LPG Price: ಡಿಸೆಂಬರ್ ತಿಂಗಳ ಮೊದಲ ದಿನವೇ LPG ಬೆಲೆಯಲ್ಲಿ ಭಾರಿ ಏರಿಕೆ, ಗ್ಯಾಸ್ ಮತ್ತಷ್ಟು ದುಬಾರಿ.

ಡಿಸೆಂಬರ್ ತಿಂಗಳ ಮೊದಲ ದಿನವೇ LPG ಬೆಲೆಯಲ್ಲಿ ಭಾರಿ ಏರಿಕೆ

LPG Cylinder Price Hike In December 1st : ದಿನನಿತ್ಯ ಬಳಕೆಯ ವಸ್ತುಗಳಲ್ಲಿ ಎಲ್ಪಿಜಿ ಸಿಲಿಂಡರ್( LPG Cylinder) ಕೂಡ ಒಂದಾಗಿದೆ. ಮನೆಯಲ್ಲಿ ಸಿಲಿಂಡರ್ ಇಲ್ಲದೇ ಇದ್ದರೇ ಉಪವಾಸ ಇರುವ ಪರಿಸ್ಥಿತಿ ಉಂಟಾಗುತ್ತದೆ. ಅಷ್ಟೇ ಅಲ್ಲದೆ ದಿನ ಬಳಕೆಯ ವಸ್ತುವಾದ ಸಿಲಿಂಡರ್ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ ಹೊರತು ಸ್ವಲ್ಪನು ಕಡಿಮೆ ಆಗುತ್ತಿಲ್ಲ.

ಜನ ಸಾಮಾನ್ಯರಿಗೆ ಸಿಲಿಂಡರ್ ಕೊಳ್ಳುವುದೇ ದೊಡ್ಡ ತಲೆ ನೋವಾಗಿದೆ ಹಾಗಂತ ಸಿಲಿಂಡರ್ ಕೊಳ್ಳದೇ ಇರಲು ಆಗುತ್ತಿಲ್ಲ ಯಾಕೆಂದರೆ ಸಿಲಿಂಡರ್ ಬಹಳ ಅವಶ್ಯಕ ಆಗಿದೆ. ಪ್ರತಿ ತಿಂಗಳ ಆರಂಭದಲ್ಲಿ LPG ಸಿಲಿಂಡರ್ ಬೆಲೆಯಲ್ಲಿ ಏರಿಕೆ ಅಥವಾ ಇಳಿಕೆಯ ಎಂದು ತಿಳಿಯಬಹುದಾಗಿದೆ.

LPG Cylinder Price Hike In December 1st
Image Credit: Live Mint

ದುಬಾರಿಯಾದ ಎಲ್ಪಿಜಿ ಸಿಲಿಂಡರ್

ಎಲ್ಪಿಜಿ ವಾಣಿಜ್ಯ ಸಿಲಿಂಡರ್ ಗಳು ಪಂಚ ರಾಜ್ಯಗಳ ಚುನಾವಣೆ ಮುಗಿದ ಕೂಡಲೇ ದುಬಾರಿಯಾಗಿವೆ. ಡಿಸೆಂಬರ್ 1, 2023 ರಿಂದ 19 ಕೆಜಿ ಎಲ್‌ ಪಿಜಿ ವಾಣಿಜ್ಯ ಸಿಲಿಂಡರ್‌ ಬೆಲೆಯಲ್ಲಿ 21 ರೂ. ಹೆಚ್ಚಳ ಮಾಡಲಾಗಿದೆ. ಹಣದುಬ್ಬರದ ಈ ಆಘಾತವು ವಾಣಿಜ್ಯ ಸಿಲಿಂಡರ್ ಗಳ ಗ್ರಾಹಕರ ಮೇಲೆ ಮಾತ್ರ ಪರಿಣಾಮ ಬೀರಿದೆ. 19 ಕೆಜಿ ವಾಣಿಜ್ಯ ಸಿಲಿಂಡರ್ ನಲ್ಲಿ ಈ ಹೆಚ್ಚಳ ಮಾಡಲಾಗಿದೆ. ಆದಾಗ್ಯೂ, ದೇಶೀಯ ಎಲ್ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ.

LPG Cylinder Price Hike Update
Image Credit: Aaj Tak

ಎಲ್ಪಿಜಿ ಸಿಲಿಂಡರ್ ಬೆಲೆ ಎಲ್ಲೆಲ್ಲಿ ಎಷ್ಟಿದೆ?

ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಸಿಲಿಂಡರ್ ಬೆಲೆ 1819 ರೂ.ಗೆ ಏರಿದ್ದರೆ, ಮಧ್ಯಪ್ರದೇಶದ ಭೋಪಾಲ್ನಲ್ಲಿ 1804.5 ರೂ. ತೆಲಂಗಾಣದ ಹೈದರಾಬಾದ್ನಲ್ಲಿ 19 ಕೆಜಿ ಸಿಲಿಂಡರ್ ಬೆಲೆಯನ್ನು ಇಂದಿನಿಂದ 2024.5 ರೂ.ಗೆ ಹೆಚ್ಚಿಸಲಾಗಿದೆ. ಛತ್ತೀಸ್ಗಢದ ರಾಜಧಾನಿ ರಾಯ್ಪುರದಲ್ಲಿ ಇದು 2004 ರೂ.ಗೆ ಏರಿದೆ. ದೆಹಲಿಯಲ್ಲಿ, 19 ಕೆಜಿ ಎಲ್ಪಿಜಿ ಸಿಲಿಂಡರ್ 1775.50 ರೂ.ಗಳ ಬದಲು 1796.50 ರೂ.ಗೆ ಲಭ್ಯವಿದೆ. ಕೋಲ್ಕತ್ತಾದಲ್ಲಿ, ಇದು 1885.50 ರ ಬದಲು 1908.00 ನಲ್ಲಿ ಲಭ್ಯವಿರುತ್ತದೆ. ಆದರೆ ಮುಂಬೈನಲ್ಲಿ 1728.00 ರ ಬದಲು 1749 ರೂ. ಚೆನ್ನೈನಲ್ಲಿ, ಇದು ಈಗ 1942.00 ರೂ.ಗಳ ಬದಲು 1968.50 ರೂ.ಗೆ ಏರಿಕೆ ಆಗಿದೆ.

Leave A Reply

Your email address will not be published.