ದಿನಗಳಿಂದ ಕೀರ್ತಿ ಸುರೇಶ್ ಸದ್ಯ Box Office ನಲ್ಲಿ ಭರ್ಜರಿ ಹವಾ ಸೃಷ್ಟಿಸಿರುವ “ಜವಾನ್” ಸಿನಿಮಾದ ಸಂಗೀತ ನಿರ್ದೇಶಕ ಅನಿರುದ್ಧ್ ಅವರನ್ನು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಇದೀಗ ಸ್ವತಃ ಕೀರ್ತಿ ಸುರೇಶ್ ಅವರ ತಂದೆ ಸುರೇಶ್ ಕುಮಾರ್ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ.
ಕೀರ್ತಿ ಸುರೇಶ್ ಅವರ ತಂದೆಯಿಂದ ಸ್ಪಷ್ಟನೆ
ಕೀರ್ತಿ ಸುರೇಶ್ ಅವರ ಮದುವೆ ವಿಚಾರವಾಗಿ ಮಾದ್ಯಮದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದ್ದು, ಬಹುತೇಕ ಮಾದ್ಯಮಗಳು ಸೌತ್ ಸುಂದರಿ ಕೀರ್ತಿ ಸುರೇಶ್ ಅನಿರುದ್ಧ್ ರವಿಚಂದರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

ಮುಂದಿನ ಜನವರಿಯಲ್ಲಿ ಅವರಿಬ್ಬರ ಮದುವೆ ಎಂದು ಸುದ್ದಿಯನ್ನು ಹಬ್ಬಿಸಿದ್ದರು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಕೀರ್ತಿ ಸುರೇಶ್ ಅವರ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.”ಕೀರ್ತಿ ಸುರೇಶ್ ಹಾಗೂ ಅನಿರುದ್ಧ್ ಬಗ್ಗೆ ಸುದ್ದಿ ಹರಿದಾಡುತ್ತಿರುವುದು ಮೊದಲೇನಲ್ಲ. ಸುಮ್ಮನೇ ಸುಳ್ಳು ಸುದ್ದಿಗಳನ್ನು ಬಿತ್ತರಿಸಬೇಡಿ” ಎಂದು ಸುರೇಶ್ ಕುಮಾರ್ ಪ್ರತಿಕ್ರಿಸಿದ್ದಾರೆ.