Mahalakshmi Yojana: ಮದುವೆಯಾಗುವ ಯುವತಿಯರಿಗೆ 10 ಗ್ರಾಂ ಚಿನ್ನ ಉಚಿತ, ಜಾರಿಗೆ ಬಂತು ಮಹಾಲಕ್ಷ್ಮಿ ಯೋಜನೆ.

ಯುವತಿಯರೇ ನಿಮಗೊಂದು ಶುಭ ಸುದ್ದಿ, ನೀವು ಮದುವೆ ಆಗಲು ಸಿದ್ಧರಿದ್ದರೆ ಈ ಯೋಜನೆಯ ಬಗ್ಗೆ ಮಾಹಿತಿ ಪಡೆಯಿರಿ

Mahalakshmi Scheme In Telangana: ಕರ್ನಾಟಕ ರಾಜ್ಯದಲ್ಲಿ ಉಚಿತ ಯೋಜನೆಯ ಭಾಗ್ಯಗಳೇ ಎಲ್ಲ ಕಡೆ ಹರಿದಾಡುತ್ತಿದೆ. ಕಾಂಗ್ರಸ್ ಸರ್ಕಾರ (Congress Government) ಹಲವು ಉಚಿತ ಗ್ಯಾರೆಂಟಿ ಯೋಜನೆಯ ಹೆಸರಿನಲ್ಲೇ ಚುನಾವಣೆಯಲ್ಲಿ ಗೆದ್ದು, ಅಧಿಕಾರಕ್ಕೆ ಬಂದಿದೆ ಎನ್ನುವುದು ಸತ್ಯ ಎನ್ನಬಹುದು.ಗೃಹಲಕ್ಷ್ಮೀ ಯೋಜನೆ, ಶಕ್ತಿ ಯೋಜನೆ,ಗೃಹಜ್ಯೋತಿ, ಯುವನಿಧಿ ಹಾಗು ಇನ್ನಿತರ ಹಲವು ಯೋಜನೆಯಡಿ ಸರಕಾರ ಅಧಿಕಾರ ನೆಡೆಯುತ್ತಿದೆ.

ಹಲವು ಜನರಿಗೆ ಈ ಯೋಜನೆಯಿಂದ ಸಹಾಯವಾದರೆ, ಇನ್ನು ಕೆಲವರು ಈ ಯೋಜನೆಯನ್ನು ದುರುಪಯೋಗ ಪಡಿಸಿಕೊಳ್ಳುತಿದ್ದಾರೆ. ಅಷ್ಟೇ ಅಲ್ಲದೆ ಸರ್ಕಾರಕ್ಕೆ ಈ ಯೋಜನೆಗಳು ಹೊರೆಯಾಗುತ್ತಿದ್ದು, ಆರ್ಥಿಕ ಸಂಕಷ್ಟ ಅನುಭವಿಸಲಾಗುತ್ತಿದೆ. ಇಷ್ಟು ಯೋಜನೆಗಳು ಸಾಲದೇ ಇನ್ನು ಮಹಾಲಕ್ಷ್ಮಿ ಯೋಜನೆ ಬಗ್ಗೆ ಕೆಲವು ಮಾಹಿತಿಗಳು ಹೊರಬೀಳುತ್ತಿದೆ.

Mahalakshmi Scheme In Telangana
Image Credit: India Today

ರಾಜ್ಯದ ಹಲವು ಉಚಿತ ಯೋಜನೆಗಳ ವಿವರ
ಶಕ್ತಿ ಯೋಜನೆಯಡಿ ರಾಜ್ಯದಲ್ಲಿನ ಎಲ್ಲಾ ಸರಕಾರಿ ಬಸ್ಸುಗಳಲ್ಲಿ ಮಹಿಳಾ ಮಣಿಗಳು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯ ನಂತರ ಗೃಹಲಕ್ಷ್ಮೀ ಯೋಜನೆ ಕರ್ನಾಟಕದ ಮಹಿಳೆಯರಿಗೆ ವರದಾನವಾಗಿದೆ. ಪ್ರತೀ ಕುಟುಂಬದ ಯಜಮಾನಿಗೆ ಪ್ರತೀ ತಿಂಗಳು 2,000 ರೂಪಾಯಿಯನ್ನು ನೀಡಲಾಗುತ್ತಿದೆ. ಗೃಹಜ್ಯೋತಿ ಯೋಜನೆಯ ಮೂಲಕ ಪ್ರತೀ ತಿಂಗಳು 200 ಯೂನಿಟ್‌ ವರೆಗೆ ವಿದ್ಯುತ್‌ ಅನ್ನು ಉಚಿತವಾಗಿ ನೀಡಲಾಗುತ್ತಿದೆ.

ಮಹಾಲಕ್ಷ್ಮೀ ಯೋಜನೆ

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರವು ಅನೇಕ ಯೋಜನೆಗಳನ್ನು ನೀಡುವುದಾಗಿ ಹೇಳಿ ರಾಜ್ಯದಲ್ಲಿ ಅಧಿಕಾರ ಪಡೆದುಕೊಂಡಿತ್ತು. ಈಗ ಪಂಚರಾಜ್ಯ ಚುನಾವಣೆಯ ಹೊತ್ತಲ್ಲೇ ಕಾಂಗ್ರೆಸ್‌ ಮಹಾಲಕ್ಷ್ಮೀ ಯೋಜನೆಯನ್ನು ಘೋಷಣೆ ಮಾಡಿದೆ. ಈ ಯೋಜನೆಯನ್ನು ಹಿಂದುಳಿದ ವರ್ಗಗಳ ಯುವತಿಯರಿಗೆ ನೆರವಾಗುವ ನಿಟ್ಟಿನಲ್ಲಿ ಘೋಷಣೆ ಮಾಡಲಾಗಿದೆ. ಈ ಯೋಜನೆಯ ಮೂಲಕ ಯುವತಿಯರಿಗೆ ಮದುವೆಯ ಸಂದರ್ಭದಲ್ಲಿ 10 ಗ್ರಾಂ ಚಿನ್ನದ ಜೊತೆಗೆ 1 ಲಕ್ಷ ರೂಪಾಯಿಯನ್ನು ಉಚಿತವಾಗಿ ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ.

Mahalakshmi Scheme For Ladies
Image Credit: Newsnext

ತೆಲಂಗಾಣದಲ್ಲಿ ಕಾಂಗ್ರೆಸ್‌ ಪಕ್ಷ ಯೋಜನೆಗಳ ಸುರಿಮಳೆ ಪ್ರಾರಂಭಿಸಿದೆ

ತೆಲಂಗಾಣದ ಕಾಂಗ್ರೆಸ್‌ ಪಕ್ಷ ಸದ್ಯ ಕರ್ನಾಟಕ ಕಾಂಗ್ರೆಸ್‌ ಸರಕಾರದ ಯೋಜನೆಯನ್ನು ಜಾರಿಗೊಳಿಸಿದಂತೆ ಉಚಿತ ಬಸ್‌, ಮದುವೆಗೆ ಚಿನ್ನ ಹಾಗೂ ನಗದು ಜೊತೆಗೆ ಪ್ರತೀ ತಿಂಗಳು 25,00 ರೂಪಾಯಿಯ ನೆರವು ನೀಡುವುದಾಗಿಯೂ ಘೋಷಣೆಯನ್ನು ಮಾಡಿದೆ. ಕರ್ನಾಟಕದಲ್ಲಿ ವರ್ಕೌಟ್‌ ಆದ ಗ್ಯಾರಂಟಿ ಭಾಗ್ಯ ತೆಲಂಗಾಣದಲ್ಲೂ ಆಗುತ್ತಾ ಅನ್ನೋದು ಕುತೂಹಲ ಮೂಡಿಸಿದೆ. ತೆಲಂಗಾಣ ಜನರು ಕರ್ನಾಟಕ ಜನ ಮಾಡಿದ ತಪ್ಪನ್ನೇ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ .

Leave A Reply

Your email address will not be published.