Narendra Modi: ಎರಡು ಭಾರಿ ಪ್ರಧಾನಿಯಾದ ನರೇಂದ್ರ ಮೋದಿಯವರ ಈಗಿನ ಒಟ್ಟು ಅಸ್ತಿ ಎಷ್ಟು…? ನಿಜಕ್ಕೂ ಗ್ರೇಟ್.
ನರೇಂದ್ರ ಮೋದಿಯವರ ಒಟ್ಟು ಆಸ್ತಿ ಕೇಳಿದರೆ ನಿಮಗೆ ಆಚಾರ್ಯ ಆಗುತ್ತದೆ, ನಂಬಲು ಅಸಾಧ್ಯ.
Narendra Modi Net Worth: ನಮ್ಮ ದೇಶದ ಹೆಮ್ಮೆಯ ಪ್ರದಾನ ಮಂತ್ರಿ ನರೇಂದ್ರ ಮೋದಿಯವರ (Narendra Modi) ಬಗ್ಗೆ ಎಲ್ಲರಿಗೂ ಗೊತ್ತು. ಪ್ರಧಾನಿ ಅಂದರೆ ಚಿಕ್ಕ ಮಗು ಕೂಡ ಮೋದಿ ಅವರ ಹೆಸರನ್ನು ಹೇಳುವುದುಂಟು.
ಸತತ ಎರಡು ಬಾರಿ ಪ್ರಧಾನಿ ಆದ ಇವರು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಅಭಿವೃದ್ಧಿಯತ್ತ ದೇಶವನ್ನು ನೆಡೆಸಿದ್ದಾರೆ. ಎಲ್ಲರ ನೆಚ್ಚಿನ ಪ್ರಧಾನಿಯಾದ ಇವರು ದಿ ಬೆಸ್ಟ್ ಎನಿಸಿಕೊಂಡಿದ್ದಾರೆ. ಪ್ರಧಾನಿ ಅಂದ ಮೇಲೆ ಅವರ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇರುತ್ತದೆ. ಹಾಗಾಗಿ ಅವರು ಹೊಂದಿರುವ ಆಸ್ತಿ ಅಂತಸ್ತಿನ ಬಗ್ಗೆ ತಿಳಿಯೋಣ.
ಮೋದಿಯವರ ಆಸ್ತಿಯಾ ವಿವರ
2022-2023ರ ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಲ್ಲಿಸಿರುವ ಆಸ್ತಿ ಮತ್ತು ಸಾಲದ ವಿವರಗಳನ್ನು ಗಮನಿಸಿದರೆ ಅವರ ಒಟ್ಟು ಆಸ್ತಿ ಮೌಲ್ಯ ರೂ.2.59 ಕೋಟಿ. ಇಷ್ಟು ವರ್ಷಗಳ ಕಾಲ ಅಧಿಕಾರದಲ್ಲಿರುವ ನರೇಂದ್ರ ಮೋದಿಯವರ ಆಸ್ತಿ ಇಷ್ಟು ಕಡಿಮೆ ಎಂದರೆ ನಂಬುವುದು ಕಷ್ಟವಾದರೂ ಸತ್ಯ.
ಕಳೆದ ವರ್ಷ ಅಂದರೆ 2021-2022ರ ಆರ್ಥಿಕ ವರ್ಷದಲ್ಲಿ ಪ್ರಧಾನಿ ಮೋದಿಯವರ ಆಸ್ತಿ 2.24 ಕೋಟಿ ರೂ. ಈ ವರ್ಷ ಶೇ.15.69 ಅಂದರೆ ರೂ. 35,13,940/- ಏರಿಕೆಯಾಗಿ 2.59 ಕೋಟಿ ತಲುಪಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ ಆಸ್ತಿ ಲೆಕ್ಕಪತ್ರದಲ್ಲಿ ತಿಳಿದು ಬಂದಿದೆ. ಆದರೆ ಪ್ರಧಾನಿ ಮೋದಿಯವರ ಬಳಿ ಒಂದಷ್ಟು ಹಣವಿದೆ. ಇದಲ್ಲದೆ, ಬ್ಯಾಂಕ್ ಸ್ಥಿರ ಠೇವಣಿ, ಬಹು-ಆಯ್ಕೆ ಠೇವಣಿ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು ಮತ್ತು 4 ಚಿನ್ನದ ಉಂಗುರಗಳಿವೆ.
ಮೋದಿಯವರ ಹೆಸರಲ್ಲಿ ಯಾವುದೇ ಸ್ಥಿರ ಅಥವಾ ಚರ ಆಸ್ತಿ ಇಲ್ಲ
ತಮ್ಮ ಹೆಸರಿನಲ್ಲಿ ಯಾವುದೇ ಸ್ಥಿರ ಅಥವಾ ಚರ ಆಸ್ತಿ ಇಲ್ಲ ಎಂದು ಪ್ರಧಾನಿ ಮೋದಿ ಬಹಿರಂಗಪಡಿಸಿದ್ದಾರೆ. ಆದರೆ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಎಲ್‌ಐಸಿ ಪಾಲಿಸಿಗಳಿದ್ದವು ಆದರೆ ಈ ಬಾರಿ ಎಲ್ಲಿಯೂ ಉಲ್ಲೇಖವಾಗಿಲ್ಲ. ಗುಜರಾತ್‌ನ ಗಾಂಧಿನಗರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ-ಎಸ್‌ಬಿಐ ಎನ್‌ಎಸ್‌ಸಿ ಶಾಖೆಯಲ್ಲಿ ಪ್ರಧಾನಿ ಮೋದಿಯವರ ಶೇಕಡಾ 95.55 ರಷ್ಟು ಆಸ್ತಿ ಎಫ್‌ಡಿಆರ್ ಮತ್ತು ಎಂಒಡಿ ರೂಪದಲ್ಲಿದೆ.
ಹಿಂದಿನ ವರ್ಷಕ್ಕೆ ಹೋಲಿಸಿದರೆ ಮೌಲ್ಯದಲ್ಲಿ ಶೇ.17.64ರಷ್ಟು ಹೆಚ್ಚಳವಾಗಿದೆ. ಮತ್ತು ಕಳೆದ ವರ್ಷ ಇದೇ SBI ಶಾಖೆಯಲ್ಲಿ ಮತ್ತೊಂದು ಖಾತೆಯಲ್ಲಿ ರೂ. 46 ಸಾವಿರ ಇದ್ದಾಗ ಅದರಲ್ಲಿ ರೂ. 574 ಇಳಿಕೆಯಾಗಿದೆ ಎಂದು ತಿಳಿದುಬಂದಿದೆ. ಠೇವಣಿ ಮತ್ತು ಅಂಚೆ ಉಳಿತಾಯ ಪ್ರಮಾಣ ಪತ್ರಗಳ ಮೌಲ್ಯ ಈ ಬಾರಿ ಹೆಚ್ಚಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪತ್ನಿ ಜಸೋದಾಬೆನ್ ಹೆಸರಿನಲ್ಲಿರುವ ಯಾವುದೇ ಆಸ್ತಿಯ ವಿವರ ನನಗೆ ತಿಳಿದಿಲ್ಲ ಎಂದು ತಿಳಿಸಿದ್ದಾರೆ.