WhatsApp: ವಾಟ್ಸಪ್ ಗ್ರೂಪ್ ಅಡ್ಮಿನ್ ಗಳಿಗೆ ಇನ್ನೊಂದು ಹೊಸ ಫೀಚರ್, ಇನ್ನುಮುಂದೆ ನಿಮ್ಮ ಆಯ್ಕೆ ಅಂತಿಮ.
ಶೀಘ್ರದಲ್ಲೇ ವಾಟ್ಸಾಪ್‌ಗೆ ಸೇರಲಿದೆ ಹೊಸ ಫೀಚರ್ಸ್.
New Feature In WhatsApp Group: ಇದೀಗ ದೇಶದಲ್ಲಿ ಮೇಟಾ ಮಾಲೀಕತ್ವದ ವಾಟ್ಸಾಪ್ (WhatsApp) ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಬಳಕೆದಾರರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಇದೀಗ ವಾಟ್ಸಾಪ್ ಒಂದು ಹೊಸ ಫೀಚರ್ ಅನ್ನು ಶ್ರೀಘ್ರದಲ್ಲೇ ಬಿಡುಗಡೆ ಗೊಳಿಸುವ ಬಗ್ಗೆ ಮಾಹಿತಿ ಲಭಿಸಿದೆ.

ವಾಟ್ಸಾಪ್ ಗ್ರೂಪ್ ನಲ್ಲಿ ಹೊಸ ಫೀಚರ್
ವಾಟ್ಸಾಪ್ ನ ಈ ಹೊಸ ಫೀಚರ್ ಗ್ರೂಪ್ ಸೇರುವವರಿಗೆ ಅನುಕೂಲವಾಗಲಿದೆ. ಹೌದು ವಾಟ್ಸಾಪ್ ಗ್ರೂಪ್ (WhatsApp Group) ಸೇರುವ ಬಳಕೆದಾರರಿಗೆ ಈ ಹೊಸ ಫೀಚರ್ ಸದ್ಯದಲ್ಲೇ ಬಿಡುಗಡೆಯಗಲಿದೆ. ಇದು ವಾಟ್ಸಾಪ್ ಗ್ರೂಪ್ ಗೆ ನೀವು ಸೇರಬೇಕೇ ಬೇಡವೇ ಎಂಬುದನ್ನು ನಿರ್ಧಾರಿಸಲು ಸಹಾಯ ಮಾಡುತ್ತದೆ.
ವಾಟ್ಸಾಪ್ ಗೆ ಸೇರಲಿರುವ ಈ ಹೊಸ ಫೀಚರ್ ಗ್ರೂಪ್ ಗೆ ಹೊಸ ಸದಸ್ಯರು ಸೇರುವಾಗ ಅನುಕೂಲವಾಗುತ್ತದೆ. ಇದನ್ನ ವಾಟ್ಸಾಪ್ ಗ್ರೂಪ್ ಅಡ್ಮಿನ್ ಮಾತ್ರ ಸಕ್ರಿಯ ಗೊಳಿಸಲು ಸಾಧ್ಯ. ಈ ಫೀಚರ್ ನ ಹೆಸರು “ ರೀಸೆಂಟ್ ಹಿಸ್ಟರಿ ಸೇರಿಂಗ್” ಅಂದರೆ ಹೊಸದಾಗಿ ಸೇರಿದ ಸದಸ್ಯರಿಗೆ ಇತ್ತೀಚಿನ ಯಾವೆಲ್ಲಾ ಸಂದೇಶಗಳನ್ನ ನೀಡಲಾಗಿದೆ ಎಂಬುದನ್ನು ತಿಳಿಸುತ್ತದೆ. ಇದು ಎಲ್ಲಾ ಬಳಕೆದಾರರಿಗೂ ಯಾವಾಗ ಬರುತ್ತದೆ ಎಂದು ಮಾಹಿತಿ ತಿಳಿದುಬಂದಿಲ್ಲ.

ಇತ್ತೀಚಿಗೆ ವಾಟ್ಸಾಪ್ ಬಳಕೆದಾರರು ಹೊಸ ಚಾನೆಲ್ ಗೆ ಸೇರಿದಾಗ 30 ದಿನಗಳ ಹಿಂದಿನ ಸಂದೇಶಗಳನ್ನು ನೋಡಲು ಅವಕಾಶ ನೀಡಿತ್ತು ಆದರೆ ಈಗ ಈ ಫೀಚರ್ ಚಾನಲ್ ಗಿಂತ ಭಿನ್ನವಾಗಿದ್ದು ರೀಸೆಂಟ್ ಹಿಸ್ಟರಿ ಸೇರಿಂಗ್ ಫೀಚರ್ 24 ಗಂಟೆಗಳ ಕಡಿಮೆ ವಿಂಡೋವನ್ನು ನೀಡಲಿದೆ. ಈಗಾಗಲೇ ಹೇಳಿರುವಂತೆ ಈ ಫೀಚರ್ ಅನ್ನು ಗ್ರೂಪ್ ಅಡ್ಮಿನ್ ಮಾತ್ರ ಸಕ್ರಿಯಗೊಳಿಸಲು ಸಾಧ್ಯ, ಗ್ರೂಪ್ ಅಡ್ಮಿನ್ ಆಕ್ಟಿವ್ ಮಾಡಿದರೆ ಸದಸ್ಯರಿಗೆ ಈ ಫೀಚರ್ ನಲ್ಲಿ ಆನ್ ಆಗಿರುವ ಸಂದೇಶ ಕಾಣುತ್ತದೆ.