LEO: ಐತಿಹಾಸಿಕ ಕಲೆಕ್ಷನ್ ಮಾಡಿದ Leo ಸಿನಿಮಾ, ಮೊದಲ ದಿನದ ಕಲೆಕ್ಷನ್ ನಲ್ಲಿ ಬಾಕ್ಸ್ ಆಫೀಸ್ ಧೂಳಿಪಟ.

ಹಲವು ದಾಖಲೆಗಳನ್ನು ಬ್ರೇಕ್ ಮಾಡಿದ ಲಿಯೋ ಸಿನಿಮಾ, ಮೊದಲ ದಿನವೇ ಕೋಟಿ ಕೋಟಿ ಕಲೆಕ್ಷನ್.

Leo Collection: ದಳಪತಿ ವಿಜಯ್‌ (Thalapathy Vijay) ಅಭಿನಯದ ʼಲಿಯೋʼ (Leo) ಸಿನಿಮಾ ಅಕ್ಟೋಬರ್ 19 ರಂದು ಭರ್ಜರಿಯಾಗಿ ದೇಶ ವಿದೇಶಗಳಲ್ಲಿ ತೆರೆ ಕಂಡಿತು. ಈ ಸಿನಿಮಾ ಎಲ್ಲರ ನಿರೀಕ್ಷೆಯ ಮಟ್ಟವನ್ನು ತಲುಪಿದ್ದು ಬಾಕ್ಸ್‌ ಆಫೀಸ್‌ ಗಳಕೆಯಲ್ಲಿ ಸಿನಿಮಾ ಭರ್ಜರಿ ಆರಂಭವನ್ನು ಪಡೆದುಕೊಂಡಿದೆ.

ಲಿಯೋ ಸಿನಿಮಾಕ್ಕೆ ಅಭಿಮಾನಿಗಳಿಂದ ಪಾಸಿಟಿವ್‌ ರೆಸ್ಪಾನ್ಸ್‌ ಸಿಕ್ಕಿದೆ. ಈಗಾಗಲೇ ಜವಾನ್ ಸಿನಿಮಾದ ರೆಕಾರ್ಡ್ ಅನ್ನು ಲಿಯೋ ಸಿನಿಮಾ ಬ್ರೇಕ್ ಮಾಡಿದೆ. ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಭರ್ಜರಿ ಯಶಸ್ಸನ್ನು ಕಾಣುತ್ತಿದೆ.                   

Leo Collection
Image Source: The Indian Express

                                                                                                                               

ಹಲವು ದಾಖಲೆಗಳನ್ನು ಮುರಿದ ಲಿಯೋ ಸಿನಿಮಾ

‘ʼಇಂಡಿಯಾ ಟುಡೇʼ ಜೊತೆ ಮಾತನಾಡಿದ ಟ್ರೇಡ್ ಎಕ್ಸ್‌ಪರ್ಟ್ ರಮೇಶ್ ಬಾಲ ಲಿಯೋ’ ಕಲೆಕ್ಷನ್‌ ಬಗ್ಗೆ ಹೇಳಿಕೆ ನೀಡಿದ್ದಾರೆ. “ದಸರಾ ರಜಾ ಸಮಯದ ವೇಳೆ ʼಲಿಯೋʼ ಸಿನಿಮಾಕ್ಕೆ ಪ್ರಯೋಜನವಾಗಲಿದೆ. ತಮಿಳು ಸಿನಿಮಾರಂಗದಲ್ಲಿ ʼಲಿಯೋʼ ದೊಡ್ಡ ಓಪನಿಂಗ್‌ ಪಡೆದುಕೊಂಡಿದೆ.’ಜೈಲರ್’ ಮತ್ತು ‘ಪೊನ್ನಿಯಿನ್ ಸೆಲ್ವನ್’ ಚಿತ್ರಗಳಿಗಿಂತ ‘ಲಿಯೋ’ ಉತ್ತಮ ಪ್ರದರ್ಶನ ನೀಡಿದೆ. ಗ್ಲೋಬಲ್‌ ಮಾರ್ಕೆಟ್‌ ನಿಂದಾಗಿ ದೊಡ್ಡ ಓಪನಿಂಗ್‌ ಪಡೆಯಲು ಕಾರಣವಾಗಿದೆ.

ತಮಿಳುನಾಡಿನಲ್ಲಿ ʼಲಿಯೋʼ ದಾಖಲೆ ಬರೆಯಲು ಸಾಧ್ಯವಾಗಿಲ್ಲ. ಏಕೆಂದರೆ ಅಲ್ಲಿ ಮುಂಜಾನೆ 4 ಹಾಗೂ 7 ಗಂಟೆಯ ಶೋಗಳಿರಲಿಲ್ಲ. ಆದರೆ, ಕರ್ನಾಟಕ ಮತ್ತು ಕೇರಳದಂತಹ ಇತರ ಸ್ಥಳಗಳಲ್ಲಿ ಮಾರ್ನಿಂಗ್‌ ಶೋಗಳಿತ್ತು, ಪ್ರಿಮಿಯರ್‌ ಶೋಗಳಿತ್ತು. ಇದು ಚಿತ್ರಕ್ಕೆ ಪ್ಲಸ್‌ ಆಯಿತು. ವಿದೇಶದ ಮಾರ್ಕೆಟ್‌ ನಲ್ಲಿ ಮೊದಲೇ ಸಿನಿಮಾದ ಪ್ರಚಾರ ಆರಂಭಿಸಲಾಗಿತ್ತು. ಇದರಿಂದ ವಿದೇಶದಲ್ಲಿ ಟಿಕೆಟ್‌ ಬುಕ್‌ ಮಾಡಲು ತುಂಬಾ ಸಮಯ ಸಿಕ್ಕಿತ್ತು” ಎಂದಿದ್ದಾರೆ.

Leo Collection
Image Source: The Indian Express

ಲಿಯೋ ಸಿನಿಮಾ ಕಲೆಕ್ಷನ್

ಲಿಯೋ ಸಿನಿಮಾ ಭಾರತೀಯ ಸಿನಿಮಾರಂಗದಲ್ಲಿ ಹೊಸ ದಾಖಲೆ ಬರೆದಿದೆ.ಮೊದಲ ದಿನ ಇಂಡಿಯನ್‌ ಬಾಕ್ಸ್‌ ಆಫೀಸ್‌ ನಲ್ಲಿ ʼಲಿಯೋʼ 68 ಕೋಟಿ ರೂ.ಗಳಿಕೆ ಕಂಡಿತ್ತು. ಮೊದಲ ದಿನ ವರ್ಲ್ಡ್‌ ವೈಡ್‌ ಸೇರಿ 130 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದೆ. ಇದೊಂದು ಬಿಗೆಸ್ಟ್‌ ವರ್ಲ್ಡ್‌ ವೈಡ್‌ ಕಲೆಕ್ಷನ್‌ ಆಗಿದೆ. ಈ ಹಿಂದೆ ರಜಿನಿಕಾಂತ್‌ ಅವರ ʼ2.0ʼ ಸಿನಿಮಾ ವರ್ಲ್ಡ್‌ ವೈಡ್‌ ನಲ್ಲಿ ಮೊದಲ ದಿನವೇ ಅತೀ ಹೆಚ್ಚು ಕಲೆಕ್ಷನ್‌ ಮಾಡಿದ ಸಿನಿಮಾ ಆಗಿತ್ತು. ಈ ದಾಖಲೆಯನ್ನು ಈಗ ʼಲಿಯೋʼ ಮೀರಿಸಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ ‘ಲಿಯೋ’ ವಿಶ್ವಾದ್ಯಂತ 148.5 ಕೋಟಿ ರೂಪಾಯಿಗಳನ್ನು ಗಳಿಸಿದೆ. ವಿಜಯ್‌ ಅವರಿಗೆ ʼವಾರಿಸುʼ ಸಿನಿಮಾ ಅತೀ ಹೆಚ್ಚು ಗಳಿಕೆ ತಂದುಕೊಟ್ಟಿದ್ದು, ಲೋಕೇಶ್‌ ಅವರಿಗೆ ʼವಿಕ್ರಮ್‌ʼ ಸಿನಿಮಾ ಅತೀ ಹೆಚ್ಚು ಗಳಿಕೆ ತಂದುಕೊಟ್ಟ ಸಿನಿಮಾವಾಗಿದೆ. ʼಲಿಯೋʼ 400 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದರೆ ಇಬ್ಬರಿಗೂ ಸಾರ್ವಕಾಲಿಕ ಗಳಿಕೆ ತಂದುಕೊಟ್ಟ ಸಿನಿಮಾವಾಗುತ್ತದೆ. ಲಿಯೋ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಉನ್ನತ ಸ್ಥಾನವನ್ನು ಪಡೆಯಲಿದೆ ಎನ್ನಬಹುದು.

Leave A Reply

Your email address will not be published.