Motorola: ಆಕರ್ಷಕ ಮಡಚುವ ಮೊಬೈಲ್ ಲಾಂಚ್ ಮಾಡಿದ ಮೋಟೋ, 64 MP ಕ್ಯಾಮೆರಾ ಮತ್ತು 4800 mAh ಬ್ಯಾಟರಿ.
ಮೊಟೊರೊಲಾ ಕಂಪನಿಯ ಹೊಸ ಲುಕ್ ನ ಮಡಚುವ ಫೋನ್ ಗಳನ್ನು ಭಾರಿ ರಿಯಾತಿಯಲ್ಲಿ ಖರೀದಿಸಿ.
Motorola Razr 40 Ultra Smart Phone: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Aamazon Great Indian Festival Sale) ಪ್ರಾರಂಭವಾಗಿ ಬಹಳ ದಿನಗಳಾಗಿವೆ. ಈ ಸೆಲ್ ನಲ್ಲಿ ಹಲವು ಕಂಪನಿಯ ಮೊಬೈಲ್ ಗಳು ಕಡಿಮೆ ಬೆಲೆಗೆ ಹಾಗು ವಿಶೇಷ ಆಫರ್ ಗಳೊಂದಿಗೆ ಗ್ರಾಹಕರನ್ನು ಆಕರ್ಷಿಸಿದೆ. ಹಾಗೆಯೆ ಆ ಪೈಕಿ ಮೊಟೊರೊಲಾ(Motorola) ರೇಜರ್ 40 ಹಾಗೂ ಮೊಟೊರೊಲಾ ರೇಜರ್ 40 ಅಲ್ಟ್ರಾ ಸಹ ಆಫರ್ ಪಡೆದಿದೆ.
ಅಮೆಜಾನ್ ಫೆಸ್ಟಿವಲ್ ಸೇಲ್ನಲ್ಲಿ(Amazon Festival Sale) ಮೊಟೊರೊಲಾ ರೇಜರ್ 40 ಹಾಗೂ ಮೊಟೊರೊಲಾ ರೇಜರ್ 40 ಅಲ್ಟ್ರಾ ಬೊಂಬಾಟ್ ಡಿಸ್ಕೌಂಟ್ ಪಡೆದುಕೊಂಡಿದೆ.ಈ ಎರಡು ಫೋನ್ಗಳು ಮಡಚುವ ಮಾದರಿಯ ರಚನೆಯನ್ನು ಒಳಗೊಂಡಿದ್ದು, ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡಿವೆ.

ಮೊಟೊರೊಲಾ ರೇಜರ್ 40 ಅಲ್ಟ್ರಾ ಉತ್ತಮ ಕ್ಯಾಮೆರಾ ಹೊಂದಿದೆ
ಈ ಫೋನ್ ನ ಪ್ರಾಥಮಿಕ ಕ್ಯಾಮೆರಾ 12 ಮೆಗಾ ಪಿಕ್ಸಲ್ ಸೆನ್ಸಾರ್ ಮತ್ತು ಸೆಕೆಂಡರಿ ಕ್ಯಾಮೆರಾ 13 ಮೆಗಾಪಿಕ್ಸಲ್ ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಹೊಂದಿದೆ. ಮುಂಭಾಗದಲ್ಲಿ 32 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇನ್ನು ಇದು 3800mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ ಅಪ್ ಅನ್ನು ಪಡೆದಿದ್ದು, 33W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಸಹ ಇದೆ.
ಮೊಟೊರೊಲಾ ರೇಜರ್ 40 ಅಲ್ಟ್ರಾ ಬೆಲೆ
ಮೊಟೊರೊಲಾ ರೇಜರ್ 40 ಅಲ್ಟ್ರಾ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಆಫರ್ ಬೆಲೆಯಲ್ಲಿ ಗ್ರಾಹಕರಿಗೆ ಸಿಗಲಿದ್ದು ಈ ಫೋನ್ ನ ಬೆಲೆಯು 72,999 ರೂ.ಗೆ ಕಂಪನಿ ನಿಗದಿ ಪಡಿಸಿದೆ.

ಮೊಟೊರೊಲಾ ರೇಜರ್ 40 ಫೀಚರ್ಸ್
ಮೊಟೊರೊಲಾ ರೇಜರ್ 40 ಫೋನ್ 6.9 ಇಂಚಿನ ಪ್ರಮುಖ ಡಿಸ್ಪ್ಲೇ ಹೊಂದಿದ್ದು, ಈ ಮೊಬೈಲ್ ಕವರ್ ಡಿಸ್ಪ್ಲೇ 1.5 ಇಂಚಿನ ರಚನೆ ಒಳಗೊಂಡಿದೆ. 8GB RAM ಮತ್ತು 256GB ಆಂತರೀಕ ಸ್ಟೋರೇಜ್ ಸಾಮರ್ಥ್ಯ ಪಡೆದುಕೊಂಡಿದೆ.
ಈ ಫೋನ್ ಎರಡು ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಇದರ ಪ್ರಾಥಮಿಕ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ಸೆಕೆಂಡರಿ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಅಲ್ಟ್ರಾ ವೈಡ್ ಲೆನ್ಸ್ ಸಾಮರ್ಥ್ಯದಲ್ಲಿದೆ. ಅಲ್ಲದೇ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಸಹ ಪಡೆದಿದ್ದು, 4200mAh ಸಾಮರ್ಥ್ಯದ ಬ್ಯಾಟರಿ ಶಕ್ತಿ ಇದೆ.
ಮೊಟೊರೊಲಾ ರೇಜರ್ 40 ಬೆಲೆ
ಮೊಟೊರೊಲಾ ರೇಜರ್ 40 ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಆಫರ್ ಬೆಲೆಯಲ್ಲಿ ಗ್ರಾಹಕರಿಗೆ ಸಿಗಲಿದ್ದು ಈ ಫೋನ್ ನ ಬೆಲೆಯು 44,999 ರೂ.ಗೆ ಕಂಪನಿ ನಿಗದಿ ಪಡಿಸಿದೆ