Naresh Babu Son: ಪವಿತ್ರ ಲೋಕೇಶ್ ಜೊತೆ ಅಪ್ಪನ ಮದುವೆಯ ಬಗ್ಗೆ ಮಾತನಾಡಿದ ನರೇಶ್ ಬಾಬು ಮಗ, ಹೇಳಿದ್ದೇನು ಗೊತ್ತಾ…?
ನರೇಶ್ ಬಾಬು ಅವರ ನಾಲ್ಕನೇ ಮದುವೆ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ನವೀನ ವಿಜಯ್ ಕೃಷ್ಣ.
Naresh Son Naveen About His Father Marriage: ಟಾಲಿವುಡ್ ನ ಹಿರಿಯ ನಟರಾದ ನರೇಶ್ ಬಾಬು (Naresh Babu) ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ 60 ವರ್ಷದ ನರೇಶ್ ಬಾಬು ಅವರು ಪವಿತ್ರ ಲೋಕೇಶ್ (Pavitra Lokesh) ಅವರನ್ನು ಮದುವೆಯಾಗುದಾಗಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿತ್ತು.
ಈ ನಟನ ನಾಲ್ಕನೇ ಮದುವೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ನರೇಶ್ ಮತ್ತು ಪವಿತ್ರ ಲೋಕೇಶ್ ಅವರ ಪ್ರೇಮ ಕತೆ ಮದುವೆ ಸಿನಿಮಾ ಆಗಿ ತೆರೆ ಮೇಲೆ ಬಂದಿತ್ತು. ಈ ವಿವಾದಾತ್ಮಕ ಚಿತ್ರಕ್ಕೆ ನೋಡುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. OTT ಅಲ್ಲೂ ಸಹ ಚಿತ್ರ ಸ್ಟ್ರಿಮಿಂಗ್ ಕಂಡಿದೆ.

ನರೇಶ್ ಅವರ ನಾಲ್ಕನೇ ಮದುವೆ ಗೆ ಮೂರನೇ ಪತ್ನಿಯ ವಿರೋಧ
ನರೇಶ್ ಬಾಬು ಹಾಗೂ ಪವಿತ್ರ ಲೋಕೇಶ್ ಅವರ ಮದುವೆಗೆ ನರೇಶ್ ಅವರ ಮೂರನೇ ಪತ್ನಿ ವಿರೋಧ ವ್ಯಕ್ತ ಪಡಿಸಿ, ಡಿವೋರ್ಸ್ ನೀಡುದಿಲ್ಲ ಎಂದಿದ್ದಾರೆ ಆದರೆ ನರೇಶ್ ಬಾಬು ಅವರು ಮದುವೆ ಆಗಲು ವಯಸ್ಸು ಹೆಚ್ಚಿರಬಹುದು ಆದರೆ ಪ್ರೀತಿಗೆ ವಯಸ್ಸಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ತಂದೆಯ ನಾಲ್ಕನೇ ಮದುವೆ ಬಗ್ಗೆ ಮೌನ ಮುರಿದ ನವೀನ್ ವಿಜಯ್ ಕೃಷ್ಣ
ನರೇಶ್ ಬಾಬು ಅವರ ನಾಲ್ಕನೇ ಮದುವೆಗೆ ಅವರ ಮಗ ನವೀನ್ ವಿಜಯ್ ಕೃಷ್ಣ ಅವರು ಇಲ್ಲಿಯ ತನಕ ಮೌನವಾಗಿದ್ದರು. ಆದರೆ ಈಗ ತಂದೆಯ ನಾಲ್ಕನೇ ಮದುವೆಯ ಬಗ್ಗೆ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.

“ಮಗನಾಗಿ ನಾನು ನಮ್ಮ ತಂದೆ ಯಾವಾಗಲು ಸಂತೋಷವಾಗಿರಲಿ ಎಂದು ಬಯಸುತ್ತೇನೆ, ಅವರು ಏನು ಮಾಡಬೇಕೆನ್ನುದು ಅವರಿಗೆ ಚೆನ್ನಾಗಿ ತಿಳಿದಿದೆ, ನಮ್ಮ ತಂದೆ ಏನು ಇಷ್ಟಪಡುತ್ತಾರೋ ಅದನ್ನೇ ಮಾಡಲಿ ಎಂದು ನಾನು ಭಾವಿಸುತ್ತೇನೆ, ಅನೇಕ ಜನರು ಕಾಮೆಂಟ್ ಗಳ ಯುಗದಲ್ಲಿ ಬದುಕುತ್ತಿದ್ದಾರೆ, ಆದರೆ ಎಲ್ಲರನ್ನು ಮೆಚ್ಚಿಸುದು ಕಷ್ಟ, ನನಗೆ ಪವಿತ್ರ ಲೋಕೇಶ್ ಅವರು ಬಹಳ ಹಿಂದಿನಿಂದಲೂ ಗೊತ್ತು, ಅವರು ತುಂಬಾ ಶಾಂತ ಸ್ವರೂಪದ ಮಹಿಳೆ ಸಾಕಷ್ಟು ಸ್ಟ್ರಾಂಗ್ ಆಗಿದ್ದಾರೆ, ಅವರಂತವರು ಬಹಳ ಕಡಿಮೆ ಎಂದು ಪವಿತ್ರ ಲೋಕೇಶ್ ಅವರನ್ನು ಕೊಂಡಾಡಿದ್ದಾರೆ.
ನರೇಶ್ ಬಾಬು ಅವರ ಮಗಾ ನವೀನ್ ಅವರ ಮಾತು ಕೇಳಿದರೆ ಅವರು ತಂದೆಯ ಮದುವೆಗೆ ಅಡ್ಡಿಪಡಿಸುದಿಲ್ಲ ಎನ್ನುದು ಖಚಿತವಾಗಿದೆ. ನರೇಶ್ ಬಾಬು ಅವರಿಗೆ ಈಗಾಗಲೇ ಮೂರು ಜನ ಮಕ್ಕಳಿದ್ದಾರೆ.