Gruha Lakshmi Yojana: ಗೃಹಲಕ್ಷ್ಮಿ ಹಣ ಇನ್ನು ಪಡೆಯದ ಮಹಿಳೆಯರಿಗೆ ಗುಡ್ ನ್ಯೂಸ್, ಈ ಸರಳ ವಿಧಾನ ಪಾಲಿಸಿದರೆ ಮಿಸ್ ಆಗದೆ ಖಾತೆಗೆ ಹಣ ಜಮಾ.

ಮಹಿಳೆಯರೇ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಬರಬೇಕಾ, ಹಾಗಿದ್ದಲ್ಲಿ ಕಡ್ಡಾಯವಾಗಿ ಈ ಕೆಲಸವನ್ನು ಮೊದಲು ಮಾಡಿಕೊಳ್ಳಿ.

Lakshmi Hebbalkar About Gruha Lakshmi Yojana: ರಾಜ್ಯದ ಬಹುನಿರೀಕ್ಷಿತ ಗೃಹಲಕ್ಷ್ಮಿ ಯೋಜನೆ(Gruha Lakshmi) ಜಾರಿಗೆ ಬಂದು 03 ತಿಂಗಳು ಕಳೆದಿದೆ. ಈಗಾಗಲೇ ಹಲವಾರು ಮಹಿಳೆಯರು ಈ ಯೋಜನೆಯ ಎರಡು ಕಂತಿನ ಹಣವನ್ನು ಪಡೆದಿದ್ದಾರೆ. ಆದರೆ ಇನ್ನು ಕೆಲವರು ಈ ಯೋಜನೆಯ ಒಂದು ಕಂತಿನ ಹಣ ಕೂಡ ಪಡೆದಿಲ್ಲ.

ಈ ವಿಚಾರವಾಗಿ ಹಲವು ದೂರುಗಳು ಬಂದಿದ್ದು, ಸರ್ಕಾರ ಮಾತ್ರ ತಂತ್ರಿಕಾ ದೋಷ ಹಾಗು ಅರ್ಜಿದಾರರ ದೋಷವನ್ನು ಹೇಳುತ್ತಿದೆ. ಏನೇ ಆದರೂ ನಿಮ್ಮ ಗೃಹಲಕ್ಷ್ಮಿ ಹಣ ನಿಮಗೆ ಸಿಗುತ್ತದೆ ಎಂದು ಸರಕಾರ ಭರವಸೆ ಮಾತ್ರ ನೀಡುತ್ತಿದೆ. ಹಾಗೆಯೆ ಇನ್ನು ಮಹಿಳೆಯರು ಮಾಡಬೇಕಾದ ಬಹಳ ಮುಖ್ಯದ ಕೆಲಸ ಒಂದಿದೆ ಅದನ್ನು ಇಲ್ಲಿ ತಿಳಿಯಿರಿ.

Gruha Lakshmi Yojana Latest News
Image Credit: Original Source

ಗೃಹಲಕ್ಷ್ಮಿ ಯೋಜನೆಯ ಕುರಿತು ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಯಜಮಾನಿ ಮಹಿಳೆಯ ಖಾತೆಗೆ ಪ್ರತಿ ತಿಂಗಳು 2000 ರೂಪಾಯಿಯನ್ನು ಸರಕಾರ ಜಮೆ ಮಾಡುತ್ತಿದೆ. ಈಗಾಗಲೇ ಇಲ್ಲಿಯವರೆಗೆ 1.9 ಕೋಟಿ ಮಹಿಳೆಯರ ಖಾತೆಗೆ ಹಣ ತಲುಪಿದೆ ಆದರೆ ಇನ್ನು ಸುಮಾರು 9 ಲಕ್ಷದಷ್ಟು ಮಹಿಳೆಯರಿಗೆ ಹಣ ಸಂದಾಯವಾಗಿಲ್ಲ.

ಇತ್ತೀಚಿಗೆ ಈ ಬಗ್ಗೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ಯಜಮಾನಿಯರ ಅಕೌಂಟ್ ಗೆ ಹಣ ಬರುತ್ತೆ, ಇದಕ್ಕಾಗಿ ಸರಳ ಸೀಡಿಂಗ್ ಆಗದೆ ಇರುವುದು ಹಾಗೂ ಕೆಲವು ತಾಂತ್ರಿಕ ದೋಷಗಳಿಂದ ಹಣ ಬಂದಿಲ್ಲ ಎಂದರು. ಗೃಹಲಕ್ಷ್ಮಿ ಯೋಜನೆಗೆ ಹಣ ಹಾಕಲು ಸರ್ಕಾರದ ಬಳಿ ದುಡ್ಡಿಲ್ಲ ಎಂದೆಲ್ಲಾ ಜನರು ಮಾತನಾಡಿಕೊಳ್ಳುತ್ತಿದ್ದಾರೆ, ಆದರೆ ಸಮಸ್ಯೆ ಅದಲ್ಲ. ನಾವು ಗೃಹಲಕ್ಷ್ಮಿ ಯೋಜನೆಗಾಗಿ ಹಣ ಮೀಸಲಿಟ್ಟಿದ್ದೇವೆ ಹಾಗಾಗಿ ಮಿಸ್ ಆಗದೆ ಪ್ರತಿಯೊಬ್ಬರ ಖಾತೆಗೂ ಹಣ ಜಮಾ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

Lakshmi Hebbalkar About Gruha Lakshmi Yojana
Image Credit: News Next Live

ಈ ಕೆಲಸವನ್ನು ಮನೆಯ ಯಜಮಾನಿ ಕಡ್ಡಾಯವಾಗಿ ಮಾಡತಕ್ಕದ್ದು

ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಇನ್ನೂ ಬರದೇ ಇದ್ರೆ ಮಹಿಳೆಯರು ಹತ್ತಿರದ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ, ಸಿಡಿಪಿಓ ಅಧಿಕಾರಿಗಳನ್ನು ಭೇಟಿಯಾಗಿ ನಿಮ್ಮ ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆಯ ಸ್ವೀಕೃತಿ, ಬ್ಯಾಂಕ್ ಪಾಸ್ ಬುಕ್ , ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಪ್ರತಿಯನ್ನು ನೀಡಿ ಅವರ ಬಳಿ ಸಲಹೆಯನ್ನ ಪಡೆದುಕೊಳ್ಳಿ, ಏಕೆ ಹಣ ಬರಲಿಲ್ಲ, ಏನು ಸಮಸ್ಯೆಯಾಗಿದೆ..ಏನು ಮಾಡಬೇಕು ಎಂಬ ಸಲಹೆ ಪಡೆಯಿರಿ. ಹಾಗು ಅವರು ನಿಮಗೆ ಸರಿಯಾದ ಮಾಹಿತಿ ನೀಡುತ್ತಾರೆ ಹಾಗು ನಿಮ್ಮಿಂದ ಏನಾದರೂ ದೋಷ ಇದ್ದರೆ ಅದನ್ನು ಸರಿ ಮಾಡಿಕೊಡುತ್ತಾರೆ ಎನ್ನಲಾಗಿದೆ .

1 Comment
  1. Maxwell Rojas says

    Maxwell Rojas

Leave A Reply

Your email address will not be published.