KTM: ಯಾವ ಸ್ಪೋರ್ಟ್ ಬೈಕಿಗೂ ಕಡಿಮೆ ಇಲ್ಲ ಈ ಹೊಸ KTM ಬೈಕ್, ಕಾಲೇಜು ಯುವಕರು ಫುಲ್ ಫಿದಾ.

ಹೊಸ KTM ಬೈಕ್ ಫೀಚರ್ ಕಂಡು ಯುವಕರು ಫುಲ್ ಫಿದಾ.

KTM 990 Duke Features: ಯುವಕರಲ್ಲಿ ಬೈಕ್ ಕ್ರೇಜ್ ಸ್ವಲ್ಪ ಮಟ್ಟಿಗೆ ಜಾಸ್ತಿಯೇ ಇರುತ್ತದೆ. ಹಾಗೆಯೆ ಮಾರುಕಟ್ಟೆಯಲ್ಲಿ ಬೈಕ್ ಗಳಿಗೇನು ಕಡಿಮೆ ಇಲ್ಲ. ಕಂಪನಿಗಳು ವರ್ಷದಿಂದ ವರ್ಷಕ್ಕೆ ಹಲವು ವೈಶಿಷ್ಟತೆ ಹಾಗು ಲುಕ್ ಹೊಂದಿದ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುತ್ತದೆ.

ಹಾಗೆಯೆ ಬೈಕ್ ಪ್ರಿಯರಿಗಾಗಿಯೇ ಒಂದು ಬೈಕ್ ಮಾರುಕಟ್ಟೆಗೆ ಪ್ರವೇಶಿಸಿದೆ, ಹೊಸ ಸೇರ್ಪಡೆ ಕೆಟಿಎಂ 990 ಡ್ಯೂಕ್ ಬೈಕ್. 890 ಡ್ಯೂಕ್ ಬದಲು ಬಂದಿರುವ ಹೊಸ ಮೋಟಾರ್‌ ಸೈಕಲ್‌ ಇದು. ಹೊಸ 990 ಡ್ಯೂಕ್ ಬೈಕ್‌, ಕೆಟಿಎಂ ಕಂಪನಿಯ ಮಧ್ಯಮ ತೂಕದ ಮೋಟಾರ್‌ಸೈಕಲ್ ಆಗಿದೆ.

KTM 990 Duke
Image Credit: Bikeexif

KTM 990 ಡ್ಯೂಕ್ ವಿನ್ಯಾಸ ಹಾಗು ವೈಶಿಷ್ಟತೆಗಳು

ಹೊಸ KTM 990 ಡ್ಯೂಕ್‌ನ ಅತ್ಯಂತ ಆಕರ್ಷಕ ಭಾಗವೆಂದರೆ ಅದರ ವಿನ್ಯಾಸ. 990 ಡ್ಯೂಕ್ ವಿಶಿಷ್ಟವಾದ ಹೆಡ್‌ಲೈಟ್ ವಿನ್ಯಾಸವನ್ನು ಹೊಂದಿದೆ. ಹೆಡ್‌ಲೈಟ್‌ಗಳಲ್ಲಿ ನಾಲ್ಕು ಡಿಆರ್‌ಎಲ್‌ಗಳಿವೆ. ನಾಲ್ಕು DRL ಗಳ ನಡುವೆ ಟೊಳ್ಳಾದ ವಿನ್ಯಾಸವಿದೆ. ದೊಡ್ಡದಾದ ಕೋನೀಯ ಟ್ಯಾಂಕ್ ಶೌಡರ್‌ಗಳನ್ನು ಹೊಂದಿದೆ.

ಹೊಸ 990 ಡ್ಯೂಕ್ ನಲ್ಲಿ WP-ನಿರ್ಮಿತ ಅಡ್ಜಸ್ಟೆಬಲ್‌ USD ಫೋರ್ಕ್‌ಗಳು ಗಮನಸೆಳೆಯುತ್ತವೆ. ಅದೇ ರೀತಿ ಹಿಂಭಾಗದಲ್ಲಿ ಸಂಪೂರ್ಣವಾಗಿ ಅಡ್ಜಸ್ಟ್‌ ಮಾಡಬಹುದಾದ ಮೊನೊಶಾಕ್, 17-ಇಂಚಿನ ಚಕ್ರಗಳು, ಬ್ರಿಡ್ಜ್‌ಸ್ಟೋನ್ S22 ಟೈರ್‌ಗಳು, ನಾಲ್ಕು-ಪಿಸ್ಟನ್ ಫ್ರಂಟ್ ಬ್ರೇಕ್ ಕಾಲರ್‌ಗಳು, LED ಲೈಟಿಂಗ್, ಹಿಂಭಾಗದ ಬ್ಲಿಂಕರ್‌ಗಳಲ್ಲಿ ಇಂಟಿಗ್ರೇಟೆಡ್ ಟೈಲ್‌ಲ್ಯಾಂಪ್‌ಗಳು ಮತ್ತು 5-ಇಂಚಿನ TFT ಡ್ಯಾಶ್‌ಬೋರ್ಡ್ ಅನ್ನು ಅಳವಡಿಸಲಾಗಿದೆ.

KTM 990 Duke Feature
Image Credit: Bikeexif

KTM 990 ಡ್ಯೂಕ್ ಎಂಜಿನ್ ಸಾಮರ್ಥ್ಯ

ಈ ಬೈಕ್ 947cc ಪ್ಯಾರಲಲ್ ಟ್ವಿನ್ ಎಂಜಿನ್ ಹೊಂದಿದ್ದು, 123bhp ಮತ್ತು 103Nm ಟಾರ್ಕ್ ನೀಡುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಹೊಸ 990 ಡ್ಯೂಕ್ ಮೂರು ರೈಡ್ ಮೋಡ್‌ಗಳನ್ನು ಹೊಂದಿದೆ. ವೀಲ್‌ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಸ್ವಿಚ್ ಮಾಡಬಹುದಾದ ಎಬಿಎಸ್, ಲಾಂಚ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್. ಹೊಸ 390 ಡ್ಯೂಕ್‌ನಂತೆಯೇ ಎಡ ಸ್ವಿಚ್‌ ಗಿಯರ್‌ನಿಂದ ಎಲ್ಲಾ ಹೆಲ್ಪ್‌ಗಳನ್ನು ಪ್ರವೇಶಿಸಬಹುದು.

Leave A Reply

Your email address will not be published.