Leo Child Artist Name: ಲಿಯೋ ಚಿತ್ರದಲ್ಲಿ ನಟಿಸಿದ ಈ ಪುಟ್ಟ ಹುಡುಗಿ ಯಾರು ಗೊತ್ತಾ…? ಸ್ಟಾರ್ ನಟನ ಮಗಳು.
ಲಿಯೋ ಸಿನಿಮಾದಲ್ಲಿ ವಿಜಯ್ ಮಗಳಾಗಿ ನಟಿಸಿದ ಬಾಲನಟಿ ಎಲ್ಲಾರ ಮನ ಗೆದ್ದಿದ್ದಾರೆ. ಈ ಪುಟ್ಟ ಬಾಲಕಿಯ ನಟನೆಗೆ ಯಾರು ಸಾಟಿಯಿಲ್ಲ
Leo Movie Vijay Daughter Real Name: ಅಕ್ಟೋಬರ್ 19 ರಂದು ವಿಶ್ವದಾದ್ಯಂತ ಬಿಡುಗಡೆ ಕಂಡ ಲಿಯೋ (Leo) ಸಿನಿಮಾ ಬಾಕ್ಸ್ ಆಫೀಸ್ ಲೂಟಿ ಮಾಡುತ್ತಿದೆ. ಲೋಕೇಶ್ ಕನಕರಾಜ್ ನಿರ್ದೇಶನದ, ವಿಜಯ್ ಅಭಿನಯದ ಲಿಯೋ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ದಳಪತಿ ವಿಜಯ್ (Thalapathy Vijay) ಮಾತ್ರವಲ್ಲದೆ ನಟಿ ತ್ರಿಷಾ (Trisha) ಹಾಗು ಹಲವು ಕಲಾವಿದರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಅಷ್ಟೇ ಅಲ್ಲದೆ ಈ ಸಿನಿಮಾದಲ್ಲಿ ವಿಜಯ್ ಅವರ ಮಗಳ ಪಾತ್ರದಾರಿ ಪ್ರತಿಯೊಬ್ಬ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಸದ್ಯ ಈ ಚಿತ್ರದಲ್ಲಿ ತ್ರಿಷಾ ಮತ್ತು ವಿಜಯ್‌ಗೆ ಮಗಳಾಗಿ ನಟಿಸಿದ್ದ ಬಾಲನಟಿ ಯಾರು ಅಂತ ಎಲ್ಲರಲ್ಲೂ ಕುತೂಹಲ ಮೂಡಿದೆ.

ಲಿಯೋ ಸಿನಿಮಾದ ಮೂಲಕ ಗಮನ ಸೆಳೆದ ಬಾಲ ನಟಿ
ಲಿಯೋ ಸಿನಿಮಾ ದೇಶ ವಿದೇಶಗಳಲ್ಲಿ ಭರ್ಜರಿ ಆಗಿ ಹಿಟ್ ಕಾಣುತ್ತಿದೆ. ಈ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಿಸಿದ ಇಯಾಲ್ ಎಲ್ಲಾರ ನೆಚ್ಚಿನ ಮಗು ಆಗಿದ್ದಾಳೆ. ಅಷ್ಟೇ ಅಲ್ಲದೇ ಈ ಬಾಲನಟಿ ಯಾರು ಎಂದು ಎಲ್ಲಾ ಕೇಳುತ್ತಿದ್ದಾರೆ. ಲಿಯೋ ಚಿತ್ರದಲ್ಲಿ ನಟ ವಿಜಯ್‌ಗೆ ಇಬ್ಬರು ಮಕ್ಕಳಿರುತ್ತಾರೆ. ವಿಜಯ್ ಮಗಳ ಪಾತ್ರದ ಬಾಲನಟಿ ಬಹಳ ಉತ್ತಮವಾಗಿ ನಟಿಸಿದ್ದು ಮಗಳ ಪಾತ್ರವನ್ನು ಇಯಾಲ್ ಎಂಬ ಪುಟ್ಟ ಮಗು ನಿರ್ವಹಿಸಿದೆ.
ಚಿತ್ರದಲ್ಲಿ ಇಯಾಲ್ ಪಾತ್ರ ಸಿನಿ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದೆ. ಲಿಯೋದಲ್ಲಿ ಈ ಪುಟ್ಟ ಕಲಾವಿದೆ ಮಾಥಿ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಲಿಯೋ ಸಿನಿಮಾದಲ್ಲಿ ಮಲಯಾಳಂ ನಟ ಮ್ಯಾಥ್ಯೂ ಥಾಮಸ್ ವಿಜಯ್ ಮಗನ ಪಾತ್ರದಲ್ಲಿ ನಟಿಸಿದ್ದಾರೆ. ಬಾಲ ನಟಿ ಇಯಾಲ್ ಜನರ ನೆಚ್ಚಿನ ಪುಟ್ಟ ನಟಿ ಆಗಿದ್ದಾರೆ. ಅಷ್ಟೇ ಅಲ್ಲದೆ ಫುಲ್ ಸಿನಿಮಾದಲ್ಲಿ ವಿಜಯ್ ಮಕ್ಕಳ ಪಾತ್ರಗಳಿದ್ದು, ಇಯಾಲ್ ಸೊಗಸಾಗಿ ನಟಿಸಿ ಸಿನಿ ಪ್ರಿಯರ ಮನ ಗೆದ್ದಿದ್ದಾರೆ.
Thank you #TeamLEO you took care of her very well. made her feel very comfortable and safe. Thank you @actorvijay Sir for the amount of love and care you showed towards her.. IYAL had so many special lovable moments with you. hope she dint trouble u a lot. #ilaniyal @ilan_iyal pic.twitter.com/p3H1nOdxjz
— Arjunan Actor (@arjunannk) October 24, 2023
ಲಿಯೋ ಸಿನಿಮಾದಲ್ಲಿ ನಟಿಸಿದ ಬಾಲನಟಿ ಒಬ್ಬ ನಟನ ಮಗಳು
ಹೌದು ಲಿಯೋ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಿಸಿದ ಹಾಗೂ ಇಲಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇಯಾಲ್ ಕೂಡ ಕೆಲವು ಚಿತ್ರಗಳಲ್ಲಿ ಬಾಲನಾಗಿ ನಟಿಸಿದ್ದಾಳೆ. ಕೆಲ ತಿಂಗಳ ಹಿಂದೆ ತೆರೆಕಂಡ ‘ತಡಾ’ ಚಿತ್ರದಲ್ಲಿ 5 ವರ್ಷದ ಮಗುವಾಗಿ ಕಾಣಿಸಿಕೊಂಡಿದ್ದರು. ಇಯಾಲ್‌ಗೆ ಲಿಯೋ ಚಿತ್ರದಲ್ಲಿ ನಟಿಸಿದ್ದಾಳೆ. ಇಯಾಲ್ ಅವರು ಖ್ಯಾತ ನಟ ಅರ್ಜುನನ್ ಅವರ ಮಗಳು ಎಂದು ಹೇಳಲಾಗುತ್ತುದೆ. ಅರ್ಜುನನ್ ಕೂಡ ಖ್ಯಾತ ಮಲಯಾಳಂ ನಟನಾಗಿದ್ದು ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿದ್ದಾರೆ.