UPI: ಇಂಟರ್ನೆಟ್ ಇಲ್ಲದೆಯೂ ಸಲೀಸಾಗಿ ಯುಪಿಐ ಬಳಕೆ ಮಾಡಿ ಆರ್‌ಬಿಐ ಪರಿಚಯಿಸಿದ ಈ ಹೊಸ ವೈಶಿಷ್ಟ್ಯ ಹೀಗಿದೆ ನೋಡಿ..
ಇಂಟರ್ನೆಟ್ ಇಲ್ಲದ ಕಡೆಯೂ UPI ಬಳಕೆಗೆ ಅವಕಾಶ.
Make UPI Payment Without Internet: ಈಗಿನ ಕಾಲವನ್ನು ನಗದು ರಹಿತ ವಹಿವಾಟು ಎಂದು ಕರೆಯಬಹುದಾಗಿದೆ. ಹಣ ನೋಡಲು ಸಿಗದ ಕಾಲ ಇದಾಗಿದ್ದು, ಪ್ರತಿಯೊಬ್ಬರು online payment ಮಾಡುವುದನ್ನೇ ರೂಡಿಸಿಕೊಂಡಿದ್ದಾರೆ. ಅವುಗಳಲ್ಲಿUPI ಬಳಕೆ ಜನಪ್ರಿಯತೆಯನ್ನು ಹೊಂದಿದೆ. ಬಹಳ ಸುರಕ್ಷಿತವಾಗಿರುವ ಈ ಯೋಜನೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಏಕೀಕೃತ ಪಾವತಿಯ ವ್ಯವಸ್ಥೆಯ ಮೂಲಕ ಹಲವು ಬ್ಯಾಂಕ್ ಗಳು ಒಂದಾಗಿ ಹಣ ಪಾವತಿಗೆ ಹಾಗು ವರ್ಗಾವಣೆಗೆ ಇರುವ ಬೇರೆ ಬೇರೆ ವ್ಯವಸ್ಥೆಗಳನ್ನು ಏಕೀಕರಿಸಿ ಮಾಡಿದ ಒಂದು ಪಾವತಿ ವ್ಯವಸ್ಥೆ Unified Payments Inferface (UPI ) ಎಂದು ಕರೆಯುತ್ತಾರೆ.

UPI ವ್ಯವಸ್ಥೆಯ ಮಹತ್ವ
ಈ ಯೋಜನೆ ಗ್ರಾಹಕರಿಗು ಹಾಗು ಮಾರಾಟಗಾರರಿಗೂ ಸಹ ಉಪಯುಕ್ತವಾಗಿದೆ. ಏಕೆಂದರೆ ಮಾರುಕಟ್ಟೆಯಲ್ಲಿ ಹಣದ ವ್ಯವಹಾರ ಎಂದರೆ ತುಂಬ ಕಿರಿಕಿರಿ ಎನ್ನುವವರಿಗೆ UPI ಪೇಮೆಂಟ್ ವ್ಯವಸ್ಥೆ ಬಹಳ ಸಹಕಾರಿಯಾಗಿದೆ. ಚಿಲ್ಲರೆ ಹುಡುಕಲು ಬೇಕಾಗುವ ಸಮಯ ಕೊಡ ಉಳಿಯುತ್ತದೆ. ಬೇಗ ಬೇಗ ಪೇಮೆಂಟ್ ಮಾಡಿ ವಸ್ತುಗಳನ್ನು ಖರೀದಿ ಮಾಡಬಹುದಾಗಿದೆ.
ನಗದು ರಹಿತ ಆರ್ಥಿಕತೆ
UPI ಅಂದರೆ ಅಷ್ಟು ಸುಲಭ ಇಲ್ಲ ಯಾಕೆಂದರೆ ನಾವು UPI ಬಳಸುವಾಗ ಇಂಟರ್ನೆಟ್ ಸೌಲಭ್ಯ ಕೊಡ ಸರಿಯಾಗಿ ಇರಬೇಕಾಗುತ್ತದೆ. ಇಂಟರ್ನೆಟ್ ಸಮಸ್ಯೆಯಿಂದ ಹಲವು ಬಾರಿ ಎರಡೆರಡು ಸಲ ಪೇಮೆಂಟ್ ಮಾಡಿ ಕೆಲವರು ಹಣ ಕಳೆದುಕೊಳ್ಳುವುದು ಇದೆ. ಹಾಗಾಗಿ ನೆಟವರ್ಕ್ ಇಲ್ಲದ ಕಡೆ ಹುಶಾರಾಗಿ UPI ಬಳಸಬೇಕಾಗುತ್ತದೆ.

ಇಂಟರ್ನೆಟ್ ಇಲ್ಲದ ಕಡೆಯೂ UPI ಬಳಕೆಗೆ ಅವಕಾಶ
ತಂತ್ರಜ್ಞಾನ ಹೆಚ್ಚಾದಂತೆ ದೇಶದಲ್ಲಿ ಬೇರೆ ಬೇರೆ ಸೌಲಭ್ಯಗಳು ಜಾರಿಬರುವುದು ಸಹಜ. ಹಾಗೆಯೆ RBI ಆರ್ಥಿಕ ವ್ಯವಸ್ಥೆಯಲ್ಲಿ ಇನ್ನೊಂದು ಹೊಸ ಯೋಜನೆ ಜಾರಿಗೆ ತಂದಿದ್ದು ಅದೇನೆಂದರೆ UPI Lite app. ಈ app ಅನ್ನು ಬಳಸಿ ರೂಪಾಯಿ 500 ರ ತನಕ ಇಂಟರ್ನೆಟ್ ಇಲ್ಲದೆ ಹಣದ ವಹಿವಾಟು ಮಾಡಬಹುದಾಗಿದೆ. ಯಾವುದೇ ಇಂಟರ್ನೆಟ್ ಕೂಡ ಬಳಸದೆ UPI Lite ಮೂಲಕ ಹಣ ವರ್ಗಾವಣೆ ಸಾಧ್ಯವಾಗಿದೆ.
ಆರಂಭದಲ್ಲಿ ರೂಪಾಯಿ 200 ಅನ್ನು ಮಾತ್ರ ವಹಿವಾಟು ಮಾಡಬಹುದಾಗಿತ್ತು ಈಗ ರೂಪಾಯಿ 500 ರ ತನಕ ಹೆಚ್ಚಿಸಲಾಗಿದೆ . ರೂಪಾಯಿ 500 ಕ್ಕಿಂತ ಹೆಚ್ಚು ವಹಿವಾಟಿಗೆ ಅವಕಾಶ ಇರುವುದಿಲ್ಲ ಎನ್ನಲಾಗಿದೆ. ಇಂಟರ್ನೆಟ್ ಸೌಲಭ್ಯ ಇಲ್ಲದ ಕಡೆ ಈ ವ್ಯವಸ್ಥೆ ತುಂಬ ಸಹಕಾರಿಯಾಗಿದ್ದು, ನಗದು ಹಣ ಇಲ್ಲದೆ ಎಲ್ಲಿ ಬೇಕಾದರೂ ಹೋಗಬಹುದಾಗಿದೆ.