LIC Pension: ಪ್ರತಿ ತಿಂಗಳು 1 ಲಕ್ಷ ರೂ ಪಿಂಚಣಿ ಹಣ ಪಡೆಯಲು ಎಷ್ಟು ಹೂಡಿಕೆ ಮಾಡಬೇಕು…? LIC ಯಿಂದ ಬೆಸ್ಟ್ ಪ್ಲ್ಯಾನ್.

ನಿವೃತ್ತಿ ಬಳಿಕ ವರ್ಷಕ್ಕೆ 1 ಲಕ್ಷ ರೂ ಪಿಂಚಣಿ ಬರಲು ಪಾಲಿಸಿ ಮೊತ್ತ ಎಷ್ಟು ಬೇಕು...?

LIC Jeevan Shanti Benefit: ಲೈಫ್ ಇನ್ಷೂರೆನ್ಸ್ ಕಾರ್ಪೊರೇಶನ್ ಎಲ್​ಐಸಿ (LIC) ಭಾರತದ ನಂಬರ್ ಒನ್ ವಿಮಾ ಸಂಸ್ಥೆಯಾಗಿದೆ. ಎಲ್​ಐಸಿ ಎನ್ನುವುದು ಜೀವನದ ಒಂದು ಭಾಗ ಆಗಿದೆ ಎನ್ನಬಹುದು. ಯಾಕೆಂದರೆ ಎಲ್​ಐಸಿ ಪರಿಚಯಿಸುವ ಪ್ರತಿಯೊಂದು ಯೋಜನೆಯು ಸಹ ಗ್ರಾಹಕರ ಜೀವನಕ್ಕೆ ಬಹಳ ಸಹಾಯಕ ಆಗಲಿದೆ.

ಹಾಗೇಯೇ ಎಲ್​ಐಸಿಯ ಅನೇಕ ಸ್ಕೀಮ್​ಗಳಲ್ಲಿ ಜೀವನ್ ಶಾಂತಿಯೂ ಒಂದು. ಇದು ನಿವೃತ್ತಿ ಬಳಿಕ ಪಿಂಚಣಿ ಒದಗಿಸುವ ಯೋಜನೆ ಆಗಿದೆ . ಈ ಸ್ಕೀಮ್​ನಲ್ಲಿ ಎಷ್ಟು ಬೇಕಾದರೂ ಹಣ ತೊಡಗಿಸಬಹುದು. ಈ ಜೀವನ್ ಶಾಂತಿ ಯೋಜನೆಯ ಕುರಿತು ಹಲವು ಮಾಹಿತಿಯನ್ನು ತಿಳಿಯೋಣ.

LIC Jeevan Shanti Yojana
Image Credit: IND Money

LIC Jeevan Shanti Yojana

ಎಲ್ಲಾ ವಯೋಮಾನದವರಿಗೆ ಸೂಕ್ತವಾಗುವ ವಿವಿಧ ಇನ್ಷೂರೆನ್ಸ್ ಆಯ್ಕೆಗಳನ್ನು ಎಲ್​ಐಸಿ ಹೊಂದಿದೆ. ಅದರಲ್ಲೂ ಎಲ್​ಐಸಿಯ ಜೀವನ್ ಶಾಂತಿ ಯೋಜನೆ ಕೂಡ ಒಂದಾಗಿದೆ. ತಿಂಗಳಿಗೆ, ಮೂರು ತಿಂಗಳಿಗೆ, ಆರು ತಿಂಗಳಿಗೆ, ವರ್ಷಕ್ಕೆ ಹೀಗೆ ವಿವಿಧ ಪಾವತಿ ಅವಧಿಗಳನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದು. ತಿಂಗಳಿಗೆ ಕೇವಲ ನೂರು ರೂಗಳಿಂದ ಪಾಲಿಸಿ ಮೊತ್ತ ಆರಂಭವಾಗುತ್ತದೆ.

ಹೀಗಾಗಿ, ಯಾರು ಬೇಕಾದರೂ ಕೂಡ ಎಲ್​ಐಸಿಯ ಇನ್ಷೂರೆನ್ಸ್ ಸ್ಕೀಮ್​ಗಳಲ್ಲಿ ಹೂಡಿಕೆ ಮಾಡಬಹುದು. ಎಲ್​ಐಸಿ ಜೀವನ್ ಶಾಂತಿ ಪಾಲಿಸಿಯಲ್ಲಿ ಪಾಲಿಸಿದಾರನಿಗೆ ಕನಿಷ್ಠ ವಯಸ್ಸು 30 ವರ್ಷವಾದರೆ ಗರಿಷ್ಠ ವಯಸ್ಸು 79 ವರ್ಷ ಆಗಿರಬೇಕು. ಕಂತುಗಳಲ್ಲಿ ಪ್ರೀಮಿಯಮ್ ಕಟ್ಟುವಂತಿಲ್ಲ. ಒಮ್ಮೆಲೇ ಲಂಪ್ಸಮ್ ಆಗಿ ಹಣ ಪಾವತಿಸಬೇಕು. ಪಾಲಿಸಿದಾರ ಮೃತಪಡುವವರೆಗೂ ನಿರ್ದಿಷ್ಟ ಮೊತ್ತವನ್ನು ಪಿಂಚಣಿಯಾಗಿ ನೀಡಲಾಗುತ್ತದೆ.

ಒಂಟಿ ಅಥವಾ ಜಂಟಿಯಾಗಿ ಈ ಯೋಜನೆ ಪ್ರಾರಂಭಿಸಬಹುದು
ಎಲ್​ಐಸಿ ಜೀವನ್ ಶಾಂತಿ ಪಾಲಿಸಿಯಲ್ಲಿ ಒಬ್ಬನೇ ವ್ಯಕ್ತಿ ಬೇಕಾದರೆ ಪಾಲಿಸಿ ಮಾಡಿಸಬಹುದು. ಜಂಟಿಯಾಗಿಯೂ ಮಾಡಿಸಬಹುದು. ಜಂಟಿಯಾಗಿ ಮಾಡಿಸಿದಾಗ, ಒಬ್ಬ ಸದಸ್ಯ ಮೃತಪಟ್ಟರೂ ಇನ್ನೊಬ್ಬರಿಗೆ ಈ ಪಿಂಚಣಿ ಸಿಗುತ್ತಾ ಹೋಗುತ್ತದೆ. ಹಾಗಾಗಿ ಜಂಟಿಯಾಗಿ ಅಥವಾ ಒಂಟಿಯಾಗಿ ನಿಮ್ಮ ಆಯ್ಕೆಗೆ ಸಂಬಂಧಿಸಿದ್ದಾಗಿದೆ.

LIC Jeevan Shanti Benefits
Image Credit: Navbharattimes

ಜೀವನ್ ಶಾಂತಿಯಲ್ಲಿ ವರ್ಷಕ್ಕೆ 1 ಲಕ್ಷ ರೂ ಪಿಂಚಣಿ ಬರಲು ಹೀಗೆ ಮಾಡಿ

ಎಲ್​ಐಸಿಯ ಜೀವನ್ ಶಾಂತಿ ಸ್ಕೀಮ್​ನಲ್ಲಿ ಲಂಪ್ಸಮ್ ಆಗಿ 11 ಲಕ್ಷ ರೂ ಅನ್ನು ಹೂಡಿಕೆ ಮಾಡಿ 5 ವರ್ಷದ ಬಳಿಕ ಪಿಂಚಣಿ ಪಡೆಯಲು ಆರಂಭಿಸಿದರೆ, ವರ್ಷಕ್ಕೆ 1,01,880 ರೂ ಸಿಗುತ್ತದೆ. ಮಾಸಿಕ ಪಿಂಚಣಿ ಬೇಕೆಂದರೆ 8,149 ರೂ ಬರುತ್ತದೆ.

ಉದಾಹರಣೆಗೆ ನೀವು 55ನೇ ವಯಸ್ಸಿನಲ್ಲಿ 11 ಲಕ್ಷ ರೂ ಮೊತ್ತದ ಜೀವನ್ ಶಾಂತಿ ಪಾಲಿಸಿ ಖರೀದಿಸಿದರೆ, 60ನೇ ವಯಸ್ಸಿನಲ್ಲಿ ನಿವೃತ್ತಿ ಬಳಿಕ ಪಿಂಚಣಿ ಬರುತ್ತಾ ಹೋಗುತ್ತದೆ. ಒಂದು ವೇಳೆ ಪಾಲಿಸಿದಾರ ಮೃತಪಟ್ಟರೆ ನಿರ್ದಿಷ್ಟ ಮೊತ್ತವನ್ನು ನಾಮಿನಿಗೆ ಕೊಡಲಾಗುತ್ತದೆ. ಹಾಗಾಗಿ ಈ ಯೋಜನೆ ಬಹಳ ಉಪಯುಕ್ತಕರ ಆಗಿದ್ದು ಹೆಚ್ಚಿನ ಮಾಹಿತಿಯನ್ನು ಪಡೆದು ಈ ಯೋಜನೆಯ ಲಾಭ ಪಡೆಯಿರಿ.

Leave A Reply

Your email address will not be published.