Kodi Mutt Swamiji: ಲೋಕಸಭಾ ಚುನಾವಣೆಯ ಬಗ್ಗೆ ಭವಿಷ್ಯ ನುಡಿದ ಕೊಡಿ ಶ್ರೀಗಳು, ಯಾವ ಪಕ್ಷ ಜಯ ಸಾಧಿಸಲಿದೆ.

ಕೋಡಿಮಠ ಸ್ವಾಮೀಜಿಯಿಂದ ಚುನಾವಣೆಯ ಬಗ್ಗೆ ಸ್ಪೋಟಕ ಭವಿಷ್ಯ.

Loka Sabha Election 2023: ಈಗಾಗಲೇ ಅನೇಕ ವಿಷಯದಲ್ಲಿ ಭವಿಷ್ಯ ನುಡಿದ ಶ್ರೀಗಳು ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುದಾಗಿ ಕೂಡ ಭವಿಷ್ಯ ನುಡಿದಿದ್ದರು. ಇದೀಗ ಲೋಕಸಭಾ ಚುನಾವಣೆಯ ಬಗ್ಗೆಯೂ ಅಂಥದ್ದೇ ಭವಿಷ್ಯವನ್ನು ನುಡಿದಿದ್ದಾರೆ.

ಈ ಕುರಿತಂತೆ ದಾವಣಗೆರೆಯ ಹೊನ್ನಾಳಿಯಲ್ಲಿ ಮಾತನಾಡಿರುವಂತ ಹಾಸನದ ಅರಸೀಕೆರೆಯ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು, ವಿಧಾನಸಭಾ ಚುನಾವಣೆಯಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ ಅಂತ ಹೇಳಿದ್ದೆ. ಅದರಂತೆ ಆಗಿದೆ. ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಶ್ರೀಗಳೇ ಹೇಳಿ ಅಂತ ಕೇಳಿದಂತ ಸುದ್ದಿಗಾರರಿಗೆ, ಕೋಡಿಮಠ ಶ್ರೀಗಳು ಅದು ಯಾವ ಪಕ್ಷ ಅಂತ ಹೇಳೋದಕ್ಕೆ ನಿರಾಕರಿಸಿದರು.

Shri of Kodi Math has made predictions about the Lok Sabha elections
Image Credit: vistaranews

ಹವಾಮಾನದ ಬಗ್ಗೆ ಭವಿಷ್ಯ 
ಕಳೆದ ಮೂರು ದಿನಗಳ ಹಿಂದೆ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದಂತ ಅವರು, ಈ ವರ್ಷವೂ ಮಳೆಗೂ ತೊಂದರೆ ಇಲ್ಲ. ಅನ್ನಕ್ಕೂ ಕೊರತೆಯಿಲ್ಲ. ದೇಶ, ರಾಜ್ಯದಲ್ಲಿ ವಿಪರೀತ ಮಳೆಯಾಗೋ ಲಕ್ಷಣವಿದೆ ಎಂದು ಭವಿಷ್ಯ ನುಡಿದಿದ್ದರು. ಮಳೆಗೆ ಯಾವುದೇ ತೊಂದರೆ ಇಲ್ಲ. ಮೊನ್ನೆ ಬಂದ ರೀತಿಯೇ ಇನ್ನೂ ಭಾರೀ ಮಳೆ ಬರಲಿದೆ. ಗುಡುಗು ಸಹಿತ ಮಳೆಯಿಂದ ಅಪಮೃತ್ಯು ಉಂಟಾಗಲಿದೆ. ಪ್ರಕೃತಿಯಿಂದಲೂ ಬಹಳ ಹಾನಿಯಾಗಲಿದೆ ಎಂದು ಹೇಳಿದ್ದರು.

ಇನ್ನೂ ಮುಂಗಾರು ಮಳೆ ರಾಜ್ಯದಲ್ಲಿ ಕೈಕೊಟ್ಟ ಪರಿಣಾಮ, ರಾಜ್ಯ ಸರ್ಕಾರ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಈ ಬೆನ್ನಲ್ಲೇ ಅಮಾವಾಸ್ಯೆ ನಂತರ ಕರ್ನಾಟಕದಲ್ಲಿ ಭಾರೀ ಮಳೆಯಾಗಲಿದೆ. ಪ್ರಕೃತಿ ವಿಕೋಪದಿಂದ ಸಮಸ್ಯೆ ಉಂಟಾಗಲಿದೆ ಅಂತಾನೂ ಕೋಡಿಮಠ ಶ್ರೀ ಭವಿಷ್ಯ ನುಡಿದಿದ್ದಾರೆ.

Mr. Kody has made predictions about the next Lok Sabha elections
Image Credit: asianage

ಸ್ಮಶಾನದಲ್ಲಿ ಪಿಶಾಚಿ ಕುಣಿದಂತೆ ಆಗ್ತಿದೆ 
ಮೊನ್ನೆಯಷ್ಟೇ ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಯುಗಾದಿ ವೇಳೆಗೆ ಅಸ್ಥಿರತೆ ಕಾಡಲಿದೆ ಎಂಬುದಾಗಿ ಸ್ಪೋಟಕ ಭವಿಷ್ಯವನ್ನು ಕೋಡಿಮಠ ಶ್ರೀಗಳು ನುಡಿದಿದ್ದರು. ಈಗ ಲೋಕಸಭಾ ಚುನಾವಣೆಯಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ ಅಂತ ಭವಿಷ್ಯ ನುಡಿದಿದ್ದಾರೆ.

ಇನ್ನೂ ರಾಜ್ಯ ಸರ್ಕಾರದ ಕುರಿತಂತೆ ಮಾತನಾಡಿದಂತ ಅವರು, ಸ್ಮಶಾನದಲ್ಲಿ ಪಿಶಾಚಿ ಕುಣಿದಂತೆ ಆಗ್ತಿದೆ. ಆದರೇ ಏನೂ ಆಗೋದಿಲ್ಲ. ನೋಡೋರಿಲ್ಲ, ಕೇಳೋರಿಲ್ಲ. ಆನಂದ ಪಡುವವರಿಲ್ಲ. ಜೊತೆಗೆ ರಾಜ್ಯ ಸರ್ಕಾರಕ್ಕೆ ಏನೂ ತೊಂದರೆ ಆಗೋದಿಲ್ಲ. ಇದನ್ನು ಬಿಟ್ಟು ನಾನು ಏನೂ ಹೇಳಲ್ಲ. ನನಗೆ ಎಲ್ಲರೂ ಬೇಕಾಗಿರೋರು ಎಂದು ಹೇಳಿದ್ದರು.

Leave A Reply

Your email address will not be published.