Maruti Suzuki: ಹೊಸ ಕಾರ್ ಖರೀದಿಸುವವರಿಗೆ ಭರ್ಜರಿ ದೀಪಾವಳಿ ಆಫರ್, ಈ ಕಾರಿನ ಮೇಲೆ 30000 ರೂ ಡಿಸ್ಕೌಂಟ್.
ಮಾರುತಿ ಸುಜುಕಿ ಕಾರು ಕಂಪನಿ ತನ್ನ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್ ಅನ್ನು ನೀಡಿದೆ, ಹಲವು ಫೀಚರ್ ಹೊಂದಿರುವ ಈ ಕಾರನ್ನು, ಕಡಿಮೆ ಬೆಲೆಗೆ ಇಂದೇ ಖರೀದಿಸಿ
Maruti Suzuki Celerio: ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಇನ್ನೊಂದು ಖುಷಿಯ ವಿಚಾರವನ್ನು ಮಾರುತಿ ಸುಜುಕಿ (Maruti Suzuki) ಕಾರು ಕಂಪನಿ ರಿವೀಲ್ ಮಾಡುತ್ತಿದೆ. ದೀಪಾವಳಿಗೆ ಕಾರು ಖರೀದಿ ಮಾಡುವವರಿಗೆ ಈ ಸುದ್ದಿ ಬಹಳ ಸಂತಸವನ್ನು ನೀಡುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಮಾರುತಿ ಸುಜುಕಿ ಕಾರು ಕಂಪನಿ ತನ್ನ ಕಾರುಗಳ ಮೇಲೆ ಭಾರೀ ರಿಯಾಯಿತಿಗಳನ್ನು ಘೋಷಿಸಿದೆ ಹಾಗು ತನ್ನ ಕಾರುಗಳ ಮೇಲೆ ನಗದು ರಿಯಾಯಿತಿಗಳು, ವಿನಿಮಯ ಬೋನಸ್‌ಗಳು ಮತ್ತು ಕಾರ್ಪೊರೇಟ್ ರಿಯಾಯಿತಿಗಳನ್ನು ನೀಡಲಾಗಿದೆ. ಅದರಲ್ಲೂ ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಕಾರಿನ ಮೇಲೆ ದೀಪಾವಳಿ ಹಬ್ಬಕ್ಕೆ ಭರ್ಜರಿ ರಿಯಾಯಿತಿಗಳನ್ನು ಘೋಷಿಸಿದೆ.

ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಕಾರಿನ ವೈಶಿಷ್ಟತೆಗಳು
ಈ ಸೆಲೆರಿಯೊ ಕಾರಿನ ಲೋ ಟ್ರಿಮ್‌ಗಳು ಸಾಧಾರಣ ಅಲಾಯ್ ವ್ಹೀಲ್ ಗಳನ್ನು ಪಡೆದುಕೊಂಡಿದ್ದು, ಉನ್ನತ ರೂಪಾಂತರಗಳು ಬ್ಲ್ಯಾಕ್ ಬಣ್ಣದ 15-ಇಂಚಿನ ಅಲಾಯ್ ವ್ಹೀಲ್ ಜೋಡಣೆಯೊಂದಿಗೆ ಅತ್ಯುತ್ತಮ ಫೀಚರ್ಸ್ ಒಳಗೊಂಡ ಇಂಟಿರಿಯರ್ ಅನ್ನು ಹೊಂದಿದೆ. ಇಂಟಿರಿಯರ್ ನಲ್ಲಿ ಹೊಸ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಕಾಲ್ ಹಾಗೂ ಮ್ಯೂಸಿಕ್ ಅಸಿಸ್ಟ್ ಹೊಂದಿರುವ ಮಲ್ಟಿ ಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಸಿಂಗಲ್ ಪಾಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಸರ್ಕ್ಯುಲರ್ ಡಿಜಿಟಲ್ ಸ್ಕ್ರೀನ್ ಅನ್ನು ಒಳಗೊಂಡಿದೆ. ಇದರ ಜೊತೆಗೆ ಈ ಕಾರು ಆಪಲ್ ಕಾರ್‌ಪ್ಲೇ, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂನಂತಹ ಹಲವಾರು ಹೊಸ ಹಾಗೂ ಅಪ್ ಡೇಟ್ ಮಾಡಲಾದ ಫೀಚರ್ ಗಳನ್ನು ಕೂಡ ಪಡೆದುಕೊಂಡಿದೆ.
ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಕಾರಿನ ಎಂಜಿನ್ ಸಾಮರ್ಥ್ಯ
ಮಾರುತಿ ಸೆಲೆರಿಯೊದಲ್ಲಿ 1.0 ಲೀಟರ್ ಕೆ 10ಸಿ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅಳವಡಿಸಿದೆ. ಈ ಎಂಜಿನ್ 66 ಬಿಹೆಚ್‌ಪಿ ಪವರ್ ಹಾಗೂ 89 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಸೆಲೆರಿಯೊ ಐದು ಸ್ಪೀಡ್ ಮ್ಯಾನುಯಲ್ ಗೇರ್‌ಬಾಕ್ಸ್‌ನೊಂದಿಗೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನ ಆಯ್ಕೆಯನ್ನು ಸಹ ಪಡೆಯುತ್ತದೆ. ಈ ಮಾರುತಿ ಸೆಲೆರಿಯೊ ಕಾರು ಸಿಎನ್‌ಜಿ ಆಯ್ಕೆಯಲ್ಲಿಯು ಸಹ ಲಭ್ಯವಿದೆ. ಇದು 56.7 ಬಿಹೆಚ್‍ಪಿ ಪವರ್ ಮತ್ತು 82.1 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಮ್ಯಾನ್ಯುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಮಾತ್ರ ಬರುತ್ತದೆ.

ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಕಾರಿನ ಬೆಲೆ ಮತ್ತು ರಿಯಾಯಿತಿ
ಮಾರುತಿ ಕಂಪನಿಯು ಸೆಲೆರಿಯೊ ಕಾರಿನ ಮೇಲೆ ರೂ. 59,000 ಗಳವರೆಗಿನ ರಿಯಾಯಿತಿ ನೀಡಿದೆ. ಈ ಸೆಲೆರಿಯೊ ಕಾರಿನ ಮೇಲೆ VXi, ZXi, ಮತ್ತು ZXi Plus ರೂಪಾಂತರಗಳ ರೂ. 35,000, ವರೆಗೆ ನಗದು ರಿಯಾಯಿತಿ, ರೂ.20,000 ವಿನಿಮಯ ಬೋನಸ್ ಮತ್ತು ರೂ.4,000 ಕಾರ್ಪೊರೇಟ್ ಬೋನಸ್‌ಗಳು ರಿಯಾಯಿತಿಗಳನ್ನು ನೀಡಿದೆ. ಇನ್ನು ಮಾರುತಿ ಸುಜುಕಿ ಸೆಲೆರಿಯೊ ಕಾರಿನ CNG ಮತ್ತು AMT ರೂಪಾಂತರಗಳ ಮೇಲೆ 30,000 ರೂಪಾಯಿ ನಗದು ರಿಯಾಯಿತಿ, 20,000 ರೂಪಾಯಿ ವಿನಿಮಯ ಬೋನಸ್ ಮತ್ತು 4,000 ರೂಪಾಯಿ ಕಾರ್ಪೊರೇಟ್ ಬೋನಸ್ ರಿಯಾಯಿತಿಗಳನ್ನು ನೀಡಿದೆ.