Kia: ಎಲೆಕ್ಟ್ರಿಕ್ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಬಂದು ಹೊಸ ಕಿಯಾ ಎಲೆಕ್ಟ್ರಿಕ್ ಕಾರ್, ಭರ್ಜರಿ ಮೈಲೇಜ್.
ಕಿಯಾ ಕಂಪನಿಯ ಎಲೆಕ್ಟ್ರಿಕ್ ಕಾರು ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ.
Kia EV5 Features: ದಕ್ಷಿಣ ಕೊರಿಯಾದ ವಾಹನ ತಯಾರಕರಾದ ಕಿಯಾ (Kia) ತನ್ನ ಹೊಸ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿವೆ ಹಾಗಾಗಿ ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಈ ನಡುವೆ ಕಿಯಾ (Kia) ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಿ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಭರ್ಜರಿಯಾಗಿ ಸಜ್ಜಾಗುತ್ತಿದೆ.
ಕಿಯಾ EV5 ಎಲೆಕ್ಟ್ರಿಕ್ ಕಾರಿನ ವಿನ್ಯಾಸ
ಈ ಹೊಸ ಕಿಯಾ EV5 ಎಲೆಕ್ಟ್ರಿಕ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಕಿಯಾ EV5 ಮಾದರಿಯು ಅದರ ಹಿರಿಯಣ್ಣ EV9 ನಿಂದ ಹೆಚ್ಚು ಪ್ರಭಾವಿತವಾಗಿದೆ. ಚೀನಾದಲ್ಲಿ ಚೆಂಗ್ಡು ಮೋಟಾರ್ ಶೋನಲ್ಲಿ ದೊಡ್ಡ ಪ್ರೀಮಿಯಂ ಎಲೆಕ್ಟ್ರಿಕ್ ವಾಹನವನ್ನು ಪ್ರದರ್ಶಿಸಲಾಗಿದೆ. ಕಿಯಾ ಭಾರತಕ್ಕೆ EV5 ಅನ್ನು ತರಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ಹೊಸ ಕಿಯಾ EV5 ಎಲೆಕ್ಟಕ್ ಕಾರು 2025 ರ ನಂತರ ಬಿಡುಗಡೆಯಾಗಬಹುದು.
ಹೊಸ ಕಿಯಾ EV5 ಎಲೆಕ್ಟ್ರಿಕ್ ಕಾರು ಅದೇ ಇ-ಸಿಎಮ್‌ಪಿ ಆರ್ಕಿಟೆಕ್ಚರ್ ಅನ್ನು ಆಧರಿಸಿದೆ. ಇದು ಕಿಯಾ ಇವಿ6 ಎಲೆಕ್ಟ್ರಿಕ್ ಮಾದರಿಗೂ ಆಧಾರವಾಗಿರುತ್ತದೆ. ಇದು ಕಿಯಾ ಸ್ಪೋರ್ಟೇಜ್‌ಗೆ ಎಲೆಕ್ಟ್ರಿಕ್ ಮಾದರಿಯು ಪರ್ಯಾಯವಾಗಿ ಬರುತ್ತದೆ. ಈ ಎಲೆಕ್ಟ್ರಿಕ್ ಎಸ್‍ಯುವಿ ಇತರ ಮಾರುಕಟ್ಟೆಗಳಿಗೆ ಪರಿಚಯಿಸುವ ಮೊದಲು ಈ ವರ್ಷದ ನಂತರ ಚೀನಾದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಕಿಯಾ EV5 ಎಲೆಕ್ಟ್ರಿಕ್ ಕಾರಿನ ಆಯಾಮಗಳು
ಈ ಹೊಸ ಕಿಯಾ EV5 ಎಲೆಕ್ಟ್ರಿಕ್ ಕಾರು ಕಿಯಾ ಸ್ಪೋರ್ಟೇಜ್‌ಗೆ ಹೋಲುತ್ತದೆ ಮತ್ತು ಟೆಸ್ಲಾ ಮಾಡೆಲ್ Y ಗಿಂತ 135mm ಚಿಕ್ಕದಾಗಿದೆ. ಈ ಕಾರು 4,615 mm ಉದ್ದವನ್ನು ಹೊಂದಿದೆ. ಇನ್ನು ಈ ಎಲೆಕ್ಟ್ರಿಕ್ ಕಾರು 2,750 mm ವೀಲ್‌ಬೇಸ್ ಅನ್ನು ಹೊಂದಿದೆ.