Maruti: 3 ಲಕ್ಷದ ಈ ಮಾರುತಿ ಕಾರ್ ಖರೀದಿಸಲು ಮುಗಿಬಿದ್ದ ಜನರು, ಭರ್ಜರಿ 35 Km ಮೈಲೇಜ್.
ಮೂರೂ ಲಕ್ಷದ ಮಾರುತಿ ಕಾರಿಗೆ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ.
Maruti Alto New Model: ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯ ವಾಹನ ತಯಾರಕ ಕಂಪನಿಗಳು ಹೊಸ ಹೊಸ ಕಾರ್ ಗಳನ್ನು ಬಿಡುಗಡೆ ಮಾಡುತ್ತಿರುತ್ತವೆ. ಇದೀಗ ಪ್ರತಿಷ್ಠಿತ ವಾಹನ ತಯಾರಕ ಕಂಪನಿ ಆಗಿರುವ ಮಾರುತಿ (Maruti) ತನ್ನ ಹೊಸ ಮಾದರಿಯ ಕಾರ್ ಒಂದನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ಮಾರುತಿ ಆಲ್ಟೊ (Maruti Alto) ಹೆಚ್ಚಿನ ಸೇಲ್ ಕಂಡಿದೆ. ಇದೀಗ ಬಿಡುಗಡೆ ಮಾಡಿರುವ ಮಾರುತಿ ಆಲ್ಟೊ ದ ನೂತನ ಮಾದರಿಯ ಕಾರ್ ಬಗ್ಗೆ ನಾವೀಗ ತಿಳಿದುಕೊಳ್ಳೋಣ.
ಮಾರುತಿ ಆಲ್ಟೊ ನೂತನ ಮಾದರಿ
ಮಾರುತಿ ಸುಜುಕಿ ಈ ನೂತನ ಮಾದರಿಯ ಕಾರ್ ಅನ್ನು ಮೂರು ರೂಪಂತರದಲ್ಲಿ ಬಿಡುಗಡೆ ಮಾಡಿದೆ. STD, L ಮತ್ತು V.L ಟ್ರಿಮ್ ಸಹ CNG ಕಿಟ್ ನೊಂದಿಗೆ ಲಭ್ಯವಿದೆ. ಈ ನೂತನ ಮಾದರಿಯ ಕಾರ್ ನ ಹೆಸರು ಮಾರುತಿ ಆಲ್ಟೊ 800 (Maruti Alto 800).
ಮಾರುತಿ ಆಲ್ಟೊ 800 ಕಾರ್ ನ ಮೈಲೇಜ್
ಮಾರುತಿ ಆಲ್ಟೊ 800 ಕಾರ್ ಉತ್ತಮ ಮೈಲೇಜ್ ಅನ್ನು ನೀಡುತ್ತದೆ. ಆಲ್ಟೊ 800 ಕಾರ್ ಪ್ರತಿ ಲೀಟರ್ 22.05 ಕಿಲೋಮೀಟರ್ ಮೈಲೇಜ್ಅನ್ನು ನೀಡುತ್ತದೆ. ಹಾಗೇ ಪ್ರತಿ ಕೆಜಿ CNG ಗೆ 35 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.
ಮಾರುತಿ ಆಲ್ಟೊ 800 ಕಾರಿನ ಬೆಲೆ ಮತ್ತು ವಿಶೇಷತೆ
ಮಾರುತಿ ಆಲ್ಟೊ 800 ಗಾತ್ರದಲ್ಲಿ ಸಣ್ಣದಾಗಿದ್ದು, ಮಧ್ಯಮ ವರ್ಗದ ಕುಟುಂಬದವರಿಗೆ ಈ ಕಾರ್ ಉತ್ತಮವಾಗಿದೆ. ಈ ಕಾರ್ ಗೆ 3 ರಿಂದ 5 ಲಕ್ಷ ಬೆಲೆಯನ್ನು ನಿಗದಿಪಡಿಸಲಾಗಿದೆ. ಮಾರುತಿ ಆಲ್ಟೊ 800 ಕಾರ್ ಆರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ರೇಷ್ಮೆಯಂತಹ ಬೆಳ್ಳಿ, ಅಪ್ ಡೌನ್ ಕೆಂಪು, ಮೊಜಿತೋ ಹಸಿರು, ಗ್ರಾನೈಟ್ ಬೂದು, ಬಿಳಿ ಮತ್ತು ಸೇರುಲಿಯನ್ ನೀಲಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಇನ್ನು ಮಾರುತಿ ಆಲ್ಟೊ 800 ಶೋ ರೂಮ್ ಗಳಲ್ಲಿ ಲಭ್ಯವಿದೆ.