Motorola: ಅಗ್ಗದ ಬೆಲೆ ಇನ್ನೊಂದು ಮೋಟೋ ಮೊಬೈಲ್ ಲಾಂಚ್, 5000 mAh ಬ್ಯಾಟರಿ.

5000 mAh ಬ್ಯಾಟರಿ ಇರುವ ಇನ್ನೊಂದು ಮೊಬೈಲ್ ಲಾಂಚ್ ಮಾಡಿದ ಮೋಟೋ.

Motorola Edge40 Smartphone: ವಿಶ್ವದಲ್ಲಿ ಮೋಟೋರೋಲಾ ಕಂಪನಿಯ (Motorola) ಸ್ಮಾರ್ಟ್ ಫೋನ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ಕಂಪನಿ ಬಜೆಟ್ ಬೆಲೆಯಿಂದ ಹಿಡಿದು ಹೈ-ರೇಂಜ್ ಮಾದರಿಯ ಫೋನ್ ಗಳನ್ನು ಬಿಡುಗಡೆ ಮಾಡುತ್ತಿರುತ್ತವೆ. 

Moto Edge 40 Neo Price and Release Date
Image Credit: Kalingatv

ಮೋಟೋ ಎಡ್ಜ್ 40 ಸ್ಮಾರ್ಟ್ ಫೋನ್ (Motorola Edge40 Smartphone) 

ಮೋಟೋ ಕಂಪನಿಯ ಎಡ್ಜ್ ಸರಣಿಯ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿತ್ತು. ಕಳೆದ ಮೇ ತಿಂಗಳಲ್ಲಿ ಮೋಟೋ ಎಡ್ಜ್ 40 ಸ್ಮಾರ್ಟ್ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಗಿತ್ತು. ಎಡ್ಜ್ 40 ಸ್ಮಾರ್ಟ್ ಫೋನ್ ಬಿಡುಗಡೆಯಾದ ಬೆನ್ನಲ್ಲೇ ಮತ್ತೊಂದು ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲು ತಯಾರಿ ನೆಡೆಸುತ್ತಿದೆ. ಈಗ ನಾವು  ಮೋಟೋ ಕಂಪನಿ ಬಿಡುಗಡೆ ಮಾಡಲು ಹೊರಟ ಈ ಸ್ಮಾರ್ಟ್ ಫೋನ್ ಯಾವುದು ಎನ್ನುವ ಬಗ್ಗೆ ತಿಳಿಯೋಣ.

ಮೋಟೋ ಎಡ್ಜ್ 40 ನಿಯೋ ಸ್ಮಾರ್ಟ್ ಫೋನ್  (Motorola Edge 40 neo Smartphone)

ಇದೀಗ ಮೋಟೋರೋಲಾ ಕಂಪನಿ ಮೋಟೋ ಎಡ್ಜ್ 40 ನಿಯೋ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ  ಮಾಡಲು ತಯಾರಿ ನೆಡೆಸುತ್ತಿದೆ. ಸದ್ಯದಲ್ಲೇ ಭಾರತದಲ್ಲಿ ಕೂಡ ಈ ಸ್ಮಾರ್ಟ್ ಫೋನ್ ಅನಾವರಣ ಆಗಲಿದೆ. ಈ ಫೋನ್ ನ ವಶೇಷತೆ ಎಂದರೆ ಇದು ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಲಿದೆ. ಹಾಗಾದರೆ ಇದರ ಬೆಲೆ ಎಷ್ಟು ಎನ್ನುವ ಬಗ್ಗೆ ಈಗ ತಿಳಿಯೋಣ.

Moto Edge 40 Neo Smartphone Feature
Image Credit: Root-Nation

ಮೋಟೋ ಎಡ್ಜ್ 40 ನಿಯೋ ಬೆಲೆ ಹಾಗೂ ಬಿಡುಗಡೆ ದಿನಾಂಕ

ಮೋಟೋ ಎಡ್ಜ್ 40 ನಿಯೋ ಸ್ಮಾರ್ಟ್ ಫೋನ್ ಬಗ್ಗೆ ವಿದೇಶದಲ್ಲಿ ಮಾಹಿತಿ ಸೋರಿಕೆಯಾಗಿದೆ. ಮೂಲಗಳ ಪ್ರಕಾರ ಮೋಟೋ ಎಡ್ಜ್ 40 ನಿಯೋ ಸ್ಮಾರ್ಟ್ ಫೋನ್ ಸೆಪ್ಟೆಂಬರ್ 15 ರಂದು ಬಿಡುಗಡೆ ಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಹಾಗೇ ಈ ಸ್ಮಾರ್ಟ್ ಫೋನ್ ಬೆಲೆ 30,000 ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ.

ಮೋಟೋ ಎಡ್ಜ್ 40 ನಿಯೋ ಸ್ಮಾರ್ಟ್ ಫೋನ್ ಫೀಚರ್ 

ಮೋಟೋ ಎಡ್ಜ್ 40 ನಿಯೋ ಸ್ಮಾರ್ಟ್ ಫೋನ್  6.55 ಇಂಚಿನ ಪೂರ್ಣ ಡಿಸ್ಪ್ಲೇ ಅನ್ನು ಪಡೆದಿದೆ. ಮೋಟೋ ಎಡ್ಜ್ 50MP ಮತ್ತು 13MP  ಸಂವೇದಕಗಳೊಂದಿಗೆ  ಡ್ಯೂಯೇಲ್ ಕ್ಯಾಮರಾ ಸೆಟಪ್ ಹಾಗೇ 32MP ಮುಂಭಾಗದ ಕ್ಯಾಮರಾ ಹೊಂದುವ ನಿರೀಕ್ಷೆ ಇದೆ. ಹಾಗೇ ಈ ಸ್ಮಾರ್ಟ್ ಫೋನ್ ನ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಹೇಳುದಾದರೆ , 5000mAh ಬ್ಯಾಟರಿ ಅನ್ನು ಹೊಂದಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಇದು ಬ್ಲಾಕ್ ಬ್ಯುಟಿ ಶೆಡ್ ಬಣ್ಣದಲ್ಲಿ ಬಿಡುಗೆಯಾಗಲಿದೆ.

Leave A Reply

Your email address will not be published.