Mobile Tricks: ಮೊಬೈಲ್ ನೀರಿನಲ್ಲಿ ಬಿದ್ದರೆ ತಕ್ಷಣ ಈ ಕೆಲಸ ಮಾಡಿ, ನಿಮ್ಮ ಮೊಬೈಲ್ ಸುರಕ್ಷಿತವಾಗಿರುತ್ತದೆ.
ಮೊಬೈಲ್ ನೀರಿನಲ್ಲಿ ಬಿದ್ದಾಗ ಈ ಕೆಲಸ ಮಾಡಿದರೆ ಮೊಬೈಲ್ ಹಾಳಾಗದಂತೆ ಉಳಿಸಬಹುದು.
Smart Phone In Water: ಇಂದಿನ ಕಾಲದಲ್ಲಿ ಫೋನ್ ಇಲ್ಲದೇ ಯಾವ ವ್ಯಕ್ತಿಯ ದಿನವೂ ಆರಂಭ ಆಗುವುದಿಲ್ಲ. ನಾವು ಬೆಳ್ಳಿಗ್ಗೆ ಎದ್ದು ಕಣ್ಣು ತೆರೆದ ಕೊಡಲೇ ಮೊಬೈಲ್ ಕೈಯಲ್ಲಿ ಇರಬೇಕು. ಇನ್ನು ರಾತ್ರಿ ಮಲಗುವ ತನಕ ಅದು ನಮ್ಮ ಜೊತೆಯಲ್ಲೇ ಇರುತ್ತದೆ. ಊಟ ಮಾಡುವಾಗ, ತಿಂಡಿ ತಿನ್ನುವಾಗ, ವಾಕಿಂಗ್ ಹೋಗುವಾಗ ನಮ್ಮ ದೈನಂದಿನ ಎಲ್ಲ ಕೆಲಸದ ಸಂದರ್ಭದಲ್ಲೂ ಫೋನ್ ಕೈ ಯಲ್ಲಿ ಇರುತ್ತದೆ.
ಅಷ್ಟೇ ಅಲ್ಲದೆ ಫೋನ್ ನಲ್ಲಿಯೇ ಈಗ ಎಲ್ಲ ಬ್ಯಾಂಕಿಂಗ್ ಕೆಲಸಗಳು,ವಿದ್ಯುತ್ ಪಾವತಿ, ಫಿಲಂ ನೋಡಲು, ಆಫೀಸ್ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ ಹಾಗಾಗಿ ಕೆಲವು ನಿಮಿಷಗಳಲ್ಲಿ ನಮ್ಮ ಮೊಬೈಲ್ ನಮ್ಮ ಕೆಲಸಗಳನ್ನು ಮಾಡುವುದರಿಂದ ಇನ್ನಷ್ಟು ಮೊಬೈಲ್ ಬಳಕೆ ಹೆಚ್ಚಾಗುತ್ತಲೇ ಇದೆ.

ಆಧುನಿಕ ಶೈಲಿಯ ಮೊಬೈಲ್ ಮಾರುಕಟ್ಟೆಯಲ್ಲಿ ಲಭ್ಯವಿದೆ
ಆಧುನಿಕತೆಯತ್ತ ದೇಶ ಸಾಗುತ್ತಿರುವುದರಿಂದ ಮೊಬೈಲ್ ಕೂಡ ಅಷ್ಟೇ ಆಧುನಿಕವಾಗಿದೆ. ಇತೀಚಿಗೆ ವಾಟರ್ ಪ್ರೂಫ್ ಮತ್ತು ವಾಟರ್ ರೆಸಿಸ್ಟೆಂಟ್ ನಂತಹ ವೈಶಿಷ್ಟ್ಯಗಳನ್ನು ಪಡೆಯಬಹುದು. ಸ್ಮಾರ್ಟ್ಫೋನ್ ಆಕಸ್ಮಿಕವಾಗಿ ನೀರಿಗೆ ಬಿದ್ದರೆ ಅಥವಾ ಮಳೆಯಲ್ಲಿ ಒದ್ದೆಯಾದರೆ, ಅಸಮಾಧಾನಗೊಳ್ಳುವುದು ಸಹಜ. ಆದ್ದರಿಂದ ಇಂದು ನಾವು ನಿಮಗಾಗಿ ಕೆಲವು ಸಲಹೆಗಳು ಮತ್ತು ತಂತ್ರಗಳನ್ನು ತಂದಿದ್ದೇವೆ, ಅದನ್ನು ಬಳಸಿಕೊಂಡು ನಿಮ್ಮ ಫೋನ್ ಅನ್ನು ನೀರಿನ ಹಾನಿಯಿಂದ ಉಳಿಸಬಹುದು.
ಮೊಬೈಲ್ ಒದ್ದೆಯಾದಾಗ ಆಫ್ ಮಾಡುವುದು ಬಹಳ ಮುಖ್ಯ
ನಿಮ್ಮ ಮೊಬೈಲ್ ನೀರಿನಲ್ಲಿ ಬಿದ್ದು ಒದ್ದೆಯಾದಾಗ ಮೊದಲನೇದಾಗಿ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ ಯಾಕೆಂದರೆ ಮೊಬೈಲ್ ಆನ್ ಇದ್ದರೆ ನೀರು ಮೊಬೈಲ್ ಒಳಗೆ ಹೋಗಿ ಬ್ಯಾಟರಿ ಅಥವಾ ಇನ್ನಿತರ ಸಿಸ್ಟಮ್ ಅನ್ನು ಹಾಳು ಮಾಡುತ್ತದೆ. ಅತ್ಯಂತ ಮುಖ್ಯವಾಗಿ ನೀರನ್ನು ತೆಗೆದುಹಾಕಲು ಸ್ಮಾರ್ಟ್ ಫೋನ್ ಅನ್ನು ಸರಿಸಬೇಡಿ. ಹೀಗೆ ಮಾಡುವುದರಿಂದ, ನೀರು ಫೋನ್ ನ ಆಂತರಿಕ ಭಾಗಗಳನ್ನು ಇನ್ನಷ್ಟು ಹಾನಿಗೊಳಿಸುತ್ತದೆ. ಅಂತೆಯೇ, ಹೇರ್ ಡ್ರೈಯರ್ ಅನ್ನು ಬಳಸಬೇಡಿ.

ಫೋನ್ ಅನ್ನು ಅಕ್ಕಿ ಚೀಲದಲ್ಲಿ ಇಟ್ಟರೆ ತೇವಾಂಶವು ಕಡಿಮೆ ಆಗುತ್ತದೆ
ಫೋನ್ ನೀರಿನಲ್ಲಿ ಬಿದ್ದು ಹಾನಿಯ ಸ್ಥಿತಿಯಲ್ಲಿದ್ದಾಗ ಚಾರ್ಜ್ ಮಾಡುವುದನ್ನು ತಪ್ಪಿಸಿ. ನೀವು ಫೋನ್ ನಿಂದ ಸಿಮ್ ಕಾರ್ಡ್ ಟ್ರೇಯನ್ನು ಸಹ ತೆಗೆದುಹಾಕಬಹುದು. ಈ ರೀತಿಯ ವಿಧಾನದಿಂದ ನಿಮ್ಮ ಫೋನ್ ಅನ್ನು ನೀರಿನಿಂದ ಕಾಪಾಡಬಹುದು. ಅಷ್ಟೇ ಅಲ್ಲದೆ ಸಾಧ್ಯವಾದಷ್ಟು ಸಮಯದವರೆಗೆ ಸ್ವಿಚ್ ಆಫ್ ಮಾಡಿ ಮತ್ತು ಫೋನ್ ಅನ್ನು ಕನಿಷ್ಠ ಆರು ಗಂಟೆಗಳ ಕಾಲ ಅಕ್ಕಿಯ ಚೀಲದೊಳಗೆ ಬಿಡಿ. ಹೀಗೆ ಮಾಡುವುದರಿಂದ, ನಿಮ್ಮ ಫೋನ್ನ ಎಲ್ಲಾ ತೇವಾಂಶವು ಕಳೆದುಹೋಗುತ್ತದೆ. ಅದರ ನಂತರ ನೀವು ಫೋನ್ ಅನ್ನು ಮತ್ತೆ ಬಳಸಬಹುದು.