MS Dhoni: ‘ಕ್ರಿಕೆಟ್’ ಜಗತ್ತಿನಲ್ಲಿ ಯಾರಿಂದಲೂ ಮುರಿಯಲಾಗದ ಈ ದಾಖಲೆ ನಿರ್ಮಿಸಿದ್ದಾರೆ ಎಂ.ಎಸ್ . ಧೋನಿ.
ಎಂ.ಎಸ್ . ಧೋನಿ ಅವರ ದಾಖಲೆ ಮುರಿಯಲು ಯಾವ ಆಟಗಾರನಿಂದಲೂ ಸಾಧ್ಯವಿಲ್ಲ.
Mahendra Singh Dhoni Record: ಕ್ರಿಕೆಟ್ ಜಗತ್ತಿನಲ್ಲಿ ಮಹೇಂದ್ರ ಸಿಂಗ್ ಧೋನಿ ಯವರ ಸಾಧನೆ ಬಹಳ ಉತ್ತುಂಗದಲ್ಲಿದೆ . ಇವರ ಸಾಧನೆಯನ್ನು ಯಾವ ಕ್ರಿಕೆಟಿಗನು ಮುರಿಯಲು ಸಾಧ್ಯವಿಲ್ಲ. Mahendra Singh Dhoni ತನ್ನದೇ ಆದ ಅಭಿಮಾನಿ ಬಳಗವನ್ನೇ ಹೊಂದಿದವರಾಗಿದ್ದಾರೆ.
ಇವರ ನಾಯಕತ್ವದಲ್ಲಿ team India ಮಾಡಿದ ಸಾಧನೆಗಳನ್ನು ವಿಶೇಷವಾಗಿ ಹೇಳಬೇಕಿಲ್ಲ. ಟೀಂ ಇಂಡಿಯಾ ನಾಯಕನಿಂದ ಹಿಡಿದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಂದಾಳತ್ವದವರೆಗೂ MS Dhoni ಕ್ರಿಕೆಟ್ ದುನಿಯಾದಲ್ಲಿ ಹಲವಾರು ದಾಖಲೆಗಳನ್ನು ಮುರಿದಿದ್ದಾರೆ.
ಮಹೇಂದ್ರ ಸಿಂಗ್ ಧೋನಿಯವರ ದಾಖಲೆ ಮುರಿಯಲು ಸಾಧ್ಯವಿಲ್ಲ
ಓರ್ವ ಕ್ರಿಕೆಟಿಗ ಮಾಡಿದ ದಾಖಲೆಯನ್ನು ಮತ್ತೊಬ್ಬ ಕ್ರಿಕೆಟಿಗ ಮುರಿಯೋದು ಸರ್ವೇ ಸಾಮಾನ್ಯ. ಆದರೆ ಧೋನಿಯ ಕೆಲವೊಂದು ದಾಖಲೆಗಳನ್ನು ಮುರಿಯಲು ಸಾಧ್ಯವೇ ಇಲ್ಲ. Dhoni ಹೆಸರಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಅನೇಕ ದಾಖಲೆಗಳಿವೆ. ಕೆಲವೊಂದು ದಾಖಲೆಗಳನ್ನಂತೂ ಮುರಿಯೋದು ಕಬ್ಬಿಣದ ಕಡಲೆ ಎಂದು ಹೇಳಿದ್ರೂ ತಪ್ಪಾಗೋದಿಲ್ಲ. ಹಾಗಾದ್ರೆ Dhoni ಆ ಐದು ವಿಶೇಷ ದಾಖಲೆಗಳು ಯಾವುದು ತಿಳಿಯೋಣ.
ಬೆಸ್ಟ್ ವಿಕೆಟ್ ಕೀಪರ್ MS Dhoni
MS Dhoni ಟೀಂ ಇಂಡಿಯಾದ ನಾಯಕನ ಜೊತೆಯಲ್ಲಿ ವಿಕೆಟ್ ಕೀಪರ್ ಕೂಡ ಹೌದು ಅನ್ನೋದು ಎಲ್ರಿಗೂ ತಿಳಿದಿರೋ ವಿಚಾರ. ಧೋನಿ ಕೇವಲ 0.08 ಸೆಕೆಂಡುಗಳಲ್ಲಿ ವೆಸ್ಟ್ ಇಂಡೀಸ್ ತಂಡದ ಬ್ಯಾಟ್ಸ್ಮನ್ ಕೀಮೋ ಪೌಲ್ ವಿಕೆಟ್ ಉರುಳಿಸೋ ಮೂಲಕ 2018ರಲ್ಲಿ 0.09 ಸೆಕೆಂಡುಗಳಲ್ಲಿ ತಮ್ಮದೇ ದಾಖಲೆಯನ್ನು ಸರಿಗಟ್ಟಿದ್ದಾರೆ. Dhoni ಆಡಿರುವ 538 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇವರು 195 ಸ್ಟಂಪಿಂಗ್ಗಳನ್ನ ಮಾಡಿದ್ದಾರೆ. ಐಪಿಎಲ್ನಲ್ಲಿಯೂ ಅತೀ ಹೆಚ್ಚು ಸ್ಟಂಪಿಂಗ್ ಮಾಡಿದ ಆಟಗಾರ ಕೂಡ Dhoni ಆಗಿದ್ದಾರೆ . ಐದು ಬೇರೆ ಬ್ಯಾಟಿಂಗ್ ಆರ್ಡರ್ನಲ್ಲಿ ಬಂದಿದ್ದರೂ ಸಹ ಅತೀ ಹೆಚ್ಚು ಅರ್ಧಶತಕ ಗಳಿಸಿದ ಏಕೈಕ ಆಟಗಾರ ಧೋನಿ. Dhoni 3,4,5,6 ಹಾಗೂ 7ನೇ ಆರ್ಡರ್ನಲ್ಲಿ ಬಂದು ಅರ್ಧಶತಕ ಗಳಿಸಿದ್ದಾರೆ.
ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದಿರಿರುವ MS Dhoni
ಇಲ್ಲಿಯವರೆಗೆ ಟೀಂ ಇಂಡಿಯಾ ಇತಿಹಾಸದಲ್ಲಿ ಯಾವ ನಾಯಕನೂ ಸಹ ತಂಡಕ್ಕೆ ಎಲ್ಲಾ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದುಕೊಟ್ಟಿಲ್ಲ. ಆದರೆ Dhoni 2007ರಲ್ಲಿ ಟಿ 20 ವರ್ಲ್ಡ್ ಕಪ್, 2011ರಲ್ಲಿ ಏಕದಿನ ವಿಶ್ವಕಪ್ ಹಾಗೂ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಟೀಂ ಇಂಡಿಯಾದ ಮುಡಿಗೇರುವಂತೆ ಮಾಡಿದ್ದಾರೆ.
ICC ODI ಬ್ಯಾಟ್ಸ್‌ಮನ್‌ಗಳಲ್ಲಿ 1ನೇ ಸ್ಥಾನಕ್ಕೆ ಏರಿದ ಕೀರ್ತಿ
MS Dhoni ಕೇವಲ 42 ಇನ್ನಿಂಗ್ಸ್ ಪೂರೈಸುವಷ್ಟರಲ್ಲಿಯೇ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಏರಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ರ ದಾಖಲೆಯನ್ನು ಮುರಿದು ಅತೀ ವೇಗವಾಗಿ ಈ ಮೈಲಿಗಲ್ಲನ್ನು ತಲುಪಿದ ನಾಯಕ ಎನಿಸಿಕೊಂಡಿದ್ದಾರೆ. MS ಧೋನಿ 42 ಇನ್ನಿಂಗ್ಸ್‌ಗಳ ನಂತರ ಐಸಿಸಿ ಪುರುಷರ ODI ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೆ ಏರಿದ್ದಾರೆ.