Pradeep Eshwar: ಬಿಗ್ ಬಾಸ್ ಮನೆಗೆ ಹೋಗಲು ಪ್ರದೀಪ್ ಈಶ್ವರ್ ಪಡೆದ ಸಂಭಾವನೆ ಎಷ್ಟು…? ಮನೆಯೊಳಗೆ ಇದ್ದಿದ್ದೆಷ್ಟು ಗಂಟೆ?

ಶಾಸಕ ಪ್ರದೀಪ್ ಈಶ್ವರ್ ಬಿಗ್ ಬಾಸ್ ಗೆ ಹೋಗಲು ಕಾರಣವೇನು? ಶಾಸಕರಿಗೆ ಬಿಗ್ ಬಾಸ್ ಎಷ್ಟು ಸಂಭಾವನೆ ನೀಡಿದೆ,

MLA Pradeep Eshwar Remuneration In Bigg Boss: ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಬಿಗ್ ಬಾಸ್‌ (Bigg Boss) ಮನೆಗೆ ಎಂಟ್ರಿ ಕೊಟ್ಟ ಮೊದಲ ಎಂಎಲ್‌ಎ. ಈ ಹಿಂದೆ ರಾಜಕೀಯ ಮುಖಂಡರು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಿರಲಿಲ್ಲ. ಈ ಕಾರಣಕ್ಕೆ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ಅಚ್ಚರಿ ಎಂಬಂತೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಗೆದ್ದು ಬಂದಿದ್ದರು.

ಡಾ. ಕೆ ಸುಧಾಕರ್ ಅನ್ನು ಚುನಾವಣೆಯಲ್ಲಿ ಮಣಿಸಿ ಬಂದಿದ್ದ ಪ್ರದೀಶ್ ಈಶ್ವರ್ ಅನ್ನು ಕನ್ನಡದ ಜನತೆ ಬೆರಗು ಕಣ್ಣುಗಳಿಂದ ಎದುರು ನೋಡುತ್ತಿತ್ತು. ಬಿಗ್ ಬಾಸ್ ಗೆ ಇವರು ಎಂಟ್ರಿ ಕೊಟ್ಟಿದ್ದರಿಂದ ವಿರೋಧ ಪಕ್ಷಗಳು ಕೂಡ ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶವನ್ನು ಹೊರ ಹಾಕುತ್ತಿವೆ. ಈ ಮಧ್ಯೆ ಪ್ರದೀಪ್ ಈಶ್ವರ್ ಪಡೆದ ಸಂಭಾವನೆ ಎಷ್ಟು? ಅಂತಾನೂ ಚರ್ಚೆಯಾಗುತ್ತಿದೆ.

MLA Pradeep Eshwar Latest News
Image Credit: News9live

ವಿವಾದಗಳ ಸುಳಿಯಲ್ಲಿ ಶಾಸಕ ಪ್ರದೀಪ್ ಈಶ್ವರ

ಶಾಸಕ ಪ್ರದೀಪ್ ಈಶ್ವರ್ ಇವರು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಆಗಾಗ ಸುತ್ತಾಡಿ ಜನರ ಸಂಕಷ್ಟಗಳನ್ನು ಆಲಿಸುವ ಹೊಸ ಎಂಎಲ್‌ಎ ಕಾರ್ಯ ವೈಖರಿಯನ್ನು ಜನರು ಸೂಕ್ಷ್ಮ ಕಣ್ಣುಗಳಿಂದ ನೋಡುತ್ತಿದ್ದಾರೆ. ಆಗಾಗ ಟ್ರೋಲ್ ಹಾಗೂ ವಿವಾದಗಳಲ್ಲಿ ಸಿಕ್ಕಿಕೊಳ್ಳುವ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಇದು ರಾಜಕೀಯ ವಲಯದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. MLA ಆಗಿದ್ದರೂ ತಮ್ಮ ಸ್ಪೂರ್ತಿದಾಯಕ ಭಾಷಣದಿಂದ ಪ್ರದೀಪ್ ಈಶ್ವರ್ ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆಯಲ್ಲಿದ್ದಾರೆ.

ಶಾಸಕ ಪ್ರದೀಪ್ ಈಶ್ವರ ಬಿಗ್ ಬಾಸ್ ಮನೆಗೆ ಹೋಗಲು ಕಾರಣ

ಪ್ರದೀಪ್ ಈಶ್ವರ್ ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಫೇಮಸ್ ಆಗಿದ್ದಾರೆ. ಚಿಕ್ಕಬಳ್ಳಾಪುರ ಮಂದಿಗೆ ತಮ್ಮ MLA ಪರಿಚಯವಿದೆ. ಆದರೆ, ಇಡೀ ಕರ್ನಾಟಕದ ಬೇರೆ ಬೇರೆ ಕಡೆ ಇರುವ ಸಾಮಾನ್ಯ ಜನರಿಗೆ ಇವರ ಬಗ್ಗೆ ಮಾಹಿತಿಯಿಲ್ಲ. ಈಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರಿಂದ ಇಡೀ ಕರ್ನಾಟಕದ ಮನೆ ಮನೆಗೆ ತಲುಪಿದಂತಾಗಿದೆ.

ಈ ಮೂಲಕ ರಾಜಕೀಯವಾಗಿ ಬೆಳೆಯಲು ಅನುಕೂಲವಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಆಗುತ್ತಿದೆ. ಆದ್ರೆ ನಿಜಾಂಶ ಎನ್ನೆಂದರೆ ಬಿಗ್‌ ಬಾಸ್ ಟೀಮ್ ಒಳಗಿರುವ ಸ್ಪರ್ಧಿಗಳಿಗೆ ತಮ್ಮ ಸ್ಪೂರ್ತಿಯ ಮಾತುಗಳನ್ನು ಹೇಳುವಂತೆ ಕೇಳಿಕೊಂಡಿದ್ದರು. ಅದಕ್ಕೆ ಪ್ರದೀಶ್ ಈಶ್ವರ್ ಒಪ್ಪಿ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದರು. ಸುಮಾರು ಮೂರು ಗಂಟೆಗಳ ಕಾಲ ಪ್ರದೀಶ್ ಈಶ್ವರ್ ಮನೆಯೊಳಗಿದ್ದರು ಎಂದು ಮೂಲಗಳು ಹೇಳಿವೆ.

MLA Pradeep Eshwar Latest Update
Image Credit: Filmibeat

ಬಿಗ್ ಮನೆಯಲ್ಲಿ ಪ್ರದೀಪ್ ಈಶ್ವರ್ ಪಡೆದ ಸಂಭಾವನೆ ಮಾಹಿತಿ

ಬಿಗ್ ಬಾಸ್ ಮನೆಗೆ ಹೋದ ಪ್ರತಿಯೊಬ್ಬ ಸ್ಪರ್ಧಿಗೂ ಇಂತಿಷ್ಟು ಸಂಭಾವನೆ ಅಂತ ಕೊಟ್ಟೇ ಕೊಡುತ್ತೆ. ಹಾಗೇ ಪ್ರದೀಶ್ ಈಶ್ವರ್‌ಗೆ ಎಷ್ಟು ಸಂಭಾವನೆ ಕೊಟ್ಟಿರಬಹುದು ಅನ್ನೋ ಚರ್ಚೆ ಸಹಜ. ಬಿಗ್ ಬಾಸ್ ಮನೆಯೊಳಗೆ ಪ್ರದೀಪ್ ಈಶ್ವರ್ ಎಂಟ್ರಿ ಕೊಟ್ಟಿದ್ದೂ ಆಗಿದೆ. ಹೊರಗೆ ಬಂದಿದ್ದೂ ಆಗಿದೆ. ಆದರೆ, ಬಲ್ಲ ಮೂಲಗಳ ಪ್ರಕಾರ ಪ್ರದೀಶ್ ಈಶ್ವರ್‌ಗೆ ಬಿಗ್ ಬಾಸ್ ಒಂದು ರೂಪಾಯಿ ಕೂಡ ಸಂಭಾವನೆಯನ್ನು ನೀಡಿಲ್ಲ ಎಂದು ಮಾಹಿತಿ ಹೊರಹಾಕಿದೆ.

Leave A Reply

Your email address will not be published.