Kuja Dosha: ಕುಜದೋಷ ಎಂದರೇನು, ಮದುವೆಗೂ ಕುಜದೋಷಕ್ಕೂ ಇರುವ ಸಂಬಂಧ…?

ಕುಜದೋಷಕ್ಕೂ ಮದುವೆಗೂ ಇರುವ ಸಂಬಂಧ ಹಾಗು ಪರಿಹಾರದ ಬಗ್ಗೆ ಮಾಹಿತಿ ತಿಳಿಯಿರಿ.

Kuja Dosha Effecs Marriage: ಜಗತ್ತು ಎಷ್ಟೇ ಅಭಿವೃದ್ಧಿಯತ್ತ ಸಾಗಿದರು, ಸಮಾಜ ಎಷ್ಟೇ ಬದಲಾದರು ಕೆಲವು ಆಚಾರ ವಿಚಾರ, ಸಂಪ್ರದಾಯ ನಂಬಿಕೆಗಳು ಇನ್ನು ಭೂಮಿ ಮೇಲೆ ಇದೆ. ಇಂದಿಗೂ ಕೂಡ ಪ್ರತಿ ಕೆಲಸಕ್ಕೂ ಒಳ್ಳೆಯ ದಿನ, ಸಮಯ, ಎಲ್ಲ ನೋಡುವುದು ನೆಡೆಯುತ್ತಲೇ ಇದೆ. ಹಾಗೆಯೆ ಮದುವೆ ವಿಚಾರಕ್ಕೆ ಬಂದರೆ ಈ ಆಚಾರ ವಿಚಾರಗಳು, ಜಾತಕ ಇವೆಲ್ಲ ಒಂದು ಹೆಜ್ಜೆ ಮುಂದೆಯೇ ಇದೆ ಎನ್ನಬಹದು.

ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಎಂಬುದು ಬಹಳ ಮುಖ್ಯ. ಗಂಡಾಗಲಿ ಹೆಣ್ಣಾಗಲಿ ಸುಖ ಮತ್ತು ನೆಮ್ಮದಿಯ ದಾಂಪತ್ಯ ಜೀವನವನ್ನು ಬಯಸುತ್ತಾರೆ. ಕೇವಲ ನಕ್ಷತ್ರಗಳ ಮೂಲಕ ಕೂಟ ಮತ್ತು ಗುಣಗಳನ್ನು ಅನ್ವಯಿಸಿ ಮಾಡುವ ಮದುವೆಗೆ ಅರ್ಥವಿಲ್ಲ, ಈ ರೀತಿ ಮದುವೆ ಮಾಡುವುದು ಸರಿಯಲ್ಲ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ.

Kuja Dosha
Image Credit: Hindustantimes

ಕುಜ ದೋಷ ಎಂದರೇನು?

ಲಗ್ನ, ಚತುರ್ಥ, ಅಷ್ಟಮ, ದ್ವಾದಶದಲ್ಲಿ ಭಾವಗಳಲ್ಲಿ ಇದ್ದರೆ ಕುಜ ದೋಷ ಎನ್ನುತ್ತೇವೆ. ಜಾತಕದಲ್ಲಿ ಕುಜದೋಷವಿದ್ದರೂ ಬಹುತೇಕ ಬಾರಿ ಕುಂಡಲಿಯಲ್ಲಿಯೇ ಪರಿಹಾರ ದೊರೆತಿರುತ್ತದೆ. ಆದ್ದರಿಂದ ದುಡುಕುತನದಿಂದ ಕೇವಲ ಕುಜದೋಷವನ್ನು ದೃಷ್ಟಿಯಾಗಿರಿಸಿಕೊಂಡು ವಿವಾಹ ಕಾರ್ಯವನ್ನು ನಿಲ್ಲಿಸಬಾರದು. ಒಂದು ವೇಳೆ ಹುಡುಗ ಮತ್ತು ಹುಡುಗಿ ಇಬ್ಬರ ಜಾತಕಗಳಲ್ಲೂ ಕುಜ ದೋಷವಿದ್ದಲ್ಲಿ ಯಾವುದೇ ತೊಂದರೆ ಇರುವುದಿಲ್ಲ.

ಕುಜನೂ ಸಪ್ತಮದಲ್ಲಿದ್ದು ಶನಿಯ ದೃಷ್ಟಿ ಇದ್ದರೆ ಪ್ರಬಲ ದೋಷ ಎನ್ನುತ್ತಾರೆ. ಆದರೆ ಕುಜನೂ ಮಿತ್ರ ಕ್ಷೇತ್ರ ಅಥವಾ ಶಕ್ತಿಶಾಲಿಯಾಗಿದ್ದಲ್ಲಿ ಯಾವುದೇ ತೊಂದರೆ ಇರದು. ಕುಜನು ಯಾವುದೇ ಮನೆಯಲ್ಲಿ ಇದ್ದರು ಗುರುವಿನ ದೃಷ್ಟಿ ಇದ್ದಲ್ಲಿ ಅಥವಾ ಗುರುವಿನ ಜೊತೆ ಇದ್ದಲ್ಲಿ ಯಾವುದೇ ತೊಂದರೆ ಉಂಟಾಗದು. ಹುಡುಗನ ಕುಂಡಲಿಯಲ್ಲಿ ಲಗ್ನಾಧಿಪತಿ ಮತ್ತು ಅಷ್ಠಮಾಧಿಪತಿಗಳು ಶಕ್ತರಾಗಿದ್ದು ಹುಡುಗಿಯ ಜಾತಕದಲ್ಲಿ ಕುಜದೋಷವಿದ್ದಲ್ಲಿ ಯಾವುದೇ ತೊಂದರೆ ಆಗದು.

Relationship Between Marriage And Kuja Dosha
Image Credit: Vijaykarnataka

ಕುಜ ದೋಷಕ್ಕೆ ಪರಿಹಾರಗಳು

ಹುಡುಗಿಯ ಜಾತಕದಲ್ಲಿ ಲಗ್ನಾಧಿಪತಿ ಮತ್ತು ಅಷ್ಠಮಾಧಿಪತಿಗಳು ಶಕ್ತರಾಗಿದ್ದು ಹುಡುಗನ ಕುಂಡಲಿಯಲ್ಲಿ ಕುಜ ದೋಷವಿದ್ದರೂ ಯಾವುದೇ ತೊಂದರೆ ಆಗದು. ಯಾವುದೇ ಜಾತಕದಲ್ಲಿ ಕುಜನ ಮನೆಯಲ್ಲಿ ಶುಕ್ರ ಮತ್ತು ಶುಕ್ರನ ಮನೆಯಲ್ಲಿ ಕುಜನಿದ್ದಲ್ಲಿ ಯಾವುದೇ ಮನೆಯಾದರು ಕುಜ ದೋಷದ ತೊಂದರೆ ಬರುವುದಿಲ್ಲ. ಒಂದು ವೇಳೆ ಕುಂಡಲಿಯಲ್ಲಿ ದೋಷವಿದ್ದರೂ ವಿವಾಹ ಮಹೂರ್ತವನ್ನು ಸರಿಯಾದ ಮಾದರಿಯಲ್ಲಿ ನಿರ್ಧರಿಸಬೇಕು. ಇಂತಹ ಸಂದರ್ಭದಲ್ಲಿ ಯಾವುದೇ ದೋಷ ಉಂಟಾಗುವುದಿಲ್ಲ.

ರಕ್ತದ ಒತ್ತಡದ ದೋಷ ಬರುವ ಸಾಧ್ಯತೆಯೂ ಇರುತ್ತದೆ

ಕುಜನು ಹುಡುಗನ ಅಥವಾ ಹುಡುಗಿಯ ಆಯಸ್ಸನ್ನು ಸೂಚಿಸುವುದಿಲ್ಲ. ಕುಜನಿಂದ ರಕ್ತದ ಬಗ್ಗೆ ಸಹ ತಿಳಿಯಬಹುದು. ತಮ್ಮ ಅಥವಾ ತಂಗಿಯ ಬಗ್ಗೆಯೂ ತಿಳಿಯಬಹುದು. ಈ ಕಾರಣದಿಂದ ಕುಜ ದೋಷವಿದ್ದಲ್ಲಿ ರಕ್ತದ ಒತ್ತಡದ ದೋಷ ಬರುವ ಸಾಧ್ಯತೆಯೂ ಇರುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಕೇವಲ ಕುಜ ದೋಷದ ಕಾರಣ ಅಥವಾ ಕೆಟ್ಟ ನಕ್ಷತ್ರವೆಂಬ ವಿವಾಹವನ್ನು ರದ್ದು ಮಾಡಬಾರದು. ಸಾಧ್ಯವಾದಷ್ಟು ರೋಹಿಣಿ, ಸ್ವಾತಿ, ರೇವತಿ, ಮೃಗಶಿರ, ಮೂಲ, ಮುಖ, ಹಸ್ತ ಅನುರಾಧ, ಉತ್ತರ, ಉತ್ತರಾಷಾಡ ಮತ್ತು ಉತ್ತರಭಾದ್ರ ನಕ್ಷತ್ರಗಳಲ್ಲಿ ವಿವಾಹವನ್ನು ಮಾಡಬೇಕಾಗುತ್ತದೆ.

Leave A Reply

Your email address will not be published.