Maruti Swift: ಬಂತು 2023 ರ ಮಾರುತಿ ಸ್ವಿಫ್ಟ್ ಸ್ಪೋರ್ಟ್ ಕಾರ್, ಕಡಿಮೆ ಬೆಲೆ ಮತ್ತು 35 Km ಮೈಲೇಜ್.

ಇದೀಗ Maruti Suzuki ಕಂಪನಿ ಅತಿ ಕಡಿಮೆ ಬೆಲೆಯಲ್ಲಿ ಮಾರುತಿ Swift ಕಾರನ್ನು ಬಿಡುಗಡೆ ಮಾಡಿದೆ.

Maruti Suzuki Swift 2023 Launch: ಭಾರತೀಯ ಆಟೋ ವಲಯದಲ್ಲಿ ಸ್ವಿಫ್ಟ್ ಕಾರ್ ಗಳ ಬೇಡಿಕೆಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೇಡಿಕೆಗೆ ಅನುಗುಣವಾಗಿ ದೇಶದ ಜನಪ್ರಿಯ ಕಾರ್ ತಯಾರಕ ಕಂಪನಿಯಾದ Maruti ಇದೀಗ ನೂತನ ಮಾದರಿಯ ವಿಭಿನ್ನ ವೈಶಿಷ್ಟ್ಯಗಳಿರುವ Swift Car ಗಳನ್ನು ಬಿಡುಗಡೆ ಮಾಡುತ್ತಿವೆ.

ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲ ಮಾದರಿಯ ಕಾರ್ ಗಳಿಗಿಂತ Maruti Swift Car ಗಳು ಅತಿ ಆಕರ್ಷಣೀಯವಾಗಿದ್ದು ಗ್ರಾಹಕರಿಗೆ ಹೆಚ್ಚಿನ ಮೈಲೇಜ್ ನೀಡುತ್ತದೆ. ಇದೀಗ Maruti Suzuki ಕಂಪನಿ ಅತಿ ಕಡಿಮೆ ಬೆಲೆಯಲ್ಲಿ ಮಾರುತಿ Swift ಕಾರನ್ನು ಬಿಡುಗಡೆ ಮಾಡಿದೆ. ನೀವು Swift ಕಾರ್ ಖರೀದಿಯ ಬಗ್ಗೆ ಯೋಚಿಸುತ್ತಿದ್ದರೆ ನಿಮಗಿದು ಕಂಪನಿ ಬೆಸ್ಟ್ ಕಾರ್ ಅನ್ನು ನೀಡುತ್ತಿದೆ.

Maruti Suzuki Swift 2023 Launch
Image Credit: Dnpindia

Maruti Suzuki Swift
ಶಕ್ತಿಯುತ ಎಂಜಿನ್ ಮತ್ತು ವಿವಿಧ ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಿರುವ ಮಾರುತಿ ಸುಜುಕಿ ಸ್ವಿಫ್ಟ್ ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಲಭ್ಯವಾಗಲಿದೆ. ಕಂಪನಿಯು ಶೀಘ್ರದಲ್ಲೇ ಹೊಸ ರೂಪಾಂತರದಲ್ಲಿ ಅತ್ಯಂತ ಜನಪ್ರಿಯ ಕಾರು ಸ್ವಿಫ್ಟ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಕಾರಿನಲ್ಲಿ ಹೊಸ ಎಂಜಿನ್ ಜೊತೆಗೆ 35 ಕಿ.ಮೀ.ಗೂ ಹೆಚ್ಚು ಮೈಲೇಜ್ ನೀಡುವುದನ್ನು ಕಾಣಬಹುದಾಗಿದೆ. ಮಾರುತಿ ಸುಜುಕಿ ಸ್ವಿಫ್ಟ್ ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ ಇದೆ.

Maruti Suzuki Swift Feature
ನೂತನ ವೈಶಿಷ್ಟ್ಯಗಳನ್ನು ಈ ಕಾರ್ ನಲ್ಲಿ ಅಳವಡಿಸಲಾಗಿದ್ದು, ಹೊಸದಾಗಿ ವಿನ್ಯಾಸಗೊಳಿಸಲಾದ ಗ್ರಿಲ್, ಹೊಸ ಎಲ್ಇಡಿ ಅಂಶಗಳು ಮತ್ತು ಮುಂಭಾಗದಲ್ಲಿ ನಯವಾದ ಹೆಡ್ ಲ್ಯಾಂಪ್ ಗಳನ್ನೂ ನೀಡಲಾಗಿದೆ. ಸ್ವಿಫ್ಟ್ ನವೀಕರಿಸಿದ ಮುಂಭಾಗದ ಬಂಪರ್, ಬ್ಲ್ಯಾಕ್ ಔಟ್ ಪಿಲ್ಲರ್‌ಗಳು, ವೀಲ್ ಆರ್ಚ್‌ಗಳ ಮೇಲೆ ಫಾಕ್ಸ್ ಏರ್ ವೆಂಟ್‌ಗಳು ಮತ್ತು ರೂಫ್ ಮೌಂಟೆಡ್ ಸ್ಪಾಯ್ಲರ್ ಅನ್ನು ಸಹ ನೀಡಲಾಗಿದೆ.

Maruti Suzuki Swift Feature
Image Credit: Timesbull

ಭರ್ಜರಿ 35 Km ಮೈಲೇಜ್ ನೀಡಲಿದೆ Maruti Suzuki Swift
ಮಾರುತಿ ಸುಜುಕಿ ಸ್ವಿಫ್ಟ್‌ ನಲ್ಲಿ ಅತ್ಯಂತ ಶಕ್ತಿಶಾಲಿ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಹೊಸ ಸ್ವಿಫ್ಟ್‌ನಲ್ಲಿ 1.2-ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಒದಗಿಸಿದೆ. ಇದರಲ್ಲಿ ಅಳವಡಿಸಲಾದ ಹೈಬ್ರಿಡ್ ತಂತ್ರಜ್ಞಾನದಿಂದ ಈ ಕಾರು 35 ರಿಂದ 40 kmpl ಮೈಲೇಜ್ ನೀಡುತ್ತದೆ.

ಇನ್ನು ಕಂಪನಿಯು ಮಾರುತಿ ಸುಜುಕಿ ಸ್ವಿಫ್ಟ್ ನ ಬೆಲೆಯ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಿಲ್ಲ. ಆದರೆ ಹಳೆಯ ಮಾದರಿಯ ಕಾರ್ ಗಿಂತ ಇದರಲ್ಲಿ ಹೆಚ್ಚಿನ ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಿರುವ ಕಾರಣ 9 ರಿಂದ 11 ಲಕ್ಷ ಹಣವನ್ನು ನಿಗದಿಪಡಿಸಬಹುದು ಎಂದು ಅಂದಾಜಿಸಲಾಗಿದೆ.

Leave A Reply

Your email address will not be published.