Lava 01: ಅತೀ ಕಡಿಮೆ ಲಾಂಚ್ ಆಗಿದೆ ದೇಸಿ ಮೊಬೈಲ್, 5000 mAh ಬ್ಯಾಟರಿ ಇರುವ ಮೊಬೈಲ್ ಕೊಳ್ಳಲು ಜನಸಂದಣಿ.
ಸ್ವದೇಶಿ ಬ್ರ್ಯಾಂಡ್ ನಿಂದ ಹೊಸ ಸ್ಮಾರ್ಟ್‌ಫೋನ್ ಪರಿಚಯ, ಅಗ್ಗದ ಬೆಲೆಗೆ ಇಂದೇ ಬುಕ್ ಮಾಡಿ.
Lava 01 Smart Phone: ಸ್ವದೇಶಿ ಬ್ರ್ಯಾಂಡ್ ಲಾವಾ (Lava) ಕಂಪನಿ ಇತ್ತೀಚಿಗೆ ವಿಭಿನ್ನ ಮಾದರಿಯ ನ್ಯೂ ಲುಕ್ ಸ್ಮಾರ್ಟ್‌ಫೋನ್‌ಗಳಿಂದ ಸ್ವದೇಶಿ ಮೇನಿಯಾ ಶುರು ಮಾಡಿ, ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. . ಅದರ ಮುಂದುವರೆದ ಭಾಗವಾಗಿ ಎಂಟ್ರಿ ಲೆವೆಲ್ ಲಾವಾ O1 ಸ್ಮಾರ್ಟ್‌ಫೋನ್ ಭಾರತದಲ್ಲಿ ಲಾಂಚ್ ಆಗಿದೆ.ಇದು ಯುನಿಸೋಕ್ T606 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.
ಈ ಸ್ಮಾರ್ಟ್‌ಫೋನ್ ವಾಟರ್‌ಡ್ರಾಪ್ ನಾಚ್‌ನೊಂದಿಗೆ 90Hz LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ತಿಳಿದುಕೊಳ್ಳಿ.
ಲಾವಾ O1 ಪ್ರೊಸೆಸರ್ ಬಗ್ಗೆ ಮಾಹಿತಿ
ಈ ಫೋನ್ ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಲಾವಾ O1 ಸ್ಮಾರ್ಟ್‌ಫೋನ್ ಯುನಿಸೋಕ್ T606 ಪ್ರೊಸೆಸರ್ ವೇಗವನ್ನು ಹೊಂದಿದೆ. ಜೊತೆಗೆ Mali G57 GPU ಸಪೋರ್ಟ್ ಪಡೆದಿದೆ. ಹಾಗು 3GB ವಿಸ್ತೃತ RAM ಅನ್ನು ಸಹ ಬೆಂಬಲಿಸಲಿದೆ. ಇದರೊಂದಿಗೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ಹೊಂದಿದೆ.
ಲಾವಾ O1 ಡಿಸ್‌ಪ್ಲೇ ರಚನೆ ಹಾಗೂ ಬ್ಯಾಟರಿ ಸಾಮರ್ಥ್ಯ
ಲಾವಾ O1 ಸ್ಮಾರ್ಟ್‌ಫೋನ್ 6.5 ಇಂಚಿನ IPS LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1600 × 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, ವಾಟರ್‌ಡ್ರಾಪ್ ನಾಚ್ ಶೈಲಿಯ ವಿನ್ಯಾಸವನ್ನು ಒಳಗೊಂಡಿದೆ. ಲಾವಾ O1 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು USB ಟೈಪ್-C ಚಾರ್ಜಿಂಗ್ ಪೋರ್ಟ್ ಮೂಲಕ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.
ಲಾವಾ O1 ಕ್ಯಾಮೆರಾ ಸೆಟ್‌ಅಪ್
ಲಾವಾ O1 ಸ್ಮಾರ್ಟ್‌ಫೋನ್ 13 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸಿಂಗಲ್ ರಿಯರ್ ಕ್ಯಾಮೆರಾ ಹೊಂದಿದೆ. ಈ ಫೋನ್ AI ಲೆನ್ಸ್ ಮತ್ತು LED ಫ್ಲ್ಯಾಷ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಸ್ಮಾರ್ಟ್‌ಫೋನ್ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.
ಭಾರತದಲ್ಲಿ ಲಾವಾ O1 ಬೆಲೆ
ಭಾರತದಲ್ಲಿ ಲಾವಾ O1 ಸ್ಮಾರ್ಟ್‌ಫೋನ್ 4GB + 64GB ಕಾನ್ಫಿಗರೇಶನ್ ಆಯ್ಕೆಗೆ 6,999 ರೂ.ಬೆಲೆಯನ್ನು ಹೊಂದಿದೆ. ಲಾಂಚ್ ಆಫರ್‌ನಲ್ಲಿ ಸೀಮಿತ ಅವಧಿಯವರೆಗೆ ಸ್ಮಾರ್ಟ್‌ಫೋನ್ 10% ರಿಯಾಯಿತಿಯೊಂದಿಗೆ 6,299 ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇದು ಅಕ್ಟೋಬರ್ 7 ರಿಂದ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ಸಮಯದಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇದನ್ನು ಲೈವ್ಲಿ ಲ್ಯಾವೆಂಡರ್, ಪ್ರಿಸ್ಮ್ ಬ್ಲೂ ಮತ್ತು ಲಕ್ಸ್ ರೆಡ್ ಕಲರ್ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.