Mobile Charging: ಮೊಬೈಲ್ ಬಳಸುವ ಮುನ್ನ ಎಚ್ಚರ, ಇದಕ್ಕಿಂತ ಹೆಚ್ಚು ಚಾರ್ಜ್ ಮಾಡಿದರೆ ಬೇಗ ಸಾಯಲಿದೆ ಮೊಬೈಲ್ ಬ್ಯಾಟರಿ

ಮೊಬೈಲ್ ಬಳಕೆದಾರರೆ ನಿಮ್ಮ ಮೊಬೈಲ್ ಚಾರ್ಜ್ ಮಾಡುವಾಗ ಈ ವಿಷಯವನ್ನು ಗಮನದಲ್ಲಿಇಟ್ಟುಕೊಳ್ಳಿ.

Mobile Charging Details: ಇಂದಿನ ದಿನಗಳಲ್ಲಿ ಬಹುತೇಕ ಜನರು ದಿನ ಬೆಳಗಾದರೆ ಕೈಯಲ್ಲಿ ಮೊಬೈಲ್ ಹಿಡಿದರೆ ರಾತ್ರಿ ಮಲಗುವ ತನಕ ಮೊಬೈಲ್ ನೋಡುತ್ತಾ ಇರುತ್ತಾರೆ. ಮೊಬೈಲ್ ನಲ್ಲಿ ಸಿನಿಮಾ ನೋಡುವುದು, ಗೇಮ್ ಆಡುವುದು ಹಾಗು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಗಳನ್ನೂ ಬಳಸುವುದು ಮಾಡುತ್ತಿರುತ್ತಾರೆ.

ಸ್ಮಾರ್ಟ್ ಫೋನುಗಳು ಈಗ ಮನರಂಜನೆಯ ದೊಡ್ಡ ಸಾಧನವಾಗಿ ಮಾರ್ಪಟ್ಟಿವೆ. ದಿನವಿಡೀ ಮೊಬೈಲ್ ಬಳಸುವುದರಿಂದ ಅಧಿಕ ಚಾರ್ಜ್ ಅನ್ನು ಮೊಬೈಲ್ ಪಡೆಯುತ್ತದೆ. ಹಾಗಾಗಿ ಫೋನ್ ಅನ್ನು ಪದೇ ಪದೇ ಚಾರ್ಜ್ ಮಾಡಬೇಕಾಗುತ್ತದೆ.

Mobile Charging Details
Image Credit: Digitaltrends

ಮೊಬೈಲ್ ಅನ್ನು ಹೆಚ್ಚಿಗೆ ಸಮಯ ಚಾರ್ಜ್ ಮಾಡುವುದರಿಂದ ಆಗುವ ಅನಾನುಕೂಲಗಳು

ಮೊಬೈಲ್ ಬಳಕೆ ಹೆಚ್ಚಾದಂತೆ ಮೊಬೈಲ್ ಅನ್ನು ಚಾರ್ಜ್ ಮಾಡುವುದು ಕೂಡ ಅಷ್ಟೇ ಹೆಚ್ಚಾಗುತ್ತದೆ. ಕೆಲವರಿಗಂತೂ ಚಾರ್ಜ್ ಮಾಡೋಕು ಸಮಯ ಸಿಗುವುದಿಲ್ಲ ಹಾಗಾಗಿ ರಾತ್ರಿ ಮಲಗುವಾಗಲೂ ಚಾರ್ಜ್ ಹಾಕಿಯೇ ಮಲಗುತ್ತಾರೆ. ನೀವು ಸಹ ಇದನ್ನು ಮಾಡಿದರೆ, ಮೊದಲು ಅದರ ಅನಾನುಕೂಲಗಳನ್ನು ತಿಳಿದುಕೊಳ್ಳಿ. ಮೊಬೈಲ್ ಬ್ಯಾಟರಿಯನ್ನು ಸಂಪೂರ್ಣವಾಗಿ ಖಾಲಿಯಾದಗ ಅದನ್ನು 100% ವರೆಗೆ ಚಾರ್ಜ್ ಮಾಡಬೇಕು ಎಂದು ಅನೇಕ ಜನರು ನಂಬುತ್ತಾರೆ.

ಅದೇ ಸಮಯದಲ್ಲಿ, ನೀವು ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿದ್ದರೆ, ನೀವು 20 ಪ್ರತಿಶತ ಬ್ಯಾಟರಿಯನ್ನು ಹೊಂದಿರುವಾಗ ಮಾತ್ರ ಫೋನ್ ಅನ್ನು ಚಾರ್ಜ್ ಮಾಡಬೇಕು ಎಂದು ತಜ್ಞರು ನಂಬುತ್ತಾರೆ. 20 ರಿಂದ 80 ಪ್ರತಿಶತದಷ್ಟು ಬ್ಯಾಟರಿ ನಿಮ್ಮ ಫೋನ್ ಗೆ ಒಳ್ಳೆಯದು ಎನ್ನಲಾಗಿದೆ.

Mobile Charging Rules
Image Credit: Stylesatlife

ಹೆಚ್ಚುವರಿ ಚಾರ್ಜ್ ನಿಂದ ಮೊಬೈಲ್ ಬ್ಯಾಟರಿ ಡೇಡ್ ಆಗುತ್ತದೆ

ಪದೇ ಪದೇ ಚಾರ್ಜ್ ಹಾಕುವುದು ಅಥವಾ 100 % ಚಾರ್ಜ್ ಹಾಕುವುದರಿಂದ ಮೊಬೈಲ್ ಬ್ಯಾಟರಿಗೆ ಹಾನಿಯಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ಕಾರಣವೆಂದರೆ ಮೊಬೈಲ್ ಬ್ಯಾಟರಿಯನ್ನು ಲಿಥಿಯಂ ಐಯಾನ್ ನಿಂದ ತಯಾರಿಸಲಾಗಿದೆ. ಲಿಥಿಯಂ ಬ್ಯಾಟರಿಗಳು 30 ರಿಂದ 50% ಚಾರ್ಜಿಂಗ್ ಮಾಡಿದಾಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ನೀವು ಯಾವಾಗಲೂ ಅದನ್ನು 100% ಚಾರ್ಜ್ ಮಾಡಿದರೆ, ಅದು ನಿಮ್ಮ ಫೋನ್ನ ಬ್ಯಾಟರಿಯನ್ನು ಹಾನಿಗೊಳಿಸುತ್ತದೆ.

ಮೊಬೈಲ್ ಅನ್ನು ಚಾರ್ಜ್ ಗೆ ಹಾಕಿ ಮಲಗಬೇಡಿ

ಹಲವರಲ್ಲಿ ರಾತ್ರಿ ಮಲಗುವಾಗ ಮೊಬೈಲ್ ಚಾರ್ಜ್ ಹಾಕಿ ಮಲಗುವ ಕೆಟ್ಟ ಅಭ್ಯಾಸ ಇರುತ್ತದೆ. ರಾತ್ರಿಯಲ್ಲಿ ಚಾರ್ಜ್ ಮಾಡುವ ಮೂಲಕ ಫೋನ್ ಸಂಪೂರ್ಣವಾಗಿ 100% ಚಾರ್ಜ್ ಆಗುತ್ತದೆ. ಇದು ಫೋನ್ನ ಬ್ಯಾಟರಿ ಅಸಮರ್ಪಕವಾಗಿ ಕಾರ್ಯನಿರ್ವಹಿಸುವ ಅಪಾಯವನ್ನ ಉಂಟುಮಾಡುತ್ತದೆ. ಇದು ಮಾತ್ರವಲ್ಲ, ಕಳಪೆ ಗುಣಮಟ್ಟದ ಬ್ಯಾಟರಿಗಳು ಕೆಲವೊಮ್ಮೆ ರಾತ್ರಿಯಿಡೀ ಚಾರ್ಜ್ ಆಗುವುದರಿಂದ ಸ್ಫೋಟಗೊಳ್ಳಬಹುದು. ಹಾಗಾಗಿ ಎಷ್ಟೇ ಕೆಲಸದ ಒತ್ತಡ ಇದ್ದರು ರಾತ್ರಿ ಮಲಗುವಾಗ ಮೊಬೈಲ್ ಚಾರ್ಜ್ ಹಾಕುವುದನ್ನು ಮಾಡಬೇಡಿ.

Leave A Reply

Your email address will not be published.