Naga Chaitanya: ನಾಗ ಚೈತನ್ಯ ಎರಡನೇ ಮದುವೆ.! ಯಾರು ಗೊತ್ತೇ ಆ ಸುಂದರ ಚೆಲುವೆ?

ಇದೀಗ ನಾಗಚೈತನ್ಯ ಎರಡನೇ ಮದುವೆ ಸುದ್ದಿ ವೈರಲ್‌ ಆಗಿದೆ.

Naga Chaitanya Second Marriage: ಟಾಲಿವುಡ್ ಸ್ಟಾರ್ ನಾಗ ಚೈತನ್ಯ (Naga Chaitany) ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ನಟ ನಾಗ ಚೈತನ್ಯ ಹಾಗು ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಬಹಳ ವರ್ಷಗಳಿಂದ ಪ್ರೀತಿ ಮಾಡಿ ವಿವಾಹವಾಗಿದ್ದರು. ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ ಈ ಜೋಡಿ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಹಾಗು ಅಭಿಮಾನಿಗಳ ಪ್ರೀತಿಯ ಜೋಡಿ ಅನಿಸಿಕೊಂಡಿದ್ದರು.

Naga Chaitanya Second Marriage
Image Credit: Flipkart

ನಾಗ ಚೈತನ್ಯ ಹಾಗು ನಟಿ ಸಮಂತಾ ರುತ್ ಪ್ರಭು ವಿಚ್ಚೇದನ

ಪ್ರೀತಿಸಿ ಮದುವೆ ಆದ ಇವರಿಬ್ಬರು ಬಹಳ ವರ್ಷ ಅನ್ಯೋನ್ಯವಾಗಿ ಜೀವನ ನೆಡೆಸಿದ್ದು, ತದನಂತರ 2021 ರ ವರೆಗೆ ಅವರೊಂದಿಗೆ ವೈವಾಹಿಕ ಜೀವನವನ್ನು ಆನಂದಿಸಿದ್ದು ಅದೇ ವರ್ಷ ಅಕ್ಟೋಬರ್‌ನಲ್ಲಿ ಅವರ ವಿಚ್ಛೇದನವನ್ನು ಘೋಷಿಸಿದರು. ವಿಚ್ಛೇದನದ ನಂತರ ಇಬ್ಬರೂ ಸ್ನೇಹಿತರಂತೆ ಬದುಕುತ್ತಿದ್ದಾರೆ. ಆದರೆ ವಿಚ್ಛೇದನದ ನಂತರ ಸ್ನೇಹಿತರಂತೆ ಬದುಕುವುದು ಕಿರಿಕಿರಿ ಉಂಟುಮಾಡುತ್ತದೆ ಎಂದು ನಾಗ ಚೈತನ್ಯ ಸಂದರ್ಶನವೊಂದರಲ್ಲಿ ಹೇಳಿದ್ದರು.

ನಟ ನಾಗಚೈತನ್ಯ ಎರಡನೇ ಮದುವೆ
ಇದೀಗ ನಾಗಚೈತನ್ಯ ಎರಡನೇ ಮದುವೆ ಸುದ್ದಿ ವೈರಲ್‌ ಆಗಿದೆ. ಸಮಂತಾ ಜೊತೆ ವಿಚೇದನ ಪಡೆದ ನಂತರ ಹಲವು ಬಾರಿ ಈ ನಟನ ಮದುವೆ ಬಗ್ಗೆ ಗಾಸಿಪ್ ಪ್ರಾರಂಭವಾಗಿದೆ ಆದರೆ ಈಗ ಆ ಹುಡುಗಿ ಯಾರು ಎಂಬುದು ಇನ್ನೂ ಬಹಿರಂಗವಾಗಿಲ್ಲ. ವರದಿಗಳ ಪ್ರಕಾರ ನಟನ ತಂದೆ ನಾಗಾರ್ಜುನ ಅವರು ತಮ್ಮ ಮಗನನ್ನು ಎರಡನೇ ಬಾರಿಗೆ ಮದುವೆ ಮಾಡಲು ಬಯಸುತ್ತಾರೆ.

Naga Chaitanya Second Marriage
Image Credit: Timesofindia

ಯುವತಿ ವ್ಯಾಪಾರ ಕುಟುಂಬಕ್ಕೆ ಸೇರಿದವರು ಎಂದೂ ಹೇಳಲಾಗುತ್ತಿದೆ. ಆದರೆ ಈ ಕುರಿತು ಇನ್ನೂ ಯಾವುದೇ ಮೂಲ ಮಾಹಿತಿ ಬಂದಿಲ್ಲ. ಆದರೆ, ಹಲವು ಬಾರಿ ಶೋಭಿತಾ ಧೂಳಿಪಾಳ ಅವರ ಹೆಸರು ನಾಗ ಚೈತನ್ಯ ಜೊತೆ ತಳುಕು ಹಾಕಿಕೊಂಡಿದೆ. ಈ ನಟ ಮತ್ತೆ ಸೆಟ್ಲ್ ಆಗುತ್ತಾರೆ ಎಂದು ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿದ್ದಾರೆ.

Leave A Reply

Your email address will not be published.