LIC: ಪಾವತಿಸುವುದು ಕೇವಲ 2000 ರೂಪಾಯಿ, ಕೈ ಸೇರುವುದು 43 ಲಕ್ಷ ! ಭಾರೀ ಲಾಭ ನೀಡುತ್ತದೆ LICಯ ಈ ಪ್ಲಾನ್,

ಭವಿಷ್ಯದ ಉಪಯೋಗಕ್ಕಾಗಿ LIC ಹೊಸ ಯೋಜನೆ,

LIC New Endowment Plan: ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಜನರಿಗೆ ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಿರುತ್ತದೆ. LIC ತನ್ನ ಗ್ರಾಹಕರ ಅನುಕೊಲಕ್ಕಾಗಿ ಅವರ ಭವಿಷ್ಯದ ಉಪಯೋಗಕ್ಕಾಗಿ ಈಗಾಗಲೇ ಅನೇಕ ಯೋಜನೆಗಳನ್ನು ಪರಿಚಯಿಸಿದೆ.

ಹಾಗೆಯೆ ಈಗ ಜಾರಿಗೆ ತಂದ ಯೋಜನೆಗಳ ಮೂಲಕ ಜನರು ದೀರ್ಘಾವಧಿಯವರೆಗೆ ಹೂಡಿಕೆ ಮಾಡಬಹುದು. ಆರ್ಥಿಕ ರಕ್ಷಣೆಯನ್ನು ಪಡೆಯಬಹುದು. ಎಲ್ಐಸಿಯ ಒಂದು ಪ್ರಮುಖ ಯೋಜನೆಯ ಮೂಲಕ ಕಡಿಮೆ ಹಣದ ಮೂಲಕ ಪ್ಲಾನ್ ಆರಂಭಿಸಿ ಉತ್ತಮ ಆದಾಯವನ್ನು ಪಡೆಯಬಹುದು.

LIC New Endowment Plan benefits
Image Credit: Freeonlineupdate

ಎಲ್ಐಸಿಯ New Endowment Plan
LIC ಹೊಸ ಯೋಜನೆಯ ಹೆಸರು ನ್ಯೂ ಎಂಡೋಮೆಂಟ್ ಪ್ಲಾನ್. ಈ ಯೋಜನೆಗೆ ಒಳಪಡುವ ವ್ಯಕ್ತಿಯ ವಯಸ್ಸು ಕನಿಷ್ಠ 8 ವರ್ಷಗಳಿಂದ ಗರಿಷ್ಠ 55 ವರ್ಷಗಳವರೆಗೆ ಇರಬೇಕು. ಆದರೆ, ಈ ಯೋಜನೆಗೆ ಕನಿಷ್ಠ ವಿಮಾ ಮೊತ್ತವು 1 ಲಕ್ಷ ರೂಪಾಯಿ ಆಗಿರಬೇಕು. LICಯ ಯಾವುದೇ ವಿಮಾ ಯೋಜನೆಯಿಂದ ಉತ್ತಮ ಆದಾಯವನ್ನು ಗಳಿಸಲು, ವ್ಯಕ್ತಿಯ ವಯಸ್ಸು ಮತ್ತು ಪಾಲಿಸಿ ಅವಧಿ ಎಷ್ಟು ಎನ್ನುವುದು ಬಹಳ ಮುಖ್ಯವಾಗಿದೆ. ಇದರ ಜೊತೆ ಹೂಡಿಕೆ ಮಾಡುವ ಮೊತ್ತವೂ ಮುಖ್ಯವಾಗಿರುತ್ತದೆ.

LIC New Endowment Plan benefits
Image Credit: Zeebiz

LIC ಹೊಸ ಪ್ಲಾನ್ ನ ಮಾಹಿತಿ
ಒಬ್ಬ ವ್ಯಕ್ತಿಯು 25 ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿ, 35 ವರ್ಷಗಳ ಪಾಲಿಸಿ ಅವಧಿಯನ್ನು ಹೊಂದಿದ್ದು, 9 ಲಕ್ಷದ ವಿಮಾ ಮೊತ್ತವನ್ನು ಆರಿಸಿದರೆ, ಮೊದಲ ವರ್ಷದ ವ್ಯಕ್ತಿಯ ಮಾಸಿಕ ಪ್ರೀಮಿಯಂ 2046 ರೂ. ಆಗಿರುತ್ತದೆ. ಮುಂದಿನ ವರ್ಷದಿಂದ, ಒಬ್ಬ ವ್ಯಕ್ತಿಯು ಈ ಪಾಲಿಸಿಗಾಗಿ ಪ್ರತಿ ತಿಂಗಳು 2002 ರೂ. ಪ್ರೀಮಿಯಂ ಪಾವತಿಸಬೇಕಾಗುತ್ತದೆ. 9 ಲಕ್ಷ ರೂ.ಗಳ ವಿಮಾ ಪಾಲಿಸಿಗೆ ಒಬ್ಬ ವ್ಯಕ್ತಿ 35 ವರ್ಷಗಳವರೆಗೆ ಒಟ್ಟು 8,23,052 ಪಾವತಿಸಬೇಕಾಗುತ್ತದೆ. ಅದರ ರಿಟರ್ನ್ಸ್‌ನಲ್ಲಿ, 35 ವರ್ಷಗಳ ನಂತರ 43,87,500 ರೂ. ಸಿಗುತ್ತದೆ. ವ್ಯಕ್ತಿಯು 35 ವರ್ಷಗಳವರೆಗೆ ಮಾಸಿಕ 2,000 ರೂ ಪ್ರೀಮಿಯಂ ಪಾವತಿಸುವ ಮೂಲಕ 43 ಲಕ್ಷ ರೂ.ಗಿಂತ ಹೆಚ್ಚಿನ ನಿಧಿಯನ್ನು ಪಡೆಯಬಹುದು.

Leave A Reply

Your email address will not be published.