Meghana Raj: ಮತ್ತೆ ಪ್ರೀತಿ ಹುಟ್ಟಿದರೆ ಒಪ್ಪಿಕೊಳ್ತಾರಾ ಮೇಘನಾ ರಾಜ್‌…? ಸ್ಪಷ್ಟ ಉತ್ತರ ನೀಡಿದ ಮೇಘನಾ ರಾಜ್.

ಮತ್ತೆ ಪ್ರೀತಿ ಆಗುವ ಕುರಿತು ನಟಿ ಮೇಘನಾ ರಾಜ್ ಮನದಾಳದ ಮಾತು.

Meghana Raj Interview: ಸ್ಯಾಂಡಲ್‌ವುಡ್ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ (Chiranjeevi Sarja) ಅವರ ಪತ್ನಿ ಮೇಘನಾ ರಾಜ್ (Meghana Raj) ಅವರ ಸುದ್ದಿ ಅವಾಗಾವಾಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಅವರ ಪತಿ ಚಿರು ಅಗಲಿ ಮೂರು ವರ್ಷಗಳೇ ಆಗಿವೆ. ಇನ್ನೂ ಚಿರು ಬಿಟ್ಟು ಹೋದ ನೋವಿನಿಂದ ಮೇಘನಾ ರಾಜ್ ಹೊರಬಂದಂತೆ ಕಾಣುತ್ತಿಲ್ಲ. ಆದರೆ, ಈ ನೋವಿನಿಂದ ಹೊರಬರುವುದಕ್ಕೆ ಶತಪ್ರಯತ್ನ ಮಾಡುತ್ತಲೇ ಇದ್ದಾರೆ.

ಚಿರು ಅಗಲಿದ ದಿನದಿಂದ ಮೇಘನಾ ರಾಜ್‌ಗೆ ಒಂದು ಪ್ರಶ್ನೆ ಎದುರಾಗುತ್ತಲೇ ಇದೆ. ಕೆಲವೊಮ್ಮೆ ಮೇಘನಾ ರಾಜ್ ಎರಡನೇ ಮದುವೆ ಆಗುತ್ತಾರೆ ಅನ್ನೋ ಸುದ್ದಿಗಳು ಹರಿದಾಡಿದ್ದೂ ಇದೆ. ಆದರೆ ಇದೆಲ್ಲವನ್ನೂ ಕೇಳಿಸಿಕೊಂಡು ಮೇಘನಾ ರಾಜ್ ಸುಮ್ಮನೇ ಇದ್ದರು. ಆದ್ರೀಗ ಸಂದರ್ಶನವೊಂದರಲ್ಲಿ ಓಪನ್ ಆಗಿ ಉತ್ತರ ಕೊಟ್ಟಿದ್ದಾರೆ.

Meghana Raj Interview
Image Source: Kannada News

ಮೇಘನಾ ರಾಜ್ ಅವರ ಸಿನಿಮಾ ಜೀವನ ಮತ್ತೆ ಆರಂಭ

ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮೇಘನಾ ರಾಜ್ ನೋವುಗಳಿಂದ ಹೊರ ಬಂದು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗಷ್ಟೇ ‘ತತ್ಸಮ ತದ್ಬವ’ ಸಿನಿಮಾ ರಿಲೀಸ್ ಆಗಿದೆ. ಇದು ಚಿರು ಅಗಲಿಕೆ ಬಳಿಕ ರಿಲೀಸ್ ಆಗಿರೋ ಮೊದಲ ಸಿನಿಮಾ. ಈ ಸಿನಿಮಾ ರಿಲೀಸ್ ಬೆನ್ನಲ್ಲೇ ಮತ್ತೊಂದು ಸಿನಿಮಾಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸದ್ಯ ಸಂದರ್ಶನವೊಂದರಲ್ಲಿ ಮೇಘನಾ ರಾಜ್ ಎರಡನೇ ಬಾರಿ ಪ್ರೀತಿ ಹುಟ್ಟಿದರೆ ಒಪ್ಪಿಕೊಳ್ಳುತ್ತೀರಾ ಅನ್ನೋ ಪ್ರಶ್ನೆಗೆ ನೇರವಾಗಿ ಉತ್ತರ ಕೊಟ್ಟಿದ್ದಾರೆ.

“ಮತ್ತೆ ಪ್ರೀತಿ ಹುಟ್ಟಿದರೆ ಒಪ್ಪಿಕೊಳ್ಳುತ್ತೀರಾ?”

‘ತತ್ಸಮ ತದ್ಬವ’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ರೇಡಿಯೋ ಸಿಟಿ ಯೂಟ್ಯೂಬ್ ಚಾನೆಲ್‌ನಲ್ಲಿ ಸಂದರ್ಶನ ಮಾಡಲಾಗಿತ್ತು. ಈ ವೇಳೆ ನಿರೂಪಕಿ ಮೇಘನಾ ರಾಜ್‌ಗೆ ಒಂದು ಪ್ರಶ್ನೆ ಹಾಕಿದ್ದರು.”ನೀವು ಯಂಗ್ ಮದರ್ ಇದ್ದೀರಿ.. ನಿಮ್ಮ ಬದುಕಿನ ಯಾವುದೋ ಒಂದು ಕ್ಷಣದಲ್ಲಿ ಮತ್ತೆ ಪ್ರೀತಿ ಹುಟ್ಟಿದರೆ ನೀವು ಒಪ್ಪಿಕೊಳ್ಳುತ್ತೀರಾ?” ನಿರೂಪಕಿ ಕೇಳಿದ ಪ್ರಶ್ನೆಗೆ ಮೇಘನಾ ರಾಜ್ ನೇರವಾಗಿ ಉತ್ತರ ಕೊಟ್ಟಿದ್ದಾರೆ.

Meghana Raj Interview
Image Source: Youtube

“ನಾನು ಓಪ್ಪಿಕೊಳ್ಳುತ್ತೀನಾ ಅನ್ನೋದು ನನಗೆ ನಿಜವಾಗಿಯೂ ಗೊತ್ತಿಲ್ಲ. ಬಹುಶ: ಯಾರೋ ಇದ್ದಾಗ ಅದಕ್ಕೆ ಉತ್ತರ ಬರಬಹುದೇನೋ.. ನನಗೆ ಈಗ ನಿಜವಾಗಿಯೂ ಗೊತ್ತಿಲ್ಲ. ನನಗೆ ಈ ಬಗ್ಗೆ ಯಾರೂ ಮಾತಾಡಿಸಿಯೇ ಇಲ್ಲ ಅಂದರೆ ನಾನು ಸುಳ್ಳು ಹೇಳಿದಂತೆ ಆಗುತ್ತೆ. ನನ್ನ ಸುತ್ತಮುತ್ತ ಇಂತಹದ್ದೊಂದು ಮಾತುಕತೆ ನಡೆಯುತ್ತಲೇ ಇರುತ್ತೆ. ಆದರೆ ಮಾನಸಿಕವಾಗಿ ನಾನು ರೆಡಿಯಾಗಿಲ್ಲ. ಆ ಸಮಯದಲ್ಲಿ ಏನು ಸೂಕ್ತವೋ ಅದನ್ನು ಮಾಡುತ್ತೇನೆ.” ಎಂದು ಮೇಘನಾ ರಾಜ್ ಹೇಳಿದ್ದಾರೆ.

ಮೇಘನಾರಾಜ್‌ ಅವರ ನೋವಿನ ಕ್ಷಣಗಳು

ಮೇಘನಾರಾಜ್‌ ಇದೇ ಸಂದರ್ಶನದಲ್ಲಿ ನೋವನ್ನು ತೋಡಿಕೊಂಡಿದ್ದಾರೆ. ಜನರು ಮೇಘನಾಗೆ ಕೇಳುವ ಪ್ರಶ್ನೆ. ಅದಕ್ಕೆ ಅವರು ಬಯಸುವ ಉತ್ತರದ ಬಗ್ಗೆನೂ ಮಾತಾಡಿದ್ದಾರೆ. “ಜನ ನನಗೆ ಮಾತಾಡಿಸಿದಾಗ ಅವರಿಗೆ ನಿರ್ದಿಷ್ಟವಾದ ಉತ್ತರ ಬೇಕು. ಅವರು ಏನು ಹೇಳುವುದಕ್ಕೆ ಹೊರಟಿದ್ದಾರೆ ಅನ್ನೋದು ನನಗೆ ಗೊತ್ತು. ಅವರು ನನ್ನನ್ನು ನನ್ನ ಹಾಗೆ ಇರುವುದಕ್ಕೆ ಅವಕಾಶವೇ ಕೊಟ್ಟಿಲ್ಲ.” ಎಂದಿದ್ದಾರೆ.

“ಕೆಲವು ಸಾರಿ ನಮಗೆ ಸಿಂಪತಿ ಬೇಕಿಲ್ಲ. ಅಯ್ಯೋ ಹೀಗಾಯ್ತಲ್ಲ.. ಹೀಗಾಯ್ತಲ್ಲ ಅನ್ನೋದನ್ನು ಕೇಳಿಸಿಕೊಳ್ಳುವುದಕ್ಕೆ ಇಷ್ಟ ಇಲ್ಲ. ಹೆಂಗಿರುತ್ತೆ ಅಂದರೆ, ಏನೋ ಒಂದು ಥರ ಮುದುಡಿ ಹೋಗಿ, ಎಲ್ಲೋ ಒಂದು ಕಡೆ ಬಚ್ಚಿಟ್ಟುಕೊಂಡು ಅವಾಗ ತಾನೇ ಅರಳುವುದಕ್ಕೆ ಶುರುವಾಗಿದ್ದಾಗ ಬಂದು ಅಯ್ಯೋ ಪಾಪ ಅಯ್ಯೋ ಪಾಪ ಅಂತ ಕುಕ್ಕುವುದಕ್ಕೆ ಬಂದರೆ, ಸಹಾಯ ಮಾಡುತ್ತಿದ್ದೀರ ಅಂತ ಅನಿಸುವುದಿಲ್ಲ. ಇನ್ನೂ ಮುದುಡಿಸುವುದುಕ್ಕೆ ಬಂದಿದ್ದೀರಾ ಅಂತ ಅನಿಸುತ್ತೆ.” ಎಂದು ರೆಡಿಯೋ ಸಿಟಿ ಸಂದರ್ಶನದಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.