KYC Update: ಅಕ್ಟೋಬರ್ 31 ರೊಳಗೆ ಈ ಕೆಲಸ ಕಡ್ಡಾಯವಾಗಿ ಮಾಡಬೇಕು, ಕೇಂದ್ರ ಸರ್ಕಾರದ ಆದೇಶ.
ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡಿದವರು ಅಕ್ಟೋಬರ್ 31 ರೊಳಗೆ ಈ ಕೆಲಸ ಮಾಡುವುದು ಕಡ್ಡಾಯ.
Mutual Fund KYC Update 2023: ಜನ ಸಾಮಾನ್ಯರು ತಮ್ಮ ಆದಾಯದಲ್ಲಿ ಒಂದಿಷ್ಟ ಹಣವನ್ನು ಮುಂದಿನ ಭವಿಷ್ಯಕ್ಕಾಗಿ ಹೂಡಿಕೆ ಮಾಡುತ್ತಾರೆ. ಹೂಡಿಕೆ ಮಾಡಲು ಹಲವು ವಿಧಾನಗಳಿದ್ದು, ಬಹಳ ಸುರಕ್ಷಿತವಾದ ಮಾಧ್ಯಮವನ್ನು ಕಂಡುಕೊಳ್ಳುತ್ತಾರೆ.
ಅದರಲ್ಲಿ ಮ್ಯೂಚುವಲ್ ಫಂಡ್ (Mutual Fund) ಕೂಡ ಒಂದಾಗಿದೆ. ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿದವರಿಗೆ ಈ ಮಾಹಿತಿ ಬಹಳ ಪ್ರಮುಖವಾಗಿದ್ದು, ಪ್ರತಿಯೊಬ್ಬರು ಈ ವಿಷಯವನ್ನು ತಿಳಿಯಬೇಕಾಗಿರುವುದು ಕಡ್ಡಾಯ. ಅದೇನೆಂದರೆ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿರುವವರು ಕೆವೈಸಿಯನ್ನು ಮರುಹೊಂದಿಸಬೇಕಾಗುತ್ತದೆ.
ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ
ಹಣ ಹೂಡಿಕೆಯ ಸುರಕ್ಷತಾ ಮಾಧ್ಯಮದಲ್ಲಿ ಮ್ಯೂಚುವಲ್ ಫಂಡ್ ಕೂಡ ಒಂದು ಎಂದು ಪರಿಗಣಿಸಲಾಗಿದೆ. ಮ್ಯೂಚುವಲ್ ಫಂಡ್ ಕೆಲವು ಸಮಯದಿಂದ ಹೆಚ್ಚು ಬೇಡಿಕೆಯನ್ನು ಹೊಂದಿದೆ. ಜನರು ತಮ್ಮ ಉಳಿತಾಯದ ಮೇಲೆ ಲಾಭ ಗಳಿಸುವ ಉದ್ದೇಶಕ್ಕಾಗಿ ಹೂಡಿಕೆ ಮಾಡುತ್ತಾರೆ. ಈ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದಾಗಿದೆ ಹಾಗು ಇಲ್ಲಿ ಹೂಡಿಕೆ ಮಾಡಿದವರು ಅಕ್ಟೋಬರ್ 31 ರೊಳಗೆ ಈ ಕೆಲಸವನ್ನು ಮಾಡತಕ್ಕದ್ದು, ಇಲ್ಲ ಅಂತಾದರೆ ಬಹಳ ತೊಂದರೆ ಅನುಭವಿಸಬೇಕಾಗುತ್ತದೆ
ಮ್ಯೂಚುವಲ್ ಫಂಡ್ ಹೊಂದಿದವರು ಇ-ಕೆವೈಸಿ ಮರು ಹೊಂದಿಸುವುದು ಕಡ್ಡಾಯ
ಮ್ಯೂಚುವಲ್ ಫಂಡ್ ಗಳಿಗೆ ಇ-ಕೆವೈಸಿ ಮರು ಹೊಂದಿಸುವ ಕುರಿತು ಸೆಬಿ ಹಲವಾರು ಬಾರಿ ದಿನಾಂಕವನ್ನು ಮುಂದೂಡಿದೆ. ಆದರೆ ಈ ಬಾರಿ ಸೆಬಿ ನಿಮಗೆ ಮುಂದೆ ಸಮಯ ನೀಡುವುದಿಲ್ಲ ಎಂದು ತೋರುತ್ತದೆ. ಹೂಡಿಕೆದಾರರು ತಮ್ಮ ಕೆವೈಸಿಯನ್ನು ನಿಗದಿತ ಅವಧಿಯ ಒಳಗೆ ಮರುಪರಿಶೀಲಿಸಬೇಕಾಗುತ್ತದೆ, ಇಲ್ಲದಿದ್ದರೆ, ನಿಮ್ಮ ಖಾತೆಯನ್ನು ಅಮಾನತುಗೊಳಿಸಬಹುದು ಎನ್ನಲಾಗಿದೆ.
ಇ-ಕೆವೈಸಿ ಮಾಡಿಸುವ ವಿಧಾನ
ಮ್ಯೂಚುವಲ್ ಪಂಡ್ ನಲ್ಲಿ ಹೂಡಿಕೆ ಮಾಡಿದವರು ಮೊದಲನೇದಾಗಿ ಇ-ಕೆವೈಸಿಗಾಗಿ, ಕೆಆರ್‌ಎ ವೆಬ್ಸೈಟ್ನಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಅನ್ನು ನವೀಕರಿಸಬೇಕಾಗುತ್ತದೆ. ವೆಬ್ಸೈಟ್ನಲ್ಲಿ, ನವೀಕರಣವನ್ನು ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ನೀವು ನೋಡಬಹುದು. ಇದಕ್ಕಾಗಿ, ನೀವು ಲಾಗ್ ಇನ್ ಮಾಡಬೇಕಾಗುತ್ತದೆ. ನೀವು ಲಾಗಿನ್ ಮಾಡಲು ಪಾಸ್ ವರ್ಡ್ ಮರೆತಿದ್ದರೆ, ಅದನ್ನು ನೀಡಲಾದ ಇಮೇಲ್ ಐಡಿ ಮೂಲಕ ಬದಲಾಯಿಸಬಹುದು.
ಪ್ಯಾನ್ ಕಾರ್ಡ್ ಅನ್ನು ನವೀಕರಿಸಿದ ತಕ್ಷಣ, ನೀವು ಬ್ಯಾಂಕ್ ವಿವರಗಳು, ಮೊಬೈಲ್ ಸಂಖ್ಯೆಯನ್ನು ನವೀಕರಿಸಬೇಕು. ಎಲ್ಲಾ ಮಾಹಿತಿಯನ್ನು ನೀಡಿದ ನಂತರ, ಅದನ್ನು ಮತ್ತೊಮ್ಮೆ ಪರಿಶೀಲಿಸಿ. ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ. ಇದರೊಂದಿಗೆ, ನಿಮ್ಮ ಇ-ಕೆವೈಸಿ ಮಾಡಲಾಗುತ್ತದೆ. ಈ ರೀತಿಯ ಸುಲಭ ವಿಧಾನದಿಂದ ನಿಮ್ಮ ಮ್ಯೂಚುವಲ್ ಪಂಡ್ ಇ-ಕೆವೈಸಿ ಯನ್ನು ಮರು ಪರಿಶೀಲಿಸಿಕೊಳ್ಳಿ.