KTM: ಯುವಕರಿಗಾಗಿ ಬಂತು ಇನ್ನೊಂದು ಹೊಸ KTM ಡ್ಯೂಕ್, ಕಡಿಮೆ ಬೆಲೆ ಭರ್ಜರಿ ಮೈಲೇಜ್.
ಸಾಕಷ್ಟು ಅಭಿಮಾನಿಗಳನ್ನು ಪಡೆದ KTM ಡ್ಯೂಕ್ ನ ಇನ್ನೊಂದು ಮಾದರಿ ಬಿಡುಗಡೆ.
KTM 390 Duke: ಇತ್ತೀಚಿನ ದಿನಗಳಲ್ಲಿ ಯುವಕರು ಮೋಟಾರ್ ಸೈಕಲ್ ಖರೀದಿಯಲ್ಲಿ ಮುಗಿಬಿದ್ದಿದ್ದಾರೆ. ನೋಡಲು ಸಕತ್ ಲುಕ್ ಇರುವ ಮೋಟಾರ್ ಸೈಕಲ್ ಎಲ್ಲಾರ ಗಮನ ಸೆಳೆಯುವುದು ಖಚಿತ. ಹಾಗಾಗಿ KTM ಗೆ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ.
ಇದೇ ಕಾರಣಕ್ಕೆ ಕಂಪನಿಯು ಕಾಲ ಕಾಲಕ್ಕೆ ತನ್ನ ಮಾದರಿಗಳನ್ನು ನವೀಕರಣ ಮಾಡುತ್ತಲೇ ಬಂದಿದೆ. ಇದೀಗ Duke 390 ಸರದಿಯಾಗಿದ್ದು, ಈ ಮಾದರಿಗೆ ಭಾರತದಲ್ಲಿ ವಿಪರೀತ ಅಭಿಮಾಗಳಿರುವ ಕಾರಣ ಸಾಕಷ್ಟು ನವೀಕರಣಗಳೊಂದಿಗೆ ಹೊಸ 390 Duke ಮೊಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಲಾಗಿದೆ.
KTM 390 Duke ಮೋಟಾರ್ ಸೈಕಲ್ ನ ನವೀಕರಣ
ಹೊಸದಾಗಿ ಬಿಡುಗಡೆಯಾದ KTM 390 Duke ಮೋಟಾರ್‌ಸೈಕಲ್ ಈಗ ರೀಬೌಂಡ್-ಅಡ್ಜಸ್ಟ್‌ಮೆಂಟ್ ಸೆಟಪ್ ಜೊತೆಗೆ ಪ್ರೀ-ಲೋಡ್ ಹೊಂದಾಣಿಕೆಯನ್ನು ಹೊಂದಿದೆ. ಈ ಮೋಟಾರ್‌ಸೈಕಲ್ ಬಳಕೆದಾರರಿಗೆ ತಮ್ಮ ಆದ್ಯತೆಗಳಿಗೆ ಅನುಗುಣವಾಗಿ ಸಸ್ಪೆನ್ಷನ್ ಸೆಟಪ್ ಅನ್ನು ಉತ್ತಮಗೊಳಿಸಲು ಅನುವು ಮಾಡಿಕೊಡುತ್ತದೆ. ಮುಂಭಾಗವು USD ಫೋರ್ಕ್‌ಗಳನ್ನು ಹೊಂದಿದ್ದರೇ ಹಿಂಭಾಗವು ಮೊನೊ ಸಸ್ಪೆನ್ಶನ್ ಅನ್ನು ಹೊಂದಿದೆ.
KTM 390 Duke Price
ಕಂಪನಿಯು ತನ್ನ ಹೊಚ್ಚಹೊಸ ಡ್ಯೂಕ್ 390 ಮಾದರಿಯನ್ನು ರೂ. 3.11 ಲಕ್ಷಕ್ಕೆ ಬಿಡುಗಡೆ ಮಾಡಿದೆ (ಎಕ್ಸ್ ಶೋ ರೂಂ). ವಾಸ್ತವವಾಗಿ, 390 Duke ಮೋಟಾರ್‌ಸೈಕಲ್ ಅನ್ನು 2013 ರಲ್ಲಿ ಪರಿಚಯಿಸಿದ ನಂತರ ತಯಾರಕರಿಂದ ಅತಿದೊಡ್ಡ ನವೀಕರಣವನ್ನು ಇದೀಗ ಮಾಡಲಾಗಿದೆ. ಈ ಹೊಸ ಮೋಟಾರ್‌ಸೈಕಲ್ ಹೊಸ ಪವರ್‌ಟ್ರೇನ್ ಸಿಸ್ಟಮ್ ಸೇರಿದಂತೆ ಅದರ ಹಿಂದಿನ ಮಾದರಿಗೆ ಹೋಲಿಸಿದರೆ ಕೆಲವು ಗಮನಾರ್ಹ ಬದಲಾವಣೆಗಳನ್ನು ಪಡೆದಿದೆ.
KTM 390 Duke ಮೋಟಾರ್ ಸೈಕಲ್ ನ ಇಂಜಿನ್ ಸಾಮರ್ಥ್ಯ
ಹೊಸ KTM 390 Duke ಮೋಟಾರ್‌ಸೈಕಲ್ ಈಗ ದೊಡ್ಡ 399cc, ಸಿಂಗಲ್-ಸಿಲಿಂಡರ್, DOHC, ಲಿಕ್ವಿಡ್-ಕೂಲ್ಡ್ ಎಂಜಿನ್ ಹೊಂದಿದೆ. ಹೊಸ ಎಂಜಿನ್ ಕಡಿಮೆ ಆರ್‌ಪಿಎಂನಲ್ಲಿ ಹೆಚ್ಚು ಶಕ್ತಿ ಮತ್ತು ಟಾರ್ಕ್ ಅನ್ನು ಉತ್ಪಾದಿಸುವ ಸಮಾರ್ಥ್ಯವನ್ನು ಹೊಂದಿದೆ. ಹಾಗು KTM 390 ಡ್ಯೂಕ್‌ನಲ್ಲಿನ ಹೊಸ 399cc ಎಂಜಿನ್ 8,500rpm ನಲ್ಲಿ 45.37bhp ಮತ್ತು 6,500rpm ನಲ್ಲಿ 39Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಳೆಯ 390 ಡ್ಯೂಕ್ 42.9bhp @9,000rpm ಮತ್ತು 7,000rpm ನಲ್ಲಿ 37Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.