Solar Eclipse: ಅ 14 ವರ್ಷದ ಕೊನೆಯ ಸೂರ್ಯಗ್ರಹಣ, ಎಲ್ಲೆಲ್ಲಿ ಘೋಚರ ಆಗಲಿದೆ ಕೊನೆಯ ಸೂರ್ಯಗ್ರಹಣ.

ಈ ವರ್ಷದ ಕೊನೆಯ ಸೂರ್ಯಗ್ರಹಣ, ಭಾರತದಲ್ಲಿ ಗೋಚರಿಸಲಿದೆಯೇ ಈ ಗ್ರಹಣ...?

Last Solar Eclipse 2023: ಇದೇ ಅಕ್ಟೋಬರ್ 14 ಶನಿವಾರದಂದು ವರ್ಷದ ಕೊನೆಯ ಸೂರ್ಯ ಗ್ರಹಣ ಸಂಭವಿಸಲಿದೆ. ಇದನ್ನು ಸಾಮಾನ್ಯವಾಗಿ ‘ರಿಂಗ್ ಆಫ್ ಫೈರ್’, ವಾರ್ಷಿಕ ಸೂರ್ಯಗ್ರಹಣ, ಎನ್ನಲಾಗುತ್ತದೆ.ಆ ದಿನ ಚಂದ್ರನ ಸುತ್ತ ಸೂರ್ಯನು ಬೆಂಕಿ ಉಂಗುರವನ್ನು ಸೃಷ್ಟಿಸಲಿದ್ದಾನೆ. ಗ್ರಹಣವು ಚಂದ್ರನ ಮೂಲಕ ಸಂಭವಿಸಲಿದ್ದು ಸೂರ್ಯ ಮತ್ತು ಭೂಮಿಯ ನಡುವೆ ಚಲಿಸುತ್ತದೆ.

ಸೂರ್ಯನು ಭಾಗಶಃ ಮರೆಯಾಗುತ್ತಾನೆ ಮತ್ತು ಬೆರಗುಗೊಳಿಸುವ ಉಂಗುರ ಗೋಚರಿಸುತ್ತದೆ. ಇದೇ ಕಾರಣಕ್ಕೆ ಈ ಗ್ರಹಣವನ್ನು ‘ರಿಂಗ್ ಆಫ್ ಫೈರ್’ ಎಂದು ಕರೆಯಲಾಗಿದೆ.ಆದಾಗ್ಯೂ ಜನ ಗ್ರಹಣ ಅನ್ನೋದನ್ನ ಸ್ವಲ್ಪ ಮಟ್ಟಿಗೆ ಪ್ರಸ್ತುತ ಖಗೋಳ ವಿಸ್ಮಯ ಎಂದು ನಂಬುತ್ತಿದ್ದಾರೆ. ಈಗ ಇಂತಹ ಮತ್ತೊಂದು ವಿಸ್ಮಯಕ್ಕೆ ಆಕಾಶ ಸಾಕ್ಷಿಯಾಗಲಿದೆ. 

Solar Eclipse 2023
Image Credit: Vijaykarnataka

ಭಾರತದಲ್ಲಿ ಸೂರ್ಯ ಗ್ರಹಣ ಇದೆಯೇ?

ಅಕ್ಟೋಬರ್ 14 ರಂದು ಸಂಭವಿಸುತ್ತಿರುವ ಈ ಸೂರ್ಯ ಗ್ರಹಣ ಭಾರತದಲ್ಲಿ ಗೋಚರಿಸುತ್ತಿಲ್ಲ. ಆದಾಗ್ಯೂ, ಪಶ್ಚಿಮ ಗೋಳಾರ್ಧದ ಜನರು ಈ ವಿದ್ಯಮಾನವನ್ನು ಅನುಭವಿಸಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಗ್ರಹಣ ಅಮೇರಿಕಾದಲ್ಲಿ ನೋಡಬಹುದಾಗಿದೆ. ಇದು ಒರೆಗಾನ್‌ನಿಂದ ಟೆಕ್ಸಾಸ್‌ಗೆ USA ಅನ್ನು ದಾಟುವ ಕಿರಿದಾದ ಹಾದಿಯಲ್ಲಿ ಗೋಚರಿಸುತ್ತದೆ. ಇದು ನಂತರ ಮೆಕ್ಸಿಕೋದ ಯುಕಾಟಾನ್ ಪೆನಿನ್ಸುಲಾ, ಬೆಲೀಜ್, ಗ್ವಾಟೆಮಾಲಾ, ಹೊಂಡಾರುಸ್, ನಿಕರಾಗುವಾ, ಕೋಸ್ಟರಿಕಾ, ಪನಾಮ, ಕೊಲಂಬಿಯಾ ಮತ್ತು ಬ್ರೆಜಿಲ್ನ ಭಾಗಗಳನ್ನು ಹಾದುಹೋಗುತ್ತದೆ.

NASA ವಿಜ್ಞಾನಿಗಳ ಸಂಶೋಧನೆಯ ಪ್ರಕಾರ ಸೂರ್ಯ ಗ್ರಹಣ ಮಾಹಿತಿ

ಅಕ್ಟೋಬರ್ 14, ಶನಿವಾರ ಆನ್ಯುಲರ್ ಅಥವಾ ವಾರ್ಷಿಕ ಸೌರ ಗ್ರಹಣವು ಒಂದು ಸ್ಥಳದಲ್ಲಿ ಪ್ರಾರಂಭವಾಗುತ್ತದೆ ಮತ್ತು ಇನ್ನೊಂದು ಸ್ಥಳದಲ್ಲಿ ಕೊನೆಗೊಳ್ಳುತ್ತದೆ ಎಂದು NASA ಹೇಳಿದೆ. ಆ ಪ್ರಕಾರ ಸಮಯ ನೋಡೋದಾದರೆ, ಈ ಗ್ರಹಣ ಒರೆಗಾನ್‌ನಲ್ಲಿ 9:13 am (PDT) ಕ್ಕೆ ಪ್ರಾರಂಭವಾಗುತ್ತದೆ ಮತ್ತು 12:03 pm (CDT) ಗೆ ಟೆಕ್ಸಾಸ್‌ ನಲ್ಲಿ ಕೊನೆಗೊಳ್ಳುತ್ತದೆ. ಈ ಗ್ರಹಣ ಸಂಭವಿಸಿದ ನಂತರ ಮುಂದಿನ ಈ ಸೂರ್ಯ ಗ್ರಹಣ ಅಮೇರಿಕಾದಲ್ಲಿ ಜೂನ್ 21, 2039 ಕ್ಕೆ ಸಂಭವಿಸಲಿದೆ. ‌ರಿಂಗ್ ಆಫ್ ಫೈರ್ ಎಂಬ ಈ ಗ್ರಹಣವನ್ನು ಅಮೇರಿಕಾದಲ್ಲಿ ನೋಡಲು ಇನ್ನೂ 15 ವರ್ಷ ಕಾಯಬೇಕು.

Last Solar Eclipse 2023
Image Credit: Vijaykarnataka

ಸುರಕ್ಷಿತವಾಗಿ ಸೂರ್ಯ ಗ್ರಹಣ ವೀಕ್ಷಿಸಬಹುದು

ಯಾರು ಈ ಗ್ರಹಣ ಸಂಭವಿಸುತ್ತಿರುವ ಭಾಗದಲ್ಲಿದ್ದೀರೋ ಅವರು ಈ ಗ್ರಹಣವನ್ನು ನೋಡವ ಅವಕಾಶವಿದೆ. ಗ್ರಹಣ ಸಂಭವಿಸುವ ಸಮಯದಲ್ಲಿ ಸೂರ್ಯನನ್ನು ನೇರವಾಗಿ ನೋಡುವುದು ಎಂದಿಗೂ ಸುರಕ್ಷಿತವಲ್ಲ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಿ. ಗ್ರಹಣವನ್ನು ಬರಿ ಗಣ್ಣಿನಲ್ಲಿ ವೀಕ್ಷಿಸುವುದಕ್ಕಿಂತ ಸೌರ ವೀಕ್ಷಣೆಗಾಗಿ ವಿನ್ಯಾಸಗೊಳಿಸಲಾದ ವಿಶೇಷ ಕಣ್ಣಿನ ರಕ್ಷಣೆಯಿಂದ ವಾರ್ಷಿಕ ಸೂರ್ಯಗ್ರಹಣವನ್ನು ಕಣ್ತುಂಬಿಕೊಳ್ಳಿ.

ಇದೆ ತಿಂಗಳಲ್ಲಿ ಭಾರತದಲ್ಲಿ ಚಂದ್ರ ಗ್ರಹಣ ಸಂಭವಿಸಲಿದೆ

ಈ ತಿಂಗಳು ಜಗತ್ತು ಎರಡೆರೆಡು ಖಗೋಳ ಅದ್ಭುತಕ್ಕೆ ಸಾಕ್ಷಿಯಾಗಲಿದೆ. ಮೊದಲು ʻರಿಂಗ್ ಆಫ್ ಫೈರ್’ ಎನ್ನುವ ವಾರ್ಷಿಕ ಸೂರ್ಯಗ್ರಹಣ ಉಂಟಾದರೆ ಕೆಲವೇ ದಿನಗಳ ಅಂತರದಲ್ಲಿ ಚಂದ್ರಗ್ರಹಣ ಕೂಡ ನಡೆಯಲಿದೆ. ಇನ್ನೂ ಇದೇ ತಿಂಗಳ ಹದಿನೈದು ದಿನಗಳ ಅಂತರದ ಅವಧಿಯಲ್ಲಿ ಚಂದ್ರಗ್ರಹಣ ಕೂಡ ಸಂಭವಿಸಲಿದೆ. ಎರಡನೇ ಮತ್ತು ಕೊನೆಯ ಚಂದ್ರಗ್ರಹಣವು ಅಕ್ಟೋಬರ್ 28, 29 ರಂದು ನಡೆಯುತ್ತದೆ.

Leave A Reply

Your email address will not be published.