Lakshmi Hebbalkar: ಈ ಕಾರಣಗಳಿಂದ ಮಹಿಳೆಯರ ಖಾತೆಗೆ ಜಮಾ ಆಗುತ್ತಿಲ್ಲ ಗೃಹಲಕ್ಷ್ಮಿ ಹಣ, ಮಹಿಳೆಯರೇ ಈ ತಪ್ಪು ಸರಿಪಡಿಸಿಕೊಳ್ಳಿ.

ಗೃಹ ಲಕ್ಷ್ಮಿ ಹಣ ಖಾತೆಗೆ ಬಾರದೆ ಇರಲು ಕಾರಣ ತಿಳಿಸಿದ ಲಕ್ಷ್ಮಿ ಹೆಬ್ಬಾಳ್ಕರ್.

Lakshmi Hebbalkar About Gruha Lakshmi Scheme: ರಾಜ್ಯದಲ್ಲಿ ಎಲ್ಲಾ ಕಡೆ ಗೃಹಲಕ್ಷ್ಮಿ (Gruha Lakshmi) ಯೋಜನೆಯ ಕುರಿತು ಮಾತುಕತೆ ನಡೆಯುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ 05 ಗ್ಯಾರೆಂಟಿ ಯೋಜನೆಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದು, ಈ 5 ಗ್ಯಾರೆಂಟಿ ಯೋಜನೆಯಲ್ಲಿ 4 ಯೋಜನೆಗಳು ಜಾರಿಗೆ ಬಂದಿದೆ. ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಕೆಲ ಮಹಿಳೆಯರಿಗೆ ಬಾರಿ ತಲೆಬಿಸಿ ಕೊಡುತ್ತಿದೆ.

ಯಾಕೆಂದರೆ ಗೃಹಲಕ್ಷ್ಮಿ ಯೋಜನೆ ಪ್ರಾರಂಭ ಆಗಿ ಈಗಾಗಲೇ 03 ತಿಂಗಳು ಕಳೆದಿದ್ದು, ಇನ್ನು ಒಂದು ಕಂತಿನ ಹಣ ಕೂಡ ಬರದೇ ಇರುವ ಮಹಿಳೆಯರಿದ್ದಾರೆ. ಈ ಯೋಜನೆಯಡಿ ಸರಕಾರ ಯಜಮಾನಿ ಮಹಿಳೆಯ ಖಾತೆಗೆ ಪ್ರತಿ ತಿಂಗಳು 2000 ಸಾವಿರ ರೂಪಾಯಿ ನೀಡುವುದಾಗಿ ಹೇಳಿತ್ತು, ಆದರೆ ಅರ್ಹ ಕೆಲ ಮಹಿಳೆಯರು ಇನ್ನು ಈ ಯೋಜನೆಯಿಂದ ಯಾವುದೇ ಹಣ ಪಡೆದಿಲ್ಲ.

Lakshmi Hebbalkar About Gruha Lakshmi Scheme
Image Credit: News Next Live

ಚಿಂತೆ ಬಿಡಿ, ಗೃಹಲಕ್ಷ್ಮಿ ನಿಮ್ಮ ಖಾತೆ ಸೇರುತ್ತದೆ ಅಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಮಹಿಳೆಯರನ್ನು ಆಕರ್ಷಿಸುವ ಈ ಯೋಜನೆ ಮಹಿಳೆಯರನ್ನು ಚಿಂತೆಗೆ ಒಳಪಡಿಸಿದೆ. ಕರ್ನಾಟಕದಲ್ಲಿ ಅಂದಾಜು 1 ಕೋಟಿ 23 ಲಕ್ಷ ಫಲಾನುಭವಿಗಳನ್ನು ಹೊಂದಿರೋ ಗೃಹಲಕ್ಷ್ಮೀ ಯೋಜನೆ ಆರಂಭವಾಗಿ ಮೂರು ತಿಂಗಳು ಕಳೆದಿದೆ. ಆದರೆ ಈ ಯೋಜನೆಯಡಿಯಲ್ಲಿ ಇದುವರೆಗೂ ಕೆಲ ಮಹಿಳೆಯರು ಒಂದು ಕಂತಿನ ಹಣ ಕೂಡ ಪಡೆದಿಲ್ಲ. ಹೀಗಾಗಿ ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆ ಯಶಸ್ವಿಯಾಗೋದಿಲ್ಲ. ಮಹಿಳೆಯರ ಅಕೌಂಟ್ ಗೆ ಹಣ ಬರೋದಿಲ್ಲ. ಹೊಸ ಫಲಾನುಭವಿಗಳ ಸೇರ್ಪಡೆ ಇಲ್ಲ ಎಂಬುದು ಸೇರಿದಂತೆ ಹಲವು ರೀತಿಯ ಊಹಾಪೋಹಗಳು ಹರಿದಾಡಲಾರಂಭಿಸಿವೆ. ಆದರೆ ಇವೆಲ್ಲದಕ್ಕೂ ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತೆರೆ ಎಳೆದಿದ್ದಾರೆ.

ಗೃಹಲಕ್ಷ್ಮಿ ವಿಳಂಬಕ್ಕೆ ಅನುದಾನ ಕೊರತೆ ಕಾರಣವಲ್ಲ, ಟೆಕ್ನಿಕಲ್‌ ಸಮಸ್ಯೆ

ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಗೃಹಲಕ್ಷ್ಮೀ ವಿಳಂಬ ಆಗುತ್ತಿರುವುದು ಹಾಗೂ ಹಣ ಖಾತೆಗೆ ಬರದೇ ಇರೋದರಿಂದ ಸೃಷ್ಟಿಯಾಗ್ತಿರೋ ಊಹಾಪೋಹಗಳ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ. ಈಗಾಗಲೇ ರಾಜ್ಯದಲ್ಲಿ ನಾವು ಗೃಹಲಕ್ಷ್ಮೀ ಯೋಜನೆಯ ಪ್ರಕ್ರಿಯೆಯನ್ನು ಸರಳಗೊಳಿಸಿದ್ದೇವೆ. ಈಗಾಗಲೇ ರಾಜ್ಯದ 1.9 ಕೋಟಿ ಮಹಿಳೆಯರನ್ನು ಯೋಜನೆ ತಲುಪಿದೆ. ಆದರೆ ಇನ್ನೂ ರಾಜ್ಯದಲ್ಲಿ ಅಂದಾಜು ಐದಾರು ಲಕ್ಷ ಮಹಿಳೆಯರು ಯೋಜನೆಯಿಂದ ವಂಚಿತರಾಗಿದ್ದಾರೆ.

Gruha Lakshmi Scheme Latest Update
Image Credit: Deccanherald

ಆದರೆ ಇದು ವಿಳಂಬ ಆಗುತ್ತಿರುವುದಕ್ಕೆ ಅನುದಾನ ವಿಳಂಬ ಕಾರಣ ಅಲ್ಲ, ಬದಲಾಗಿ ಟೆಕ್ನಿಕಲ್‌ ಸಮಸ್ಯೆ ಎದುರಾಗ್ತಿದೆ. 15 ಲಕ್ಷ ಮಹಿಳೆಯರು ಆಧಾರ ಕಾರ್ಡ್ ಲಿಂಕ್ ಆಗದ ಅಕೌಂಟ್ ನೀಡಿದ್ದಾರೆ. ಅಂತವರ ಅಕೌಂಟ್ ಚಾಲ್ತಿಯಲ್ಲಿ ಇಲ್ಲ. ಹೀಗಾಗಿ ಹಣ ಹಾಕಲು ವಿಳಂಬವಾಗ್ತಿದೆ. ಅನುದಾನದ ಕೊರತೆ ಅನ್ನೋದೆಲ್ಲ ಸುಳ್ಳು.ಯೋಜನೆಗೆ ಯಾವುದೇ ರೀತಿಯಲ್ಲೂ ಅನುದಾನದ ಕೊರತೆ ಇಲ್ಲ. ಸಿಎಂ ಸಿದ್ಧರಾಮಯ್ಯನವರು ಈ ಯೋಜನೆಗಾಗಿ ಅನುದಾನ ತೆಗೆದಿರಿಸಿದ್ದಾರೆ ಎಂದಿದ್ದಾರೆ.

ಮಹಿಳೆಯರೇ ನಿಮ್ಮ ಬ್ಯಾಂಕ್ ಖಾತೆಯನ್ನು ಸರಿಪಡಿಸಿಕೊಳ್ಳಿ

ಮಹಿಳೆಯರೇ ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಲಿಂಕ್ ಮಾಡಿಸಿಕೊಳ್ಳಿ, ನಿಮಗೆ ಗೃಹಲಕ್ಷ್ಮೀ ಹಣ ಬರದೇ ಇರಲು ಇದು ಕೂಡ ಒಂದು ಕಾರಣವಾಗಿದೆ ಹಾಗಾಗಿ ಇಂದೇ ನಿಮ್ಮ ಬ್ಯಾಂಕ್ ಗೆ ಭೇಟಿ ನೀಡಿ. ಹಾಗು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೇಳಿಕೆಯಂತೆ ಇನ್ನು ಮುಂದಿನ ಹಂತಿನ ಹಣ ನಿಮ್ಮ ಖಾತೆ ಸೇರಲಿದೆ.

Leave A Reply

Your email address will not be published.