Ration Card: ಡಿಸೆಂಬರ್ 30 ರ ನಂತರ ರದ್ದಾಗಲಿದೆ ಇಂತಹ ಜನರ ರೇಷನ್ ಕಾರ್ಡ್, ಜಾರಿಗೆ ಬಂತು ಹೊಸ ನಿಯಮ.
ಇಂತಹ ಕುಟುಂಬಗಳ ರೇಷನ್ ಕಾರ್ಡ್ ರದ್ದು ಮಾಡಲು ನಿರ್ಧಾರ ಮಾಡಿದ ಸರ್ಕಾರ.
Link Aadhar Card To Ration Card: ಪಡಿತರ ಚೀಟಿ ಬಳಕೆದಾರರು ಈ ಮಾಹಿತಿಯನ್ನು ತಿಳಿಯುವುದು ಬಹಳ ಮುಖ್ಯವಾಗಿದೆ. ಪ್ರತಿಯೊಂದು ಕುಟುಂಬವು ರೇಷನ್ ಕಾರ್ಡ್ ಹೊಂದಿರುತ್ತದೆ. ರೇಷನ್ ಕಾರ್ಡ್ ಮೂಲಕ ಸರಕಾರ ನೀಡುವ ರೇಷನ್ ಹಾಗು ಇನ್ನಿತರ ಸೌಲಭಗಳನ್ನು ಪಡೆಯುತ್ತೀರಿ.
ಇಂತಹ ಸೌಲಭ್ಯಗಳಿಗೆ ರೇಷನ್ ಕಾರ್ಡ್ ಬಹಳ ಮುಖ್ಯವಾಗಿದ್ದು ಒಮ್ಮೆ ಈ ರೇಷನ್ ಕಾರ್ಡ್ ರದ್ದಾದರೆ ಮತ್ತೆ ಪಡೆಯಲು ಬಹಳ ಕಷ್ಟ ಪಡಬೇಕಾಗುತ್ತದೆ. ರೇಷನ್ ಕಾರ್ಡ್ ಇಲ್ಲದೆ ಇದ್ದರೆ ಕುಟುಂಬಕ್ಕೆ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ ಆದ್ದರಿಂದ ಆದಷ್ಟು ಬೇಗ ಕಡ್ಡಾಯವಾಗಿ ಈ ಕೆಲಸವನ್ನು ನೀವು ಮಾಡಿಕೊಳ್ಳಿ.

ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ
ಕೇಂದ್ರ ಸರ್ಕಾರ ಈಗಾಗಲೇ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವಂತೆ ಸೂಚನೆ ನೀಡಿದೆ. ರೇಷನ್ ಕಾರ್ಡ್ ಲಿಂಕ್ ಗೆ ಡಿಸೆಂಬರ್ 30 ರ್ ತನಕ ಸಮಯಾವಕಾ ಶ ವಿಸ್ತರಿಸಲಾಗಿದೆ .ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದ್ದು, ಡಿ.30 ರೊಳಗೆ ತಪ್ಪದೇ ಲಿಂಕ್ ಮಾಡಿಸಬೇಕು.
ಈ ದಿನಾಂಕದೊಳಗಾಗಿ ಲಿಂಕ್ ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ದಂಡ ತೆರಬೇಕಾಗಿ ಬರಬಹುದು ಅಥವಾ ರೇಷನ್ ಕಾರ್ಡ್ ರದ್ದಾಗಬಹುದು. ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದ ಕುಟುಂಬದ ಸದಸ್ಯರ ವಿವರ ನಿಖರವಾಗಿ ಸರ್ಕಾರಕ್ಕೆ ಸಿಗುತ್ತದೆ. ಈ ಮೂಲಕ ನಕಲಿ ಫಲಾನುಭವಿಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಎನ್ನಲಾಗಿದೆ .

ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡುವ ವಿಧಾನ
ಪಡಿತರ ಚೀಟಿ ಅನ್ನು ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಆನ್ಲೈನ್ ನಲ್ಲಿ ಈ ರೀತಿಯಾಗಿ ಲಿಂಕ್ ಮಾಡಬಹುದು ನಿಮ್ಮ ರಾಜ್ಯದ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಪೋರ್ಟಲ್ ಅಧಿಕೃತ ವೆಬ್ಸೈಟ್ ಗೆ ಹೋಗಿ, ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ಪಡಿತರ ಚೀಟಿ ಸಂಖ್ಯೆ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ‘ಮುಂದುವರಿಯಿರಿ’ ಮೇಲೆ ಕ್ಲಿಕ್ ಮಾಡಿ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ಬರುತ್ತದೆ, ಒಟಿಪಿ ನಮೂದಿಸಿ ಮತ್ತು ಪಡಿತರ ಚೀಟಿ ಹಾಗು ಆಧಾರ್ ಕಾರ್ಡ್ ಲಿಂಕ್ ಕ್ಲಿಕ್ ಮಾಡಿ ಈ ಹಂತವಾಗಿ ರೇಷನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿಕೊಳ್ಳಿ.