Prerana Scheme: ರಾಜ್ಯದ ಮಹಿಳೆಯರಿಗೆ ಇನ್ನೊಂದು ಗುಡ್ ನ್ಯೂಸ್, ಜಾರಿಗೆ ಬಂತು ಪ್ರೇರಣಾ ಯೋಜನೆ.

ರಾಜ್ಯದ ಮಹಿಳೆಯರಿಗಾಗಿ ಪ್ರೇರಣಾ ಯೋಜನೆಯನ್ನ ಜಾರಿಗೆ ತಂದ ಸರ್ಕಾರ.

Micro Credit Prerana Scheme: ರಾಜ್ಯದಲ್ಲಿ ಮಹಿಳೆಯರಿಗೆ ಒಂದು ಯೋಜನೆ ಜಾರಿಗೆ ಬಂದಿದೆ. ಈ ಯೋಜನೆಯ ಹೆಸರು ಪ್ರೇರಣಾ (ಮೈಕ್ರೋಕ್ರೆಡಿಟ್‌) ಯೋಜನೆ. ಈ ಯೋಜನೆ ರಾಜ್ಯದ ಎಲ್ಲಾ ಮಹಿಳೆಯರಿಗೆ ಸಂಬಂಧಿಸುವುದಿಲ್ಲ. ಇದು ಕೇವಲ ಪರಿಶಿಷ್ಟ ಜಾತಿ/ಪಂಗಡದ ಮಹಿಳೆಯರಿಗೆ ಮೀಸಲಾದ ಯೋಜನೆ ಆಗಿದೆ.

ಈ ಯೋಜನೆಯ ಮುಖ್ಯ ಉದ್ದೇಶವೇ ಮಹಿಳೆಯರನ್ನು ಆರ್ಥಿಕವಾಗಿ ಬಲಗೊಳಿಸಿ ಸ್ವಾವಲಂಭಿ ಮಾಡುವುದಾಗಿದೆ. ಪರಿಶಿಷ್ಟ ಜಾತಿ/ಪಂಗಡದ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಕಿರು ಆರ್ಥಿಕ ಚಟುವಟಿಕೆಗಳಿಗಾಗಿ ಸಾಲ ಮತ್ತು ಸಹಾಯಧನ ಸೌಲಭ್ಯ ನೀಡಲು ಪ್ರೇರಣಾ (ಮೈಕ್ರೋಕ್ರೆಡಿಟ್‌) ಯೋಜನೆಯಡಿ ಸಮಾಜ ಕಲ್ಯಾಣ ಇಲಾಖೆಯ ವಿವಿಧ ನಿಗಮಗಳಿಂದ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ.

Congress Government Prerana Scheme
Image Credit: Siasat

ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ

ಸ್ವಸಹಾಯ ಸಂಘದ ಸದಸ್ಯರುಗಳ ಆರ್ಥಿಕ ಸ್ವಾವಲಂಬನೆ ಮತ್ತು ಸಬಲೀಕರಣ ಉದ್ದೇಶಕ್ಕಾಗಿ ನಿಗಮವು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯರಿಗೆ ನೋಂದಾಯಿತ ಪ್ರೇರಣಾ ಯೋಜನೆಯನ್ನು ಅನುಷ್ಟಾನಗೊಳಿಸುತ್ತಿದೆ. ಪರಿಶಿಷ್ಟ ಜಾತಿ/ಪಂಗಡದ ಮಹಿಳಾ ಸ್ವ-ಸಹಾಯ ಸಂಘದ ಕನಿಷ್ಟ 10 ಮಹಿಳಾ ಸದಸ್ಯರಿರುವ ಸ್ವ ಸಹಾಯ ಗುಂಪಿನ ಪ್ರತಿ ಸದಸ್ಯರಿಗೆ 25,000 ರೂ. ರಂತೆ ಒಟ್ಟು ರೂ.2.50 ಲಕ್ಷ ಹಣವನ್ನು ನಿಗಮದಿಂದ ಮಂಜೂರು ಮಾಡಲಾಗುವುದು.

ಮೈಕ್ರೋ ಕ್ರೆಡಿಟ್ ಯೋಜನೆಯಡಿ ಘಟಕ ವೆಚ್ಚದ ಪೈಕಿ ಪ್ರತಿ ಫಲಾನುಭವಿಗೆ ರೂ. 15 ಸಾವಿರ ಸಹಾಯಧನ ಮತ್ತು ರೂ. 10 ಸಾವಿರ ಸಾಲದ ಮೊತ್ತವಾಗಿರುತ್ತದೆ. ಸಾಲದ ಮೊತ್ತವನ್ನು ಶೇ.4 ರ ಬಡ್ಡಿ ದರದಲ್ಲಿ 30 ಸಮಾನ್ಯ ಕಂತುಗಳಲ್ಲಿ ನಿಗಮಕ್ಕೆ ಮರು ಪಾವತಿಸಬೇಕಾಗುತ್ತದೆ. ಪ್ರೇರಣಾ ಯೋಜನೆಗೆ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 29-11-2023 ಆಗಿರುತ್ತದೆ.

ಮಹಿಳೆಯರಿಗೆ ಪ್ರೇರಣಾ ಯೋಜನೆಯ ಮೂಲಕ ಸಾಲ ಸೌಲಭ್ಯ ನೀಡಲಾಗುತ್ತದೆ

ಗರಿಷ್ಟ 10 ಪರಿಶಿಷ್ಟ ಪಂಗಡದ ಮಹಿಳಾ ಸದಸ್ಯರನ್ನು ಹೊಂದಿರುವ ನೋಂದಾಯಿತ ಸ್ವಸಹಾಯ ಸಂಘಕ್ಕೆ ಪ್ರತಿ ಸದಸ್ಯರಿಗೆ ರೂ.15,000/- ಸಹಾಯಧನ ಮತ್ತು ರೂ.10,000/- ಸಾಲ, ಒಟ್ಟು ರೂ.25,000/- ಗಳಂತೆ ಒಂದು ಸಂಘಕ್ಕೆ ಗರಿಷ್ಟ ರೂ.2.50ಲಕ್ಷ ಅನುದಾನವನ್ನು ಒದಗಿಸಲಾಗುವುದು. ಸಾಲವನ್ನು ನಿಗಮದಿಂದಲೇ ನೀಡಲಾಗುತ್ತಿದ್ದು, ಇದಕ್ಕೆ ವಾರ್ಷಿಕ ಶೇ.4% ದರದಲ್ಲಿ ಬಡ್ಡಿ ವಿಧಿಸಲಾಗುತ್ತಿದ್ದು, 36 ಮಾಸಿಕ ಸಮ ಕಂತುಗಳಲ್ಲಿ ಸಾಲವನ್ನು ನಿಗಮಕ್ಕೆ ಮರುಪಾವತಿ ಮಾಡಬೇಕಾಗಿರುತ್ತದೆ.

Micro Credit Prerana Scheme
Image Credit: Kannada News Today

ಈ ಯೋಜನೆಗೆ ಅರ್ಜಿ ಹಾಕಲು ಬೇಕಾಗುವ ದಾಖಲೆ ಹಾಗು ಅರ್ಜಿ ಹಾಕಲು ಅರ್ಹತೆ ಇರುವ ನಿಗಮದ ಮಾಹಿತಿ

ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆಯ ಫಲಾನುಭವಿಗಳಾಗಲು ಅರ್ಜಿದಾರಳ ಭಾವಚಿತ್ರ, ಜಾತಿ ಪ್ರಮಾಣಪತ್ರ (Caste Certificate), ಆದಾಯ ಪ್ರಮಾಣಪತ್ರ (Income Certificate), ಆಧಾರ್ ಕಾರ್ಡ್ ಪ್ರತಿ (ನಿವಾಸದ ಪುರಾವೆ), ಬ್ಯಾಂಕ್ ಪಾಸ್ ಬುಕ್‌, ಸ್ವ-ಸಹಾಯ ಸಂಘ ನೋಂದಣಿ ಪ್ರಮಾಣ ಪತ್ರ ಕಡ್ಡಾಯ ಆಗಿರುತ್ತದೆ ಹಾಗು ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆಗೆ ಈ ಕೆಳಗಿನ ನಿಗಮಗಳ ವ್ಯಾಪ್ತಿಯಲ್ಲಿ ಬರುವ ಸಮುದಾಯ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ,ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ,ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮಗಳಿಗೆ ಅವಕಾಶಗಳಿವೆ.

Leave A Reply

Your email address will not be published.