LPG Subsidy: ಆನ್ಲೈನ್ ನಲ್ಲಿ LPG ಸಬ್ಸಿಡಿ ಚೆಕ್ ಮಾಡುವುದು ಹೇಗೆ, ಗ್ಯಾಸ್ ಬಳಸುವ ಎಲ್ಲರಿಗೂ ಹೊಸ ಸೇವೆ.
ಈಗ ಆನ್ಲೈನ್ ಮೂಲಕ LPG ಸಬ್ಸಿಡಿ ಹಣ ಚೆಕ್ ಮಾಡಿಕೊಳ್ಳಬಹುದು.
LPG Subsidy Status Check: ಕೆಲವು ದಿನಗಳ ಹಿಂದೆ ಸರ್ಕಾರ ಎಲ್ಪಿಜಿ ಸಿಲಿಂಡರ್ (LPG Cylinder) ಖರೀದಿದಾರರಿಗೆ ಗುಡ್ ನ್ಯೂಸ್ ನೀಡಿತ್ತು, ಅದೇನೆಂದರೆ ಸಬ್ಸಿಡಿ. ಕೇಂದ್ರ ಸರ್ಕಾರವು ಎಲ್ಪಿಜಿ ಸಿಲಿಂಡರ್ಗೆ ಸಂಬಂಧಿಸಿದ ಯೋಜನೆಗಳ ಅಡಿಯಲ್ಲಿ ಸಬ್ಸಿಡಿ ಮೊತ್ತವನ್ನು ಬಳಕೆದಾರರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸುತ್ತದೆ ಎನ್ನಲಾಗಿದ್ದು. ಒಂದು ವರ್ಷದಲ್ಲಿ ಪ್ರತಿ ಕುಟುಂಬಕ್ಕೆ ತಲಾ 14.2 ಕಿಲೋಗ್ರಾಂಗಳ 12 ಸಿಲಿಂಡರ್ಗಳಿಗೆ ಸಬ್ಸಿಡಿಯನ್ನು ನೀಡಲಾಗುತ್ತದೆ.
ದಿ ಡೈರೆಕ್ಟ್ ಬೆನಿಫಿಟ್ ಟ್ರಾನ್ಫರ್ ಆಫ್ ಎಲ್ಪಿಜಿ (DBTL) ಯೋಜನೆ ಪಹಲ್ (ಪ್ರತ್ಯಕ್ಷ್ ಹನ್ಸ್ಟಾಂಟಿಟ್ ಲ್ಯಾಬ್) ಅಡಿಯಲ್ಲಿ ಎಲ್ಪಿಜಿ ಸಿಲಿಂಡರ್ಗಳ ಮೇಲಿನ ಸಬ್ಸಿಡಿಯನ್ನು ಗ್ರಾಹಕರು/ ಫಲಾನುಭವಿಗಳ ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತದೆ. ಇದನ್ನು 10 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯವಿರುವ ಕುಟುಂಬಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ.

ಸಿಲಿಂಡರ್ ಗ್ರಾಹಕರು ಖಾತೆಗೆ ಹಣ ವರ್ಗಾವಣೆ ಆದ ಕುರಿತು ಮಾಹಿತಿ ಪಡೆಯಿರಿ
ಎಲ್ಪಿಜಿ ಸಿಲಿಂಡರ್ಗೆ ಸಂಬಂಧಿಸಿದ ಯೋಜನೆಗಳ ಅಡಿಯಲ್ಲಿ ಸಬ್ಸಿಡಿ ಮೊತ್ತವನ್ನು ಬಳಕೆದಾರರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸುತ್ತದೆ. ನಿಮ್ಮ ಖಾತೆಯಲ್ಲಿ ಸಬ್ಸಿಡಿಯನ್ನು ವರ್ಗಾಯಿಸಲಾಗಿದೆಯೇ ಎಂದು ಆನ್ಲೈನ್ ನಲ್ಲಿ ಪರಿಶೀಲನೆ ಮಾಡಲು ಸಾಧ್ಯವಾಗಲಿದೆ. ಸರ್ಕಾರಿ ಸ್ವಾಮ್ಯದ ಕಂಪನಿಗಳಾದ ಐಒಸಿಎಲ್, ಎಚ್ಪಿ ಮತ್ತು ಬಿಪಿಸಿಎಲ್ ನಲ್ಲಿ ನಿಮ್ಮ ಗ್ಯಾಸ್ ಸಬ್ಸಿಡಿಯ ಸ್ಟೇಟಸ್ ಅನ್ನು ಪರಿಶೀಲಿಸುವ ವಿವರದ ಬಗ್ಗೆ ತಿಳಿಯಿರಿ.
ಎಲ್ಪಿಜಿ ಐಡಿಯಿದ್ದರೆ ಹೀಗೆ ಚೆಕ್ ಮಾಡಿಕೊಳ್ಳಿ
https://mylpg.in/?utm_source=DH-MoreFromPub&utm_medium=DH-app&utm_campaign=DH ಗೆ ಭೇಟಿ ನೀಡಿ, ಈಗ ಒದಗಿಸಿದ ಜಾಗದ ಬಲಭಾಗದಲ್ಲಿ ನಿಮ್ಮ ಎಲ್ಪಿಜಿ ಐಡಿ ಅನ್ನು ನಮೂದಿಸಿ. ನೀವು ಯಾವ ಸಂಸ್ಥೆಯ ಎಲ್ಪಿಜಿ ಬಳಕೆ ಮಾಡುತ್ತಿದ್ದರೂ ಬಳಕೆದಾರರ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ. 17 ಅಂಕೆಗಳ ಎಲ್ಪಿಜಿ ಐಡಿಯನ್ನು ನಮೂದಿಸಿ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ವಿವರಗಳನ್ನು ಭರ್ತಿಮಾಡಿ,

ಕ್ಯಾಪ್ಚಾ ಕೋಡ್ ನಮೂದಿಸಿ proceed ಕ್ಲಿಕ್ ಮಾಡಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ, ಮುಂದಿನ ಪುಟದಲ್ಲಿ ನಿಮ್ಮ ಇಮೇಲ್ ಐಡಿಯನ್ನು ನಮೂದಿಸಿ ಮತ್ತು ಪಾಸ್ವರ್ಡ್ ರಚಿಸಿ. ನಿಮ್ಮ ಇಮೇಲ್ ಐಡಿಗೆ ನೀವು ಸಕ್ರಿಯಗೊಳಿಸುವ ಲಿಂಕ್ ಬರಲಿದೆ, ಲಿಂಕ್ ಅನ್ನು ಕ್ಲಿಕ್ ಮಾಡಿ ನಿಮ್ಮ ಖಾತೆ ಸಕ್ರಿಯಗೊಳಿಸಲಾಗುತ್ತದೆ,
ಅದಾದ ಬಳಿಕ ನೀವು mylpg.in ಖಾತೆಗೆ ಲಾಗಿನ್ ಆಗಿ, ನಿಮ್ಮ ಬ್ಯಾಂಕ್ ಮತ್ತು ಆಧಾರ್ ಕಾರ್ಡ್ ಅನ್ನು ನಿಮ್ಮ ಎಲ್ಪಿಜಿ ಖಾತೆಗೆ ಲಿಂಕ್ ಮಾಡಲಾಗಿದೆಯೇ ಎಂದು ನಮೂದಿಸಿ. View Cylinder Booking History/subsidy transferred (ಸಿಲಿಂಡರ್ ಬುಕಿಂಗ್ ಇತಿಹಾಸ/ ಸಬ್ಸಿಡಿ ವರ್ಗಾಯಿಸಲಾಗಿದೆಯೇ ವೀಕ್ಷಿಸಿ) ಮೇಲೆ ಕ್ಲಿಕ್ ಮಾಡಿ ಹೀಗೆ ಈ ಹಂತವನ್ನು ಪಾಲಿಸಿದರೆ ಸಬ್ಸಿಡಿ ವಿಚಾರವಾಗಿ ಮಾಹಿತಿ ಪಡೆಯಬಹುದಾಗಿದೆ.