Megha Shetty: ಮುಗುತ್ತಿ ಚುಚ್ಚಿಸಿಕೊಳ್ಳುತ್ತಿರುವ ವಿಡಿಯೋ ಶೇರ್ ಮಾಡಿದ ಮೇಘ ಶೆಟ್ಟಿ, ಫಿಕ್ಸ್ ಆಯ್ತಾ ಮೇಘ ಶೆಟ್ಟಿ ಮದುವೆ…?
ಮೇಘ ಶೆಟ್ಟಿ ಯವರ ಹೊಸ ಲುಕ್, ಅಭಿಮಾನಿಗಳು ಫಿದಾ.
Megha Shetty Nose Piercing: ‘ಜೊತೆ ಜೊತೆಯಲಿ’ ಧಾರಾವಾಹಿಯ ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ (Megha Shetty) ಸೋಷಿಯಲ್ ಮೀಡಿಯಾದಲ್ಲಿ(Social Media) ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಮತ್ತೆ ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಜೀ ಕನ್ನಡದಲ್ಲಿ ಬರುತ್ತಿದ್ದಂತ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅನು ಸಿರಿಮನೆ ಎಲ್ಲರಿಗೂ ನೆನಪಿರಲೇ ಬೇಕು ಅಲ್ಲವಾ. ಮರೆಯುವಂತ ಪಾತ್ರ ಅಲ್ಲ ಅದು. ಸುಬ್ಬು ಪ್ರೀತಿಯಿಂದ ಬಂಗಾರ ಅಂತಿದ್ದರೆ ಎಲ್ಲರ ಮನಸ್ಸಲ್ಲೂ ಬಂಗಾರ ಬಂಗಾರವೆಂಬ ವಾಯ್ಸ್ ಪದೇ ಪದೇ ಕೇಳಿಸುತ್ತಾ ಇತ್ತು. ಅಭಿಮಾನಿಗಳ ಮುದ್ದು ಬಂಗಾರ ಈಗ ಹೊಸ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಮೇಘಾ ಶೆಟ್ಟಿ ಯವರ ಹೊಸ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ
ಮೇಘಾ ಶೆಟ್ಟಿ ಇಂದು ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಾ ಇದ್ದಾರೆ. ಮೂಗು ಚುಚ್ಚಿಕೊಳ್ಳುವ ವಿಡಿಯೋ ಹರಿಬಿಟ್ಟು, ಫ್ಯಾನ್ಸ್ ಗೆಲ್ಲಾ ಫುಲ್ ಖುಷಿ ಕೊಟ್ಟಿದ್ದಾರೆ. ಈ ವಿಡಿಯೋ ನೋಡಿದ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ಮೂಗು ಚುಚ್ಚಿಸಿಕೊಳ್ಳುವುದಕ್ಕೂ ಮುನ್ನ ಸಹಜವಾಗಿಯೇ ಮೇಘಾ ಕೂಡ ಹೆದರಿದ್ದಾರೆ. ಆದರೆ, ಮೂಗು ಚುಚ್ಚುವವರು ಕೊಂಚ ಧೈರ್ಯ ಹೇಳಿದ್ದಾರೆ. ಬಳಿಕ ಕಣ್ಣು ಮುಚ್ಚಿ ಕಣ್ಣು ತೆರೆಯುವುದರೊಳಗೆ ಚುಚ್ಚಿದ್ದಾರೆ.
ಮದುವೆ ಏನಾದ್ರೂ ಫಿಕ್ಸ್ ಆಯ್ತಾ…?
ಭಾರತೀಯ ಸಂಪ್ರದಾಯದಲ್ಲಿ ಹೆಣ್ಣು ಮಕ್ಕಳು ಮೂಗು ಚುಚ್ಚಿಸುವುದು ರೂಢಿಯಲ್ಲಿದೆ. ಚಿಕ್ಕವಯಸ್ಸಿನಲ್ಲಿಯೇ ಮೂಗನ್ನು ಚುಚ್ಚಿಸುತ್ತಾರೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಫ್ಯಾಷನ್ ಹೆಸರಿನಲ್ಲಿ ಈ ಸಂಪ್ರದಾಯ ಮರೆಯಾಗಿದೆ. ಆದರೆ ಮದುವೆ ಸಮಯದಲ್ಲಿ ಅದನ್ನು ಪಾಲನೆ ಮಾಡುವವರು ಹೆಚ್ಚು ಜನ.
View this post on Instagram
ಇತ್ತೀಚೆಗೆ ಮದುವೆಯಾದ ನಟಿ ಹರಿಪ್ರಿಯಾ ಕೂಡ ಮದುವೆ ಸಂದರ್ಭದಲ್ಲಿಯೇ ಮೂಗು ಚುಚ್ಚಿಸಿಕೊಂಡಿದ್ದರು. ಈಗ ಮೇಘಾ ಶೆಟ್ಟಿ ಮೂಗು ಚುಚ್ಚಿಸಿಕೊಂಡಿರುವುದು ಈ ಅನುಮಾನಕ್ಕೆ ಕಾರಣವಾಗಿದೆ. ಇಷ್ಟಪಟ್ಟು ಚುಚ್ಚಿಸಿಕೊಂಡಿರುವ ಸಾಧ್ಯತೆ ಇದೆ. ಎಲ್ಲವನ್ನು ಊಹೆ ಮಾಡಿಕೊಳ್ಳುವುದಕ್ಕೆ ಕಷ್ಟ.
ಬಂಗಾರದ ಮೂಗುತ್ತಿಗೆ ಫ್ಯಾನ್ಸ್ ರಿಯಾಕ್ಷನ್
ಮೂಗು ಚುಚ್ಚಿದ ಬಳಿಕ ಮೇಘಾ ಶೆಟ್ಟಿ ಕಣ್ಣಲ್ಲಿ ನೀರು ಬಂದಿದೆ. ಆ ನೋವಿನ ನಡುವಲ್ಲೂ ನಗುವುದಕ್ಕೆ ಪ್ರಯತ್ನಿಸಿದ್ದಾರೆ. ಹೀಗಾಗಿ ಫ್ಯಾನ್ಸ್ ಎಲ್ಲಾ ಸಮಾಧಾನ ಮಾಡುವುದಕ್ಕೆ ಯತ್ನಿಸಿದ್ದಾರೆ. “ಕ್ಯಾಮರಾ ಆಫ್ ಮಾಡಿ ಅಳುತ್ತಿದ್ದೀರಾ, ಮೂಗುತ್ತಿ ಸುಂದರಿ, ಮೂಗುತ್ತಿಯಲ್ಲಿ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರಾ, ಬಂಗಾರ ಈಗ ಇನ್ನು ಮುದ್ದಾಗಿ ಕಾಣಿಸುತ್ತಿದ್ದೀಯಾ” ಅಂತೆಲ್ಲಾ ಕಮೆಂಟ್ ಗಳನ್ನು ಹಾಕುತ್ತಿದ್ದಾರೆ. ಈ ವಿಡಿಯೋ ಬಿಟ್ಟು ಕಡಿಮೆ ಸಮಯಕ್ಕೇನೆ 35 ಸಾವಿರ ವೀವ್ಸ್ ಆಗಿದೆ.