Kodi Mutt: ನಿಜವಾಗುತ್ತಾ ಕೊಡಿ ಶ್ರೀಗಳು ನುಡಿದ ಭವಿಷ್ಯ, ಚರ್ಚೆಗೆ ಕಾರಣವಾಗಿದೆ ಕೊಡಿ ಶ್ರೀಗಳ ಭವಿಷ್ಯ.
ಬಹಳ ದಿನಗಳ ಹಿಂದೆ ನುಡಿದ ಭವಿಷ್ಯ ನಿಜವಾಗಲಿದೆಯಾ...? ಕೊಡಿ ಶ್ರೀಗಳು ನುಡಿದ ಭವಿಷ್ಯದ ಬಗ್ಗೆ ಬಹಳ ಚರ್ಚೆ.
Kodi Mutt Swamiji Prediction: ಕೋಡಿಮಠದ ಸ್ವಾಮೀಜಿ ಗಳು ನುಡಿಯುವ ಭವಿಷ್ಯ ಆಗ್ಗಾಗ ಚರ್ಚೆಗೆ ಒಳಗಾಗುತ್ತಿರುತ್ತದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಹಳ್ಳಿಯಲ್ಲಿನ ಕೋಟಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಈ ಹಿಂದೆ ಕೆಲವು ವಿಚಾರವಾಗಿ ಭವಿಷ್ಯ ನುಡಿದ್ದಿದ್ದಾರೆ.
ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ನಡುವಿನ ಭೀಕರ ಯುದ್ಧವು ಕೂಡ ಅವರು ನೀಡಿದ ಭವಿಷ್ಯದಲ್ಲಿ ಒಂದಾಗಿದೆ ಎಂಬ ಚರ್ಚೆ ಮೂಡುತ್ತಿದೆ. ಹೌದು ಹಿಂದೆ ಕೊಡಿ ಮಠದ ಶ್ರೀಗಳು ನುಡಿದ ಈಗ ನಿಜವಾಗುವ ಎಲ್ಲ ಲಕ್ಷಣ ಕಾಣುತ್ತಿದ್ದು ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಗೆ ಕಾರಣವಾಗಿದೆ ಎಂದು ಹೇಳಬಹುದು.

ಎರಡು ದೇಶಗಳು ಜಗತ್ತಿನ ಭೂಪಟದಿಂದ ಕಣ್ಮರೆಯಾಗಲಿದೆ
ಈ ಹಿಂದೆ ಕೊಡಿ ಮಠದ ಸ್ವಾಮಿಗಳು ನುಡಿದ ಜಲಪ್ರಳಯ, ಅಗ್ನಿ ಅನಾಹುತ, ಅಪಘಾತಗಳು ಸೇರಿದಂತೆ ವಿವಿಧ ಬಗೆಯ ಭವಿಷ್ಯ ನಿಜವಾಗಿದೆ. ಕೋಡಿ ಮಠದ ಸ್ವಾಮಿಗಳು ಕೆಲ ದಿನಗಳ ಹಿಂದೆ ನುಡಿದ ಭವಿಷ್ಯ ಏನೆಂದರೆ ಜಗತ್ತಿನಿಂದಲೇ ಒಂದು ದೇಶ ಕಣ್ಮರೆಯಾಗಲಿದೆ ಅನ್ನೋದು.
ಇದು ಕೂಡ ನಿಜವಾಗಲಿದೆ ಅನ್ನೋ ಅನುಮಾನ ಎಲ್ಲರಲ್ಲಿ ಮೂಡಿದೆ.ಅವರು ನುಡಿದಂತೆ ಆಗುತ್ತದೆ ಅನ್ನೋ ರೀತಿ ಇಸ್ರೇಲ್-ಪ್ಯಾಲೆಸ್ತೇನ್ ಯುದ್ಧ ಆರಂಭಗೊಂಡಿದ್ದು, ಈ ಎರಡು ದೇಶಗಳು ನಾಶವಾಗಲಿದೆ ಅನ್ನೋದಾಗಿ ಹೇಳಲಾಗುತ್ತಿದೆ. ಈ ಯುದ್ಧದ ನಡುವೆ ಯಾವ ದೇಶ ದ್ವಂಸ ಆಗಲಿದೆ ಎಂದು ಸಾಕಷ್ಟು ಜನರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಹೇಳಬಹುದು.

ಕೋಡಿಮಠ ಶ್ರೀ ನುಡಿದಂತೆ ನೆಡೆಯುತ್ತಿದೆ
ಶ್ರಾವಣ ಮಾಸದ ಮಧ್ಯಂತರದಲ್ಲಿ ಜಾಗತಿಕ ಮಟ್ಟದಲ್ಲಿ ವಿಪರೀತ ಮಳೆಯಾಗಲಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ಭೀತಿಯಿದೆ. ಭೂಕಂಪನಗಳು, ಸುನಾಮಿಗಳಿಂದ ಹೆಚ್ಚಿನ ಜನರ ಸಾವು-ನೋವುಗಳು ಸಂಭವಿಸಲಿದ್ದಾವೆ. ವಿಷಾನೀಲ ಬೀಸುವ ಪ್ರಸಂಗವಿದೆ ಅಂತ ಹೇಳಿದ್ದರು. ಇಸ್ರೇಲ್-ಪ್ಯಾಲೆಸ್ತೇನ್ ಯುದ್ಧ ದಿನ ದಿನಕ್ಕೂ ತೀವ್ರತೆಯನ್ನು ಪಡೆಯುತ್ತಿದೆ. ಇದೇ ಹೊತ್ತಿನಲ್ಲಿ ಕೋಡಿ ಮಠದ ಸ್ವಾಮೀಜಿ ಕಳೆದ ಎರಡು ದಶಕಗಳ ಹಿಂದೆ ನುಡಿದಿದ್ದಂತ ಭವಿಷ್ಯ ಈಗ ನಿಜವಾಗಲಿದ್ಯಾ ಅನ್ನೋ ಆತಂಕವನ್ನು ಹುಟ್ಟು ಹಾಕಿದೆ.